ಶನಿ-ಶುಕ್ರರ ಕೃಪೆಯಿಂದ `ಕೇಂದ್ರ ರಾಜಯೋಗ` ರಚನೆ, ಹೊಸ ವರ್ಷದಲ್ಲಿ ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿ!

Sat, 30 Dec 2023-3:11 pm,

Horoscope 2024: ಹೊಸ ವರ್ಷಾರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ, ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷದಲ್ಲಿ ಕೇಂದ್ರ ಯೋಗ ನಿರ್ಮಾಣದಿಂದ ಕೆಲ ರಾಶಿಗಳ ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಗೋಚರಿಸಲಿದೆ. (Spiritual News In Kannada)  

ವೃಷಭ ರಾಶಿ: ಕೇಂದ್ರ ಯೋಗ ನಿರ್ಮಾಣದಿಂದ ವೃಷಭ ರಾಶಿಯ ಜಾತಕದವರ ಮೇಲೆ ಧನದಾತ ಶುಕ್ರ ಹಾಗೂ ಶನಿದೇವನ ವಿಶೇಷ ಕೃಪೆ ಇರಲಿದೆ. ನೌಕರವರ್ಗದ ಜನರಿಗೆ ಕೆಲಸದಲ್ಲಿ ಪ್ರಶಂಸೆ ಸಿಗಲಿದೆ. ಪದೋನ್ನತಿ ಹಾಗೂ ದೊಡ್ಡ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಕೌಟುಂಬಿಕ ಬಿಸ್ನೆಸ್ ನಲ್ಲಿ ಭಾರಿ ಲಾಭ ಸಿಗಲಿದೆ. ಹೊಸ ಬಿಸ್ನೆಸ್ ಆರಂಭಿಸಲು ಈ ಅವಧಿ ಅತ್ಯಂತ ಸೂಕ್ತವಾಗಿದೆ. ಅದರಿಂದ ನಿಮಗೆ ಅಧಿಕ ಲಾಭ ಸಿಗಲಿದೆ. ಶನಿದೇವನ ಕೃಪೆಯಿಂದ ಜೀವನದಲ್ಲಿ ಸಕಾರಾತ್ಮಕ ಪ್ರಭಾವ ಗೋಚರಿಸಲಿದೆ. 

ಧನು ರಾಶಿ: ಕೇಂದ್ರ ರಾಜಯೋಗ ನಿಮ್ಮ ಪಾಲಿಗೆ ವಿಶೇಷ ಲಾಭದಾಯಕ ಸಾಬೀತಾಗಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಅಪಾರ ಹೆಚ್ಚಾಗಲಿದೆ. ಶತ್ರುಗಳ ಮೇಲೆ ಹಿಡಿತ ಸಾಧಿಸುವಲ್ಲಿ ನೀವು ಯಶಸ್ವಿಯಾಗುವಿರಿ. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ನಿಮಗೆ ಸಿಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ, ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಸದಭಿರುಚಿ ಹೆಚ್ಚಾಗಲಿದೆ. ಸಂಪತ್ತು-ವಾಹನ ಖರೀದಿಸುವ ಅವಕಾಶ ನಿಮಗೆ ಕೂಡಿಬರಲಿದೆ.   

ಕುಂಭ ರಾಶಿ: ಶನಿ ಹಾಗೂ ಶುಕ್ರರ ಕೃಪೆಯಿಂದ ನಿರ್ಮಾಣಗೊಳ್ಳುತ್ತಿರುವ ಕೇಂದ್ರ ರಾಜಯೋಗ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ಹೊಸವರ್ಷದಲ್ಲಿ ಇದರಿಂದ ನಿಮಗೆ ಅಪಾರ ಲಾಭ ಸಿಗಲಿದೆ. ಜೀವನದಲ್ಲಿ ಹಲವು ರೀತಿಯ ಆನಂದದ ಕ್ಷಣಗಳು ಇರಲಿವೆ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ. ಇದಲ್ಲದೆ ಸ್ಥಾನಮಾನ-ಪ್ರತಿಷ್ಠೆ ಪ್ರಾಪ್ತಿಯಾಗಲಿದೆ. ಹೊಸ ಜನರ ಜೊತೆಗೆ  ನಿಮ್ಮ ಒಡನಾಟ ಹೆಚ್ಚಾಗಲಿದೆ. ಸಣ್ಣ ವ್ಯಾಪಾರ ಮಾಡುವವರಿಗೆ ಅಧಿಕ ಲಾಭ ಸಿಗಲಿದೆ. ದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಒಂಟಿಯಾಗಿರುವವರಿಗೆ ವಿವಾಹ ಪ್ರಸ್ತಾಪ ಸಿಗುವ ಸಾಧ್ಯತೆ ಇದೆ. ಹಳೆ ಮತ್ತು ನಿಮಗೆ ಬರೆಬೇಕಾದ ಹಣ ನಿಮ್ಮತ್ತ ಮರಳಲಿದೆ. ಅವಿವಾಹಿತರು ಹೊಸ ವರ್ಷಾಂತ್ಯದಲ್ಲಿ ವಿವಾಹ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link