ನಟಿ ಅನುಷ್ಕಾ ಶರ್ಮಾ ಕಂಡು ಮೊದಲು ಭಯಪಟ್ಟಿದ್ದ ವಿರಾಟ್ ಕೊಹ್ಲಿ ಮದುವೆ ಪ್ರಸ್ತಾಪ ಮಾಡಿದ್ದೇಗೆ? ಫಸ್ಟ್ ಟೈಮ್ ಹೀಗೆ ಪ್ರಪೋಸ್ ಮಾಡಿದ್ರಂತೆ ಕಿಂಗ್!
ನಟಿ ಅನುಷ್ಕಾ ಹಾಗೂ ವಿರಾಟ್ ಮೊದಲು ಭೇಟಿಯಾಗಿದ್ದು, ಜಾಹೀರಾತುವೊಂದರ ಶೂಟಿಂಗ್‌ನಲ್ಲಿ.. ಆ ವೇಳೆ ವಿರಾಟ್ ಅನುಷ್ಕಾ ಅವರೊಂದಿಗೆ ಶೂಟಿಂಗ್ ಮಾಡಲು ಭಯಬಿದ್ದಿದ್ದರಂತೆ.. ಹಾಗಾದ್ರೆ ಇವರಿಬ್ಬರಲ್ಲಿ ಮೊದಲು ಪ್ರಪೋಸ್ ಮಾಡಿದ್ದ? ಈ ಬಗ್ಗೆ ಕೊಹ್ಲಿ ಹೇಳಿಕೊಂಡಿದ್ದರು..
ವಿರಾಟ್ ಹಾಗೂ ಅನುಷ್ಕಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ.. ಕ್ರಿಕೆಟ್ ಮೈದಾನದಲ್ಲಿ ಎದುರಾಳಿಗಳಿಗೆ ಬೆವಳಿಸುವ ವಿರಾಟ್ ಅನುಷ್ಕಾ ಪ್ರೇಮದ ಲೋಕದಲ್ಲಿ ಅವರನ್ನು ನೋಡಿಯೇ ಭಯಬಿದ್ದಿದ್ದರಂತೆ ಇದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದರು.
ಎಬಿ ಡಿವಿಲಿಯರ್ಸ್ ಜೊತೆಗಿನ ಸಂಭಾಷಣೆಯಲ್ಲಿ ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮಾರನ್ನು ಮೊದಲ ಬಾರಿಗೆ ಹೇಗೆ ಭೇಟಿಯಾದರು ಎಂದು ಹೇಳಿದ್ದರು. ಅದು 2013ನೇ ಇಸವಿ.. ಒಂದು ದಿನ ನಾನು ಅನುಷ್ಕಾ ಶರ್ಮಾ ಜೊತೆ ಜಾಹೀರಾತನ್ನು ಶೂಟ್ ಮಾಡಲಿದ್ದೇನೆ ಎಂದು ಮ್ಯಾನೇಜರ್ ಹೇಳಿದ್ದರು. ಆಗ ಅವರ ಮಾತು ಕೇಳಿ ನನಗೆ ನರ್ವಸ್ ಆಯಿತು...
ಅನುಷ್ಕಾ ಶರ್ಮಾ ಜೊತೆಗಿನ ಮೊದಲ ಭೇಟಿಯಲ್ಲೇ ವಿರಾಟ್ ಕೊಹ್ಲಿ ಮುಜುಗರಕ್ಕೊಳಗಾಗಿದ್ದಂತೆ.. "ಅನುಷ್ಕಾ ಎಷ್ಟು ಎತ್ತರ ಹಾಗೂ ಅವರ ಕೋಪದ ಬಗ್ಗೆ ನನಗೆ ತಿಳಿದಿರಲಿಲ್ಲ.. ಅಲ್ಲದೇ ಅವರು ಧರಿಸಿದ ಹೀಲ್ಸ್ ನೋಡಿ ಗಾಬರಿಯಾಗಿದ್ದೆ.. ಎಂದು ಹೇಳಿಕೊಂಡಿದ್ದರು..
ಇನ್ನು ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದ್ದಕ್ಕಿದ್ದಂತೆ ಡೇಟಿಂಗ್ ಆರಂಭಿಸಲಿಲ್ಲ. ವಿರಾಟ್ ಕೊಹ್ಲಿ ಅವರು ತಮ್ಮಂತೆಯೇ ಸಾಮಾನ್ಯ ವ್ಯಕ್ತಿ, ಇದೇ ರೀತಿಯ ಹಿನ್ನೆಲೆ ಹೊಂದಿರುವವರು ಎಂದು ಅರಿತುಕೊಂಡಾಗ, ಅವರು ಮೊದಲು ಸ್ನೇಹಿತರಾದರು. ಬಳಿಕ ಅವರು ಕ್ರಮೇಣ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು.
ವಿರಾಟ್ ಕೊಹ್ಲಿ ಅವರೇ ಅನುಷ್ಕಾ ಶರ್ಮಾ ಅವರನ್ನು ಮದುವೆಗೆ ಪ್ರಸ್ತಾಪಿಸಿರಬಹುದು ಎಂದು ಹೆಚ್ಚಿನ ಜನರು ಭಾವಿಸಬಹುದು, ಆದರೆ ಸತ್ಯವು ತುಂಬಾ ವಿಚಿತ್ರವಾಗಿದೆ. ಇಬ್ಬರೂ ಔಪಚಾರಿಕವಾಗಿ ತಮ್ಮ ಪ್ರೀತಿಯನ್ನು ಹೇಳಿಕೊಂಡಿರಲಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.