ಪಾಕಿಸ್ತಾನದ ಟ್ರೈನ್ಸ್ ಇಂಡಿಯನ್ ರೈಲುಗಳಿಗಿಂತ ವಿಭಿನ್ನ ಹೇಗೆ?
ಭಾರತೀಯ ರೈಲ್ವೆಗೆ ಹೋಲಿಸಿದರೆ ಪಾಕಿಸ್ತಾನ ರೈಲ್ವೆ ಬಹಳ ಹಿಂದುಳಿದಿದೆ.
ಮೇಲ್ನೋಟಕ್ಕೆ ಬಣ್ಣವನ್ನು ಹೊರತುಪಡಿಸಿ ಭಾರತೀಯ ರೈಲ್ವೆ ಹಾಗೂ ಪಾಕಿಸ್ತಾನದ ರೈಲ್ವೆ ನಡುವೆ ಹೆಚ್ಚು ವ್ಯತ್ಯಾಸ ಕಾಣದಿದ್ದರೂ ಭಾರತದ ರೈಲುಗಳು ಪಾಕ್ ರೈಲುಗಳಿಗಿಂತ ಹೆಚ್ಚಿನ ಮೂಲಸೌಕರ್ಯಗಳನ್ನು ಹೊಂದಿದೆ.
ಭಾರತದಲ್ಲಿ ರೈಲ್ವೆ ಉದ್ಯೋಗ ಸಿಕ್ಕರೆ ಅವರೇ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಆದರೆ, ಪಾಕಿಸ್ತಾನದಲ್ಲಿ ಸ್ಥಿತಿ ಬೇರೆಯೇ ಇದೆ. ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಮಾತವಲ್ಲ, ಪಾಕಿಸ್ತಾನವು ತನ್ನ ದೇಶದಲ್ಲಿ ರೈಲುಗಳನ್ನು ಓಡಿಸಲು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದೆ. ಅಷ್ಟೇ ಅಲ್ಲ ರೈಲ್ವೆ ನೌಕರರಿಗೆ ಸಂಬಳ ನೀಡಲು ಕೂಡ ಪಾಕ್ ಪರದಾಡುತ್ತಿದೆ.
ಪಾಕಿಸ್ತಾನದಲ್ಲಿ ಬ್ರಿಟಿಷರ ಕಾಲದಲ್ಲಿಯೇ 1861 ರಲ್ಲಿ ರೈಲು ಸಂಚಾರ ಆರಂಭವಾಯಿತು. ಪ್ರಸ್ತುತ, ಪಾಕಿಸ್ತಾನವು ಸುಮಾರು 11881 ಕಿಲೋಮೀಟರ್‌ಗಳಷ್ಟು ಉದ್ದದ ರೈಲು ಜಾಲವನ್ನು ಹೊಂದಿದೆ.
ಮಾಧ್ಯಮ ವರದಿಗಳ ಪ್ರಕಾರ, ಪಾಕಿಸ್ತಾನ ರೈಲ್ವೆ ಮೂಲಕ ಪ್ರತಿ ವರ್ಷ ಸುಮಾರು 70 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸುತ್ತಾರೆ.