ಊಟಕ್ಕೆ ಬಂದು ಗೆಳೆಯನ ಪತ್ನಿಯನ್ನೇ ಪಟಾಯಿಸಿ ಗರ್ಭಿಣಿಯನ್ನಾಗಿಸಿದ ಟೀಂ ಇಂಡಿಯಾದ ಕ್ರಿಕೆಟಿಗ ಈತನೇ!
ಮದುವೆ ಎಂಬುದು ಜನ್ಮ ಜನ್ಮಗಳ ಅನುಬಂಧ ಎನ್ನುತ್ತಾರೆ. ಆದರೆ, ಕೆಲವರ ಜೀವನದಲ್ಲಿ ಮದುವೆ ಕೂಡಿ ಬರುವುದಿಲ್ಲ. ಅಂತಹ ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್ ಕೂಡ ಒಬ್ಬರು. ತಮಿಳುನಾಡಿನ ಈ ಆಟಗಾರನ ಬದುಕು ಯಾವ ಸಿನಿಮಾ ಕಥೆಗೂ ಕಡಿಮೆಯಿಲ್ಲ
ದಿನೇಶ್ ಕಾರ್ತಿಕ್ ಮೊದಲ ಪತ್ನಿ ನಿಕಿತಾ ವಂಜಾರಾ ಅವರಿಗೆ ಮೋಸ ಮಾಡಿ ಕ್ರಿಕೆಟಿಗ ಮುರಳಿ ವಿಜಯ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು.
ತಮಿಳುನಾಡು ತಂಡದ ಪರ ಆಡುತ್ತಿರುವ ಮುರಳಿ ವಿಜಯ್ ಮತ್ತು ದಿನೇಶ್ ಕಾರ್ತಿಕ್ ಬಾಲ್ಯದಿಂದಲೂ ಒಳ್ಳೆಯ ಸ್ನೇಹಿತರು. ದೇಶೀಯ ಪಂದ್ಯಾವಳಿಗಳಲ್ಲಿ ಚೆನ್ನೈ ನಾಯಕರಾಗಿದ್ದ ದಿನೇಶ್ ಕಾರ್ತಿಕ್ 2007 ರಲ್ಲಿ 21 ನೇ ವಯಸ್ಸಿನಲ್ಲಿ ತಮ್ಮ ಬಾಲ್ಯದ ಗೆಳತಿ ನಿಕಿತಾ ಅವರನ್ನು ವಿವಾಹವಾದರು.
ನಿಕಿತಾ ಅವರ ತಂದೆ ಮತ್ತು ದಿನೇಶ್ ಕಾರ್ತಿಕ್ ಅವರ ತಂದೆ ಇಬ್ಬರೂ ಸ್ನೇಹಿತರಾಗಿದ್ದರು, ಒಟ್ಟಿಗೆ ಬೆಳೆದರು ಕೂಡ. ಇವರ ಮದುವೆ ಮುಂಬೈನಲ್ಲಿ ನಡೆದಿತ್ತು. ಈ ಮದುವೆಗೆ ತಮಿಳುನಾಡಿನ ಕ್ರಿಕೆಟಿಗ ಮುರಳಿ ವಿಜಯ್ ಕೂಡ ಆಗಮಿಸಿದ್ದರು.
ಆದರೆ, ದಿನೇಶ್ ಕಾರ್ತಿಕ್ ಮನೆಗೆ ಆಗಾಗ ಬರುತ್ತಿದ್ದ ಮುರಳಿ ವಿಜಯ್ ಮೊದಲ ಪತ್ನಿ ನಿಕಿತಾ ಜತೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಷಯ ತಿಳಿದ ದಿನೇಶ್ ಕಾರ್ತಿಕ್ ನಿಕಿತಾಗೆ ವಿಚ್ಛೇದನ ನೀಡಿದ್ದರು. ದಿನೇಶ್ ಕಾರ್ತಿಕ್’ನಿಂದ ವಿಚ್ಛೇದನ ಪಡೆದ ನಿಕಿತಾ ಮುರಳಿ ವಿಜಯ್ ಜೊತೆ ಮದುವೆಯಾಗಿ ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ.
2012ರಲ್ಲಿ ಕರ್ನಾಟಕ ವಿರುದ್ಧ ತಮಿಳುನಾಡಿನ ವಿಜಯ್ ಹಜಾರೆ ಟ್ರೋಫಿ ಪಂದ್ಯದ ವೇಳೆ ಮುರಳಿ ವಿಜಯ್ ಜೊತೆ ತನ್ನ ಪತ್ನಿಯ ವಿವಾಹೇತರ ಸಂಬಂಧದ ವಿಚಾರ ದಿನೇಶ್ ಕಾರ್ತಿಕ್’ಗೆ ತಿಳಿಯಿತು. ವಿಷಯ ತಿಳಿದ ಬಳಿಕ ಆಘಾತಕ್ಕೀಡಾಗಿದ ದಿನೇಶ್, ಖಿನ್ನತೆಗೂ ಒಳಗಾಗಿದ್ದರು.
ದಿನೇಶ್ ಕಾರ್ತಿಕ್’ಗೆ ವಿಚ್ಛೇದನ ನೀಡಿದ ಒಂದು ತಿಂಗಳ ನಂತರ ಆಕೆಗೆ ತಾನು ಗರ್ಭಿಣಿ ಎಂದು ಗೊತ್ತಾಯಿತು. ಮಗುವಿನ ತಂದೆ ಎಂದು ತಿಳಿದ ನಂತರ ಮುರಳಿ ವಿಜಯ್ ಅವರನ್ನು ಮದುವೆಯಾದರು.
ಈಗ ನಿಕಿತಾ ಮತ್ತು ಮುರಳಿ ವಿಜಯ್ ಅವರಿಗೆ ಮೂವರು ಮಕ್ಕಳಿದ್ದಾರೆ. ಒಂದು ಕಾಲದಲ್ಲಿ ಆತ್ಮೀಯ ಗೆಳೆಯರಾಗಿದ್ದ ಮುರಳಿ ವಿಜಯ್ ಮತ್ತು ದಿನೇಶ್ ಕಾರ್ತಿಕ್ ಈ ಘಟನೆಯ ನಂತರ ಕಡು ವೈರಿಗಳಾಗಿ ಮಾರ್ಪಟ್ಟಿದ್ದರು.
ನಿಕಿತಾ ಮತ್ತು ಮುರಳಿ ವಿಜಯ್ ದ್ರೋಹದಿಂದ ಚೇತರಿಸಿಕೊಳ್ಳಲು ಮೂರು ವರ್ಷಗಳನ್ನೇ ತೆಗೆದುಕೊಂಡ ದಿನೇಶ್ ಕಾರ್ತಿಕ್, 2015 ರಲ್ಲಿ ಭಾರತದ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ಪ್ರೀತಿಸಿ ಮದುವೆಯಾದರು