Poor Look of Billionaires: ಅಂಬಾನಿ, ಟ್ರಂಪ್, ಬಿಲ್ ಗೇಟ್ಸ್ ಕಡುಬಡವರಾಗಿದ್ರೆ ಹೇಗೆ ಕಾಣಿಸ್ಬೋದು? ಈ ಫೋಟೋಸ್ ನೋಡಿ
ಡೊನಾಲ್ಡ್ ಟ್ರಂಪ್, ಬಿಲ್ ಗೇಟ್ಸ್, ಮುಖೇಶ್ ಅಂಬಾನಿ, ಮಾರ್ಕ್ ಜುಕರ್‌ಬರ್ಗ್, ವಾರೆನ್ ಬಫೆಟ್, ಜೆಫ್ ಬೆಜೋಸ್ ಮತ್ತು ಎಲೋನ್ ಮಸ್ಕ್ ಅವರಂತಹ ವ್ಯಕ್ತಿಗಳು ಕಡುಬಡವರಾದರೆ ಹೇಗೆ ಕಾಣಿಸಬಹುದು? ಈ ಪ್ರಶ್ನೆಗೆ ಉತ್ತರವನ್ನು ಭಾರತ ಮೂಲಕ ಕಲಾವಿದ ಚಿತ್ರಿಸಿದ್ದು, ನೈಜವಾಗಿ ಕಾಣಿಸುತ್ತಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ AI ತಂತ್ರಜ್ಞಾನದ ಸಹಾಯದಿಂದ ಇತ್ತೀಚಿನ ದಿನಗಳಲ್ಲಿ ಕಲಾವಿದರು ಡಿಜಿಟಲ್ ಕ್ರಿಯೇಷನ್’ಗಳನ್ನು ಮಾಡುತ್ತಿದ್ದಾರೆ. ಇದರ ಮೂಲಕ ಚಿತ್ರಿಸಿದ ಚಿತ್ರಗಳು ನಿಜವೇನೋ ಎಂಬಂತೆ ಕಾಣಿಸುತ್ತವೆ. ಅದಕ್ಕೆ ಪಕ್ಕಾ ಸಾಕ್ಷಿ ಇಂದು ನಾವು ಹೇಳಹೊರಟಿರುವ ಫೋಟೋ ವಿಶ್ಲೇಷಣೆ.
"ಸ್ಲಮ್ ಡಾಗ್ ಬಿಲಿಯನೇರ್‌ಗಳು" ಎಂದು ಶೀರ್ಷಿಕೆ ನೀಡಿ ಕೆಲವೊಂದು ಫೋಟೋಗಳನ್ನು ಕಲಾವಿದ ತನ್ನ ಇನ್’ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾನೆ.
ಈ ಪೋಟೊದಲ್ಲಿ ಒಟ್ಟಾರೆ ಏಳು ಮಂದಿಯ ಫೋಟೋಗಳನ್ನು ಬಳಸಿಕೊಳ್ಳಲಾಗಿದೆ. ಇವರೆಲ್ಲರೂ ಜಗತ್ತಿನ ಬಿಲಿಯನೇರ್’ಗಳು. ಇವರೆಲ್ಲಾ ಕಡುಬಡವರಾಗಿದ್ದರೆ ಹೇಗಿರುತ್ತಿತ್ತು? ಹೇಗೆ ಕಾಣಿಸಿಕೊಳ್ಳಬಹುದು ಎಂಬುದನ್ನು ನೀವೇ ನೋಡಿ.
ಡೊನಾಲ್ಡ್ ಟ್ರಂಪ್, ಬಿಲ್ ಗೇಟ್ಸ್, ಮುಖೇಶ್ ಅಂಬಾನಿ, ಮಾರ್ಕ್ ಜುಕರ್‌ಬರ್ಗ್, ವಾರೆನ್ ಬಫೆಟ್, ಜೆಫ್ ಬೆಜೋಸ್ ಮತ್ತು ಎಲೋನ್ ಮಸ್ಕ್ ಅವರಂತಹ ವ್ಯಕ್ತಿಗಳು ಸಾಮಾನ್ಯವಾಗಿ ಬಡ ವ್ಯಕ್ತಿಗಳು ಧರಿಸುವ ರೀತಿಯ ಉಡುಪನ್ನು ಧರಿಸಿದ್ದಾರೆ. ಕೊಳೆಗೇರಿಯಂತಹ ಪರಿಸರದಲ್ಲಿ ಫೋಟೋಗೆ ಪೋಸ್ ನೀಡಿದಂತೆ ಭಾಸವಾಗುತ್ತದೆ.
ಡೊನಾಲ್ಡ್ ಜಾನ್ ಟ್ರಂಪ್ ಅಮೇರಿಕನ್ ರಾಜಕಾರಣಿ. 2017 ರಿಂದ 2021 ರವರೆಗೆ ಯುನೈಟೆಡ್ ಸ್ಟೇಟ್ಸ್’ನ 45 ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಉದ್ಯಮಿ. ಅಕ್ಟೋಬರ್ 26, 2022 ರವರೆಗೆ $3.2 ಶತಕೋಟಿ ಆದಾಯ ಹೊಂದಿದ್ದಾರೆ ಎಂದು ಫೋರ್ಬ್ಸ್ ಅಂದಾಜಿಸಿದೆ.
ಬಿಲ್ ಗೇಟ್ಸ್ ಒಬ್ಬ ಅಮೇರಿಕನ್ ಉದ್ಯಮಿಯಾಗಿದ್ದು, ಸಾಫ್ಟ್‌ವೇರ್ ಡೆವಲಪರ್, ಹೂಡಿಕೆದಾರ, ಲೇಖಕ ಮತ್ತು ಸಾಮಾಜಿಕ ಕೆಲಸಗಳಲ್ಲಿ ಗುರುತಿಸಿಕೊಂಡ ವ್ಯಕ್ತಿ. ಅವರ ನಿವ್ವಳ ಮೌಲ್ಯ 10,510 ಕೋಟಿ USD ($105.1 ಬಿಲಿಯನ್).
ಮುಖೇಶ್ ಅಂಬಾನಿ ಅವರು ಭಾರತೀಯ ಉದ್ಯಮಿ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್’ನ ವ್ಯವಸ್ಥಾಪಕ ನಿರ್ದೇಶಕ ಕೂಡ ಹೌದು. ಇವರು $ 82.9 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಮಾರ್ಕ್ ಜುಕರ್‌ಬರ್ಗ್ ಅವರು ಅಮೇರಿಕನ್ ಮಾಧ್ಯಮದ ಉದ್ಯಮಿ, ಇಂಟರ್ನೆಟ್ ಉದ್ಯಮಿ, ಬಿಲಿಯನೇರ್ ಕೂಡ ಹೌದು, ಅವರು 2023 ರಲ್ಲಿ 47.20 ಬಿಲಿಯನ್ ಯುಎಸ್‌ಡಿ ಹೊಂದಿದ್ದಾರೆ.
ವಾರೆನ್ ಬಫೆಟ್ ಒಬ್ಬ ಅಮೇರಿಕನ್ ಉದ್ಯಮಿಯಾಗಿದ್ದು, ಅವರು $108 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಜೆಫ್ ಬೆಜೋಸ್ ಒಬ್ಬ ಅಮೇರಿಕನ್ ವಾಣಿಜ್ಯೋದ್ಯಮಿಯಾಗಿದ್ದು, ಅವರು $123.70 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ
ಎಲೋನ್ ಮಸ್ಕ್ ನಿವ್ವಳ ಮೌಲ್ಯ 14630 ಕೋಟಿ USD. ಅಂದರೆ ಭಾರತೀಯ ಕರೆನ್ಸಿಯಲ್ಲಿ 12.10 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. 21ನೇ ಶತಮಾನದ ಆಧುನಿಕ ಯುಗದ ಆಟೋಮೊಬೈಲ್‌ಗಳು ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ವಿಕಾಸ ಮತ್ತು ಮಹಾನ್ ಕ್ರಾಂತಿಯನ್ನು ಸಾಧಿಸಿದ ವ್ಯಕ್ತಿ ಎಂದರೆ ಅದು ಮಸ್ಕ್ ಮಾತ್ರ ಎನ್ನಬಹುದು. .