Photos: ಭಾರತದ ರೈಲುಗಳಿಗೆ ಹೋಲಿಸಿದರೆ ಪಾಕಿಸ್ತಾನದ ರೈಲುಗಳ ಸ್ಥಿತಿ ಹೇಗಿದೆ ನೋಡಿ
ಭಾರತ ಮತ್ತು ಪಾಕಿಸ್ತಾನ ಒಟ್ಟಿಗೆ ಸ್ವಾತಂತ್ರ್ಯ ಪಡೆದಿದ್ದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇಂದು ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೆ ಪಾಕಿಸ್ತಾನದ ಪರಿಸ್ಥಿತಿ ಹದಗೆಟ್ಟಿದ್ದು, ಆ ದೇಶದ ಜನರು ದಿನಕ್ಕೆ 2 ಹೊತ್ತು ಊಟಕ್ಕೂ ಹಾತೊರೆಯುವಂತಾಗಿದೆ. ಎರಡೂ ದೇಶಗಳ ರೈಲ್ವೆ ನೆಟ್‌ವರ್ಕ್ ಬಗ್ಗೆ ಮಾತನಾಡುವುದಾದರೆ, ಭಾರತವು ಈ ಕ್ಷೇತ್ರದಲ್ಲಿಯೂ ಅನೇಕ ದೊಡ್ಡ ಸಾಧನೆಗಳನ್ನು ಸಾಧಿಸಿದೆ, ಆದರೆ ಪಾಕಿಸ್ತಾನವು ಈ ವಿಷಯದಲ್ಲಿಯೂ ಹಿಂದುಳಿದಿದೆ.
ಉಭಯ ದೇಶಗಳ ರೈಲುಗಳನ್ನು ನೋಡಿದರೆ ಹೆಚ್ಚಿನ ವ್ಯತ್ಯಾಸ ಕಾಣದಿದ್ದರೂ ಮೂಲಸೌಕರ್ಯ ಹಾಗೂ ಹೊಸ ತಂತ್ರಜ್ಞಾನದ ರೈಲುಗಳ ವಿಷಯದಲ್ಲಿ ಭಾರತ ಪಾಕಿಸ್ತಾನಕ್ಕಿಂತಲೂ ಬಹಳ ಮುಂದಿದೆ.
ನಾವು ಪಾಕಿಸ್ತಾನದ ಪ್ರಸ್ತುತ ಸ್ಥಿತಿಯ ಬಗ್ಗೆ ಮಾತನಾಡಿದರೆ, ಅದು ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಕಾರಣಕ್ಕಾಗಿ ಪಾಕಿಸ್ತಾನವು ತನ್ನ ದೇಶದಲ್ಲಿ ರೈಲುಗಳನ್ನು ಓಡಿಸಲು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದೆ. ಅಲ್ಲಿನ ನೌಕರರಿಗೆ ಸಂಬಳ ಮತ್ತು ನಿವೃತ್ತ ಅಧಿಕಾರಿಗಳಿಗೆ ಪಿಂಚಣಿ ನೀಡಲು ಸಹ ಸಾಧ್ಯವಾಗುತ್ತಿಲ್ಲ.
ಪಾಕಿಸ್ತಾನದ ರೈಲು ಜಾಲದ ಬಗ್ಗೆ ಮಾತನಾಡುವುದಾದರೆ, ಭಾರತದಂತೆಯೇ ಬ್ರಿಟಿಷರ ಕಾಲದಲ್ಲಿಯೇ ಪಾಕಿಸ್ತಾನದಲ್ಲಿ ರೈಲ್ವೆ ಸೇವೆ ಪ್ರಾರಂಭವಾಯಿತು. 1861ರಲ್ಲಿ ಮೊದಲ ಬಾರಿಗೆ ಇಲ್ಲಿ ರೈಲು ಓಡಿತು. ಇಂದು ಪಾಕಿಸ್ತಾನದ ರೈಲ್ವೆ ಜಾಲವು 11,881 ಕಿಲೋಮೀಟರ್‌ಗಳಷ್ಟು ಹರಡಿಕೊಂಡಿದೆ.
ವರದಿಗಳ ಪ್ರಕಾರ ಪಾಕಿಸ್ತಾನದಲ್ಲಿ ಪ್ರತಿವರ್ಷ ಸುಮಾರು 70 ಮಿಲಿಯನ್ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತ ಎಷ್ಟು ಪ್ರಗತಿ ಸಾಧಿಸಿದೆ ಎಂಬುದನ್ನು ನೀವು ಇಲ್ಲಿ ನೀಡಲಾಗಿರುವ ಚಿತ್ರಗಳಲ್ಲಿಯೇ ತಿಳಿದುಕೊಳ್ಳಬಹುದು.