IND VS AUS : ಆಸಿಸ್ ನೆಲದಲ್ಲಿ ಭಾರತದ ಗೆಲುವಿಗೆ 6 ಪ್ರಮುಖ ಕಾರಣಗಳಿವು

Tue, 19 Jan 2021-4:00 pm,

ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ನಂತರ ಮನೆಗೆ ಮರಳಿದಾಗ, ಟೀಮ್ ಇಂಡಿಯಾಕ್ಕೆ ಸಾಕಷ್ಟು ತೊಂದರೆಗಳು ಎದುರಾಗುತ್ತವೆ ಎಂದು ಭಾವಿಸಲಾಯಿತು. ಆದರೆ ಅಜಿಂಕ್ಯ ರಹಾನೆ ತಂಡದ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಭಾರತಕ್ಕೆ ಪ್ರಯೋಜನಕಾರಿಯಾಗುವಂತಹ  ಪ್ರತಿಯೊಂದು ತಂತ್ರವನ್ನೂ ಅವರು ಅಳವಡಿಸಿಕೊಂಡರು.

ಕೆಲವು ಇನ್ನಿಂಗ್ಸ್‌ಗಳಲ್ಲಿ ಪೂಜಾರ ವಿಫಲವಾದರೂ ಸಹ ಸಿಡ್ನಿ ಮತ್ತು ಬ್ರಿಸ್ಬೇನ್‌ನ ಪಂದ್ಯಗಳಲ್ಲಿ ಚೇತೇಶ್ವರ ಪೂಜಾರ ಬಹಳ ಸಂಯಮದ ಇನ್ನಿಂಗ್ಸ್‌ಗಳನ್ನು ಆಡಿದರು ಮತ್ತು ಅರ್ಧಶತಕವನ್ನು ಗಳಿಸಿದರು ಮಾತ್ರವಲ್ಲದೆ ಆಸ್ಟ್ರೇಲಿಯಾದ ಮುಂದೆ ಗೋಡೆಯಂತೆ ನಿಂತರು.

ಈ ಸರಣಿಯಲ್ಲಿ ಶುಬ್ಮನ್ ಗಿಲ್, ಮೊಹಮ್ಮದ್ ಸಿರಾಜ್ (Mohammed Siraj), ನವದೀಪ್ ಸೈನಿ, ಟಿ ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಹೆಸರುಗಳು ಸೇರಿದಂತೆ ಅನೇಕ ಆಟಗಾರರು ಟೀಮ್ ಇಂಡಿಯಾ ಪರ ಚೊಚ್ಚಲ ಪ್ರವೇಶ ಮಾಡಿದರು. ಈ ಎಲ್ಲ ಆಟಗಾರರು ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡರು.

ಇದನ್ನೂ ಓದಿ - Ind vs Aus, Test Series: ಐತಿಹಾಸಿಕ ವಿಜಯದೊಂದಿಗೆ ದಾಖಲೆ ನಿರ್ಮಿಸಿದ ಭಾರತ

ಟೀಮ್ ಇಂಡಿಯಾದ ಕೆಲವು ಆಟಗಾರರು ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಆಯಾಮಗಳಲ್ಲೂ ಕಮಾಲ್ ಮಾಡಿದರು. ಇದರಲ್ಲಿ ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ಮತ್ತು ರವಿಚಂದ್ರನ್ ಅಶ್ವಿನ್ (Ravichandran Ashwin) ಅವರ ಹೆಸರುಗಳಿವೆ.

ಇದನ್ನೂ ಓದಿ - ಈ ದಿನ ಕೇವಲ 3 ರನ್ ಗಳಿಂದ ವಿಶ್ವದಾಖಲೆ ಅವಕಾಶ ತಪ್ಪಿಸಿಕೊಂಡಿದ್ದ ದ್ರಾವಿಡ್-ಸೆಹ್ವಾಗ್ ಜೋಡಿ

ರಿಷಭ್ ಪಂತ್ ಅವರಿಗೆ ಅಡಿಲೇಡ್ ಟೆಸ್ಟ್‌ನಲ್ಲಿ ಆಡುವ ಅವಕಾಶ ಸಿಗಲಿಲ್ಲ, ಆದರೆ ಸಿಡ್ನಿ ಮತ್ತು ಬ್ರಿಸ್ಬೇನ್‌ನಲ್ಲಿ ನಡೆದ ದೊಡ್ಡ ಇನ್ನಿಂಗ್ಸ್‌ಗಳಿಂದಾಗಿ ತಂಡವು ಸರಣಿಯನ್ನು ಗೆದ್ದುಕೊಂಡಿತು.

ವಾಸ್ತವವಾಗಿ ಈ ಪ್ರವಾಸದಲ್ಲಿ ಟೀಮ್ ಇಂಡಿಯಾದ (Team India) ಅನೇಕ ಪ್ರಮುಖ ಆಟಗಾರರು ಗಾಯಗೊಂಡರು. ಹಾಗಾಗಿ ಭಾರತ ತಂಡವು ಪಂದ್ಯವನ್ನು ಕಳೆದುಕೊಳ್ಳಬಹುದೆಂದು ಎಲ್ಲರಿಗೂ ಆತಂಕ ಉಂಟಾಯಿತು. ಇಂತಹ ಅನೇಕ ಕಷ್ಟಕರ ಸಂದರ್ಭಗಳು ಬಂದವು. ಆದರೆ ಪಂದ್ಯ ಕಳೆದುಕೊಳ್ಳಬಾರದೆಂಬ ಛಲದಿಂದಾಗಿ ಭಾರತದ ಆಟಗಾರರು ಪಂದ್ಯವನ್ನು ಗೆದ್ದರು. ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಸೋತರೂ ಟೀಂ ಇಂಡಿಯಾ ಪುನರಾಗಮನ ಮಾಡಿದೆ. ಇದು ಪ್ರಶಂಸೆಗೆ ಪಾತ್ರವಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link