JioFiber ಗಿಂತ Jio AirFiber ಹೇಗೆ ಭಿನ್ನವಾಗಿದೆ! ಇಲ್ಲಿದೆ ಮಹತ್ವದ ಮಾಹಿತಿ

Mon, 18 Sep 2023-3:23 pm,

ನೀವು ಹೊಸ ವೈ-ಫೈ ಕನೆಕ್ಷನ್ ಕೊಳ್ಳಲು ಯೋಚಿಸುತ್ತಿದ್ದರೆ ಈಗ ನಿಮ್ಮ ಮನೆ ಅಥವಾ ಕಛೇರಿಯಲ್ಲಿ 1Gbps ವೇಗದಲ್ಲಿ 5G ಇಂಟರ್ನೆಟ್ ಅನ್ನು ಆನಂದಿಸಬಹುದು. ಇದಕ್ಕಾಗಿ, ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ ಜಿಯೋ ಏರ್‌ಫೈಬರ್. ಹೈ ಸ್ಪೀಡ್ ನೆಟ್ವರ್ಕ್ ಜೊತೆಗೆ ಲಭ್ಯವಾಗುವ ಜಿಯೋ ಏರ್‌ಫೈಬರ್‌ನ ಪ್ರಯೋಜನಗಳೇನು? JioFiber ಗಿಂತ Jio AirFiber ಹೇಗೆ ಭಿನ್ನವಾಗಿದೆ ಎಂದು ತಿಳಿಯೋಣ... 

ಜಿಯೋ ಫೈಬರ್ ಮತ್ತು ಜಿಯೋ ಏರ್‌ಫೈಬರ್ ಎರಡೂ ಕೂಡ ರಿಲಯನ್ಸ್ ಜಿಯೋ ಕಂಪನಿಯ ಇಂಟರ್ನೆಟ್ ಸೇವೆಗಳಾಗಿದ್ದು, ಎರಡೂ ಸಹ ವಿಭಿನ್ನವಾಗಿವೆ. ಜಿಯೋ ಫೈಬರ್ ವೈರ್ಡ್ ಫೈಬರ್ ಆಪ್ಟಿಕ್ ಕೇಬಲ್‌ಗಳನ್ನು ಬಳಸುತ್ತದೆ, ಆದರೆ ಜಿಯೋ ಏರ್‌ಫೈಬರ್ ವೈರ್‌ಲೆಸ್ ಪಾಯಿಂಟ್-ಟು-ಪಾಯಿಂಟ್ ರೇಡಿಯೊ ಲಿಂಕ್‌ಗಳನ್ನು ಬಳಸುತ್ತದೆ.

ರಿಲಯನ್ಸ್ ಜಿಯೋದಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಜಿಯೋ ಏರ್‌ಫೈಬರ್ 1.5 Gbps ವರೆಗಿನ ಇಂಟರ್ನೆಟ್ ವೇಗವನ್ನು ಒದಗಿಸಲಿದೆ. ಇದು 5G ತಂತ್ರಜ್ಞಾನದ ಬಳಕೆಯಿಂದಾಗಿ, ಇದು ಸಾಂಪ್ರದಾಯಿಕ 4G ತಂತ್ರಜ್ಞಾನಕ್ಕಿಂತ ಹೆಚ್ಚಿನ ಬ್ಯಾಂಡ್‌ವಿಡ್ತ್ ಅನ್ನು ಒದಗಿಸುತ್ತದೆ. ಆದರೆ, ಜಿಯೋ ಫೈಬರ್ ಕೇವಲ 1Gbps ವರೆಗಿನ ವೇಗವನ್ನು ನೀಡುತ್ತದೆ. 

ಜಿಯೋ ಫೈಬರ್ ದೇಶಾದ್ಯಂತ ಲಭ್ಯವಾಗಲಿದೆ ಎಂದು ಹೇಳಲಾಗುತ್ತದೆ ಆದರೂ ಇನ್ನೂ ಕೆಲವು ಪ್ರದೇಶಗಳಲ್ಲಿ ಈ ಸೇವೆ ಲಭ್ಯವಿಲ್ಲ. ಆದರೆ, ಇದಕ್ಕೆ ವ್ಯತಿರಿಕ್ತವಾಗಿರುವ  ಜಿಯೋ ಏರ್‌ಫೈಬರ್‌ನ ವೈರ್‌ಲೆಸ್ ತಂತ್ರಜ್ಞಾನವು ಫೈಬರ್ ಆಪ್ಟಿಕ್ ಕೇಬಲ್ ಲಭ್ಯವಿಲ್ಲದ ಪ್ರದೇಶಗಳಲ್ಲಿಯೂ ಸಹ ಲಭ್ಯವಾಗಲಿದೆ. 

ಜಿಯೋ ಫೈಬರ್ ಇನ್ಸ್ಟಾಲೇಶನ್ ಗಾಗಿ ಫೈಬರ್ ಆಪ್ಟಿಕ್ ಕೇಬಲ್ ಬೇಕಾಗುತ್ತದೆ. ಆದರೆ, ಜಿಯೋ ಏರ್‌ಫೈಬರ್ ಅನ್ನು ಪ್ಲಗ್-ಅಂಡ್-ಪ್ಲೇ ಆಗಿ ವಿನ್ಯಾಸಗೊಳಿಸಲಾಗಿದೆ, ಅಂದರೆ ಅದನ್ನು ಹೊಂದಿಸಲು ಯಾವುದೇ ವಿಶೇಷ ಕೌಶಲ್ಯಗಳು ಅಥವಾ ಸಲಕರಣೆಗಳ ಅಗತ್ಯವಿರುವುದಿಲ್ಲ.

ಜಿಯೋ ಫೈಬರ್ ಸೇವೆ ಸಾಮಾನ್ಯವಾಗಿ 3,999 ರೂ.ಗಳಿಂದ ಆರಂಭವಾಗುತ್ತದೆ. ಆದರೆ, ಜಿಯೋ ಏರ್‌ಫೈಬರ್ ಬೆಲೆ ಇದಕ್ಕಿಂತ ಹೆಚ್ಚಿರಲಿದೆ ಎಂದು ನಿರೀಕ್ಷಿಸಲಾಗಿದ್ದು ಇದರ ಸಂಭಾವ್ಯ ಬೆಲೆ 6,000 ರೂ.ಗಳಿಂದ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link