ವರ್ಷ 2024ರಲ್ಲಿ ಮೂರು ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ ಕರುಣಿಸಲಿದ್ದಾನೆ ಮಂಗಳ, ವೃತ್ತಿ ಜೀವನದಲ್ಲಿ ಅಪಾರ ಉನ್ನತಿಯ ಯೋಗ!
Horoscope 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಗ್ರಹಗಳ ಸೇನಾಪತಿಯಾಗಿರುವ ಮಂಗಳ ತನ್ನ ಸ್ನೇಹಿತನ ರಾಶಿಯಾಗಿರುವ ಧನು ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರ ಭಾಗ್ಯ ಚಿನ್ನದಂತೆ ಹೊಳೆಯಲಿದೆ. (Spiritual News In Kannada)
ಧನು ರಾಶಿ: ಈ ಅವಧಿಯಲ್ಲಿ ಮಂಗಳ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ನಿಮ್ಮ ಸಾಹಸ-ಪರಾಕ್ರಮದಲ್ಲಿ ವೃದ್ಧಿಯಾಗಲಿದೆ. ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ. ಇದರಿಂದ ನಿಮ್ಮ ಕಾರ್ಯಶೈಲಿಯಲ್ಲಿ ಹೊಸ ಹುರುಪು-ಚೈತನ್ಯವನ್ನು ನೀವು ಗಮನಿಸಬಹುದು. ಇದಲ್ಲದೆ ನಿಮ್ಮ ಪಿತ್ರಾರ್ಜಿತ ಸಂಪತ್ತಿನಲ್ಲಿಯೂ ಕೂಡ ವೃದ್ಧಿ ಇರಲಿದೆ. ನೌಕರವರ್ಗದ ಜನರಿಗೆ ಪದೋನ್ನತಿ, ವೃತ್ತಿಜೀವನದಲ್ಲಿ ಉತ್ತಮ ಅವಕಾಶಗಳು ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಬಾಳಸಂಗಾತಿಯ ಜೊತೆಗಿನ ನಿಮ್ಮ ಸಂಬಂಧದಲ್ಲಿ ಸುಮಧುರತೆ ಇರಲಿದ್ದು, ಅವರ ಉನ್ನತಿಯ ಯೋಗ ಕೂಡ ರೂಪುಗೊಳ್ಳುತ್ತಿದೆ.
ವೃಶ್ಚಿಕ ರಾಶಿ: ಮಂಗಳ ನಿಮ್ಮ ರಾಶಿಯ ಅಧಿಪತಿಯಾಗಿದ್ದಾನೆ ಮತ್ತು ಈ ಅವಧಿಯಲ್ಲಿ ಆತ ನಿಮ್ಮ ಗೋಚರ ಜಾತಕದ ಧನಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಅಪಾರ ಸುಧಾರಣೆ ಕಂಡುಬರಲಿದೆ. ಅಪ್ರತ್ಯಕ್ಷ ಧನಲಾಭದ ಯೋಗ ಕೂಡ ಇದೆ. ಇನ್ನೊಂದೆಡೆ ಈ ಅವಧಿಯಲ್ಲಿ ನಿಮ್ಮ ಮಾತಿನ ಪ್ರಭಾವ ಹೆಚ್ಚಾಗಲಿದ್ದು, ಜನರು ನಿಮ್ಮತ್ತ ಆಕರ್ಷಿತರಾಗಲಿದ್ದಾರೆ. ವಿದೇಶ ವ್ಯಾಪಾರ ಸಂಬಂಧ ಹೊಂದಿದವರಿಗೆ ಭಾರಿ ಲಾಭದ ಸಂಕೇತಗಳಿವೆ. ನಿಮ್ಮ ಜಾತಕದ ಶಷ್ಟಮ ಭಾವಕ್ಕೆ ಮಂಗಳ ಅಧಿಪತಿಯಾಗಿರುವ ಕಾರಣ ಈ ಅವಧಿಯಲ್ಲಿ ನಿಮಗೆ ಕೋರ್ಟ್-ಕಚೇರಿ ವ್ಯವಹಾರಗಳಲ್ಲಿ ವಿಜಯ ನಿಮ್ಮದಾಗಲಿದೆ.
ಸಿಂಹ ರಾಶಿ: ಈ ಅವಧಿಯಲ್ಲಿ ಮಂಗಳ ನಿಮ್ಮ ಜಾತಕದ ಪಂಚಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಮಕ್ಕಳ ಕಡೆಯಿಂದ ಸಂತಸದ ಸುದ್ದಿ ಸಿಗುವ ಸಾಧ್ಯತೆ ಇದೆ. ಅರ್ಥಾತ್ ಮಕ್ಕಳಿಗೆ ವಿವಾಹ ಅಥವಾ ನೌಕರಿ ಭಾಗ್ಯ ಪ್ರಾಪ್ತಿಯಾಗುವ ಸಂಕೇತಗಳಿವೆ. ಭೂಮಿ, ವಾಹನ ಹಾಗೂ ಕೌಟುಂಬಿಕ ಸುಖ ಪ್ರಾಪ್ತಿಯಾಗಲಿದೆ. ಪ್ರೇಮ ಸಂಬಂಧಗಳಲ್ಲಿ ಯಶಸ್ಸು ಸಿಗಲಿದೆ. ಆಕಸ್ಮಿಕ ಧನಲಾಭದ ಯೋಗ ಕೂಡ ರೂಪುಗೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಉನ್ನತ ಕೋರ್ಸ್ ಗೆ ಪ್ರವೇಶ ಸಿಗುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)