ದಿನೇಶ್ ಕಾರ್ತಿಕ್ ಗೆ ಮೊದಲ ಪತ್ನಿ ಮತ್ತು ಮುರಳಿ ವಿಜಯ್ ಹೇಗೆ ದ್ರೋಹ ಮಾಡಿದರು ಗೊತ್ತಾ..?
2007ರಲ್ಲಿ 21 ವರ್ಷದ ದಿನೇಶ್ ಕಾರ್ತಿಕ್ ತನ್ನ ಬಾಲ್ಯದ ಗೆಳತಿ ನಿಕಿತಾ ವಂಜಾರ ಅವರನ್ನು ವಿವಾಹವಾದರು. ನಿಕಿತಾ ತಂದೆ ಮತ್ತು ದಿನೇಶ್ ಅವರ ತಂದೆ ಒಳ್ಳೆಯ ಸ್ನೇಹಿತರಾಗಿದ್ದರಿಂದ ಇದು ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಕಾರ್ತಿಕ್ ಮತ್ತು ನಿಕಿತಾ ಮದುವೆ ವಯಸ್ಸನ್ನು ತಲುಪಿದ ತಕ್ಷಣ ಎರಡೂ ಕುಟುಂಬಗಳು ತಮ್ಮ ಸ್ನೇಹವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದವು.
ಮದುವೆಯಾಗಿ 5 ವರ್ಷಗಳ ಕಾಲ ದಿನೇಶ್ ಮತ್ತು ನಿಕಿತಾ ಚೆನ್ನಾಗಿಯೇ ಇದ್ದರು. ನಂತರ ಇವರಿಬ್ಬರ ಸಂಸಾರದಲ್ಲಿ 3ನೇ ವ್ಯಕ್ತಿಯ ಪ್ರವೇಶವಾಯಿತು. ನಿಕಿತಾ ತಮಿಳುನಾಡಿನಲ್ಲಿ ಕಾರ್ತಿಕ್ ನ ಸಹ ಆಟಗಾರನಾಗಿದ್ದ ಮುರಳಿ ವಿಜಯ್ ನನ್ನು ಪ್ರೀತಿಸಲು ಶುರುಮಾಡಿದ್ದಳು. 2012ರಲ್ಲಿ ತಮಿಳುನಾಡು ತಂಡ ಕರ್ನಾಟಕದ ವಿರುದ್ಧ ಆಡುತ್ತಿದ್ದ ಸಂದರ್ಭದಲ್ಲಿ ಮುರಳಿ ವಿಜಯ್ ಜೊತೆ ತನ್ನ ಪತ್ನಿಯ ಸಂಬಂಧ ಹೊಂದಿದ್ದಾಳೆಂದು ಕಾರ್ತಿಕ್ ತಿಳಿದುಕೊಂಡರು. ಬಳಿಕ ಕಾರ್ತಿಕ್ ನಿಕಿತಾಗೆ ವಿಚ್ಛೇದನ ನೀಡಬೇಕಾಯಿತು.
ಕಾರ್ತಿಕ್ ನಿಕಿತಾಗೆ ವಿಚ್ಛೇದನ ನೀಡಿದಾಗ ಆಕೆ ಗಂಡು ಮಗುವಿಗೆ ಗರ್ಭಿಣಿಯಾಗಿದ್ದಳು. ನಿಕಿತಾ ಮತ್ತು ಮುರಳಿ ವಿಜಯ್ ಕೆಲವೇ ದಿನಗಳಲ್ಲಿ ವಿವಾಹವಾದರು. ಬಳಿಕ ಕಾರ್ತಿಕ್ ಜೊತೆಗೆ ವಿಚ್ಛೇದನವನ್ನೂ ಕೆಲವೇ ದಿನಗಳಲ್ಲಿ ಪಡೆದುಕೊಂಡರು. ಮುರಳಿ ವಿಜಯ್ ಮತ್ತು ನಿಕಿತಾ ಈಗ 3 ಮಕ್ಕಳ ಪೋಷಕರಾಗಿ ಸಂಸಾರ ನಡೆಸುತ್ತಿದ್ದಾರೆ.
2018ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಕಾರ್ತಿಕ್ ಮತ್ತು ವಿಜಯ್ ಇಬ್ಬರನ್ನು ಭಾರತೀಯ ಟೆಸ್ಟ್ ತಂಡದಲ್ಲಿ ಸೇರಿಸಲಾಯಿತು. ಸರಣಿಯುದ್ದಕ್ಕೂ ಇಬ್ಬರೂ ಪರಸ್ಪರ ಮಾತನಾಡದಿರಲು ಆದ್ಯತೆ ನೀಡಿದರು. ಒಂದು ಕಾಲದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದ ಕಾರ್ತಿಕ್ ಮತ್ತು ವಿಜಯ್ ಸ್ನೇಹಸಂಬಂಧ ಹೀಗೆ ಅಂತ್ಯವಾಯಿತು.
ನಿಕಿತಾಗೆ ವಿಚ್ಛೇದನ ನೀಡಿದ ನಂತರ ದಿನೇಶ್ ಕಾರ್ತಿಕ್ 2015ರಲ್ಲಿ ಭಾರತೀಯ ಸ್ಕ್ವ್ಯಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ಭೇಟಿಯಾದರು. ದೀಪಿಕಾ ಕ್ರಿಕೆಟಿಗರನ್ನು ದ್ವೇಷಿಸುತ್ತಿದ್ದರು. ಆದರೆ ಕಾರ್ತಿಕ್ ಜೊತೆಗಿನ ಕೆಲ ಭೇಟಿಗಳ ನಂತರ ಅವರನ್ನು ಇಷ್ಟಪಡಲು ಶುರುಮಾಡಿದರು. ಇಬ್ಬರೂ ಪ್ರೀತಿಸುತ್ತಾ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಆಗಸ್ಟ್ 2015 ರಲ್ಲಿ ಇಬ್ಬರೂ ಮದುವೆಯಾದರು.