ಹೊಸ ವರ್ಷಾರಂಭದಲ್ಲಿ ಕರ್ಮ ಫಲದಾತನ ಉದಯ, ಈ ರಾಶಿಗಳ ಜನರ ಮೇಲೆ ಭಾರಿ ಕನಕವೃಷ್ಟಿ!
Horoscope 2024: ಹೊಸ ವರ್ಷದ ಆರಂಭದಲ್ಲಿಯೇ ಕರ್ಮ ಫಲದಾತ ಶನಿ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಭಾರಿ ಧನಲಾಭ ಉಂಟಾಗಲಿದ್ದು, ಶನಿ ಅವರ ಅದೃಷ್ಟವನ್ನು ಬೆಳಗಲಿದ್ದಾನೆ. (Spiritual News In Kannada)
ವೃಷಭ ರಾಶಿ: ಶನಿಯ ಈ ನಡೆ ಬದಲಾವಣೆ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸ-ಕಾರ್ಯಗಳಲ್ಲಿ ನಿಮಗೆ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ. ಮಾರ್ಚ್ 18ರ ಶನಿ ಉದಯದಿಂದ ನಿಮಗೆ ಹೊಸ ನೌಕರಿಯ ಪ್ರಸ್ತಾವನೆ ಬರುವ ಸಾಧ್ಯತೆ ಇದೆ. ನೌಕರ ವರ್ಗದ ಜನರಿಗೆ ಪದೋನ್ನತಿ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಕಾರ್ಯ ಕ್ಷೇತ್ರದಲ್ಲಿ ನಿಮಗೆ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಭಾರಿ ಧನಲಾಭದ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ. ಹೊಸ ವ್ಯಾಪಾರ ಒಪ್ಪಂದಗಳನ್ನು ನೀವು ಮಾಡಿಕೊಳ್ಳುವ ಸಾಧ್ಯತೆ ಇದೆ. ದೇಶ ವಿದೇಶಕ್ಕೆ ಯಾತ್ರೆ ಸಂಭವಿಸಬಹುದು.
ಸಿಂಹ ರಾಶಿ: ಈ ಅವಧಿಯಲ್ಲಿ ನೀವು ಹೊಸ ವ್ಯಾಪಾರ ಆರಂಭಿಸುವ ಸಾಧ್ಯತೆ ಇದೆ. ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಲಿವೆ. ವಿವಾಹಿತರಿಗೆ ಬಾಳಸಂಗಾತಿ ಬೆಂಬಲ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ಉನ್ನತಿಯ ಎಲ್ಲಾ ಯೋಗಗಳು ಗೋಚರಿಸುತ್ತಿವೆ. ಮುಂಬರುವ ವರ್ಷದಲ್ಲಿ ನಿಮಗೆ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಹೊಸ ನೌಕರಿಯ ಪ್ರಸ್ತಾವನೆ ಸಿಗುವ ಸಾಧ್ಯತೆ ಇದೆ. ಇದಲ್ಲದೆ ಶನಿ ನಿಮ್ಮ ಗೋಚರ ಜಾತಕದಲ್ಲಿ ಶಶ ಮಹಾಪುರುಷ ರಾಜಯೋಗ ಕೂಡ ನಿರ್ಮಿಸಿದ್ದಾನೆ. ಇದರಿಂದ ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಶನಿ ನಿಮ್ಮ ಜಾತಕದ ಶಷ್ಟಮ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ಕೋರ್ಟ್-ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗಲಿದೆ. ನಿಮ್ಮ ಶತ್ರುಗಳ ಮೇಲೆ ಯಶಸ್ಸನ್ನು ಸಾಧಿಸುವಿರಿ.
ಕುಂಭ ರಾಶಿ: ಶನಿ ನಿಮ್ಮ ರಾಶಿಗೆ ರಾಶ್ಯಾಧಿಪನಾಗಿದ್ದಾನೆ ಮತ್ತು ಸ್ವರಾಶಿಯಲ್ಲಿಯೇ ಆತ ತನ್ನ ಈ ಎಲ್ಲಾ ನಡೆಗಳನ್ನು ಬದಲಿಸಲಿದ್ದಾನೆ. ಹೀಗಿರುವಾಗ ಈ ಅವಧಿಯಲ್ಲಿ ನಿಮಗೆ ನಿಮ್ಮ ಪರಿಶ್ರಮದ ಸಂಪೂರ್ಣ ಫಲ ಲಭಿಸಲಿದೆ. ಸಮಾಜದಲ್ಲಿ ನಿಮ್ಮ ಘನತೆ ಗೌರವ ಪ್ರತಿಷ್ಠೆ ಹೆಚ್ಚಾಗಲಿದೆ. ಗಣ್ಯ ವ್ಯಕ್ತಿಗಳ ಜೊತೆಗೆ ನಿಮ್ಮ ಒಡನಾಟ ಹೆಚ್ಚಾಗಲಿದೆ ಮತ್ತು ಅದು ನಿಮಗೆ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. ಪ್ರೊಫೆಶ್ನಲ್ ಲೈಫ್ ನಲ್ಲಿಯೂ ಕೂಡ ಉನ್ನತಿಯಾಗಲಿದೆ. ಹಣಗಳಿಕೆಯ ಸಾಕಷ್ಟು ಅವಕಾಶಗಳು ನಿಮಗೆ ಒದಗಿ ಬರಲಿವೆ. ಮಾರ್ಚ್ ಬಳಿಕ ನೌಕರ ವರ್ಗದ ಜನರಿಗೆ ಪ್ರಮೋಷನ್-ಇಂಕ್ರಿಮೆಂಟ್ ಸಿಗುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)