ಭಾರತದಾದ್ಯಂತ 72ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಹೇಗಿತ್ತು ಗೊತ್ತಾ?: In Pics
ಭಾರತದಲ್ಲಿ ಇಂದು 72ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ಇಡೀ ದೇಶದ ಜನತೆ ಇಂದು ತ್ರಿವರ್ಣ ಉಡುಪು ಧರಿಸಿ ಸ್ವಾತಂತ್ರ್ಯೋತ್ಸವ ಸಂಭ್ರಮಿಸಿದರು. ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. (ಚಿತ್ರ: PTI)
72ನೇ ಸ್ವಾತಂತ್ರ್ಯ ದಿನಾಚರಣೆ ಕಾರಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪು ಕೋಟೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದೇಶದ ಜನತೆಗೆ ಸ್ವತಂತ್ರ ದಿನಾಚರಣೆಯ ಶುಭಾಷಯ ಕೋರಿದರು. (ಚಿತ್ರ: PTI)
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೂರತ್ ನಲ್ಲಿ 11 ಕಿ.ಮೀ ಉದ್ದದ ತ್ರಿವರ್ಣ ಬಾವುಟ ಹಿಡಿದು ತ್ರಿರಂಗ ಯಾತ್ರೆ ನಡೆಸಿದರು. (ಚಿತ್ರ: PTI)
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆದ ಸಾಹಸ ಪ್ರದರ್ಶನದಲ್ಲಿ ಸೇವಾ ಪಡೆಯ ಸಿಬ್ಬಂದಿ ಸಾಹಸ ಪ್ರದರ್ಶನ ನೀಡಿದರು. (ಚಿತ್ರ: PTI)
ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎನ್.ಎನ್.ವೋಹ್ರಾ 72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶ್ರೀನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದರು.
ಜಮ್ಮುನಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
ಟಿಬೆಟ್ ಪ್ರಧಾನಿ ಲೋಬ್ಸಂಗ್ ಸಂಘೆ ಧರ್ಮಶಾಲಾದ ಟಿಬೆಟಿಯನ್ ಸೆಕ್ರೆಟ್ರಿಯೇಟ್ ನಲ್ಲಿ ಭಾರತದ ಧ್ವಜಾರೋಹಣ ನೆರವೇರಿಸಿದರು.
72ನೇ ಸ್ವಾತಂತ್ಯ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನವದೆಹಲಿಯಲ್ಲಿ ಮಕ್ಕಳಿಗೆ ಸಿಹಿ ಹಂಚಿದರು.
ಹೈದರಾಬಾದಿನ ಮದಿನಾ ವೃತ್ತದಲ್ಲಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ 72ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದರು.
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮಗುವೊಂದು ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದ ಕ್ಷಣ.