ಬಿಗ್‌ಬಾಸ್ ಖಡಕ್ ಸ್ಪರ್ಧಿ ಲಾಯರ್ ಜಗದೀಶ್ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ? ಒಂದು ಕೇಸ್‌ಗೆ ಪಡೆಯುವ ಸಂಭಾವನೆ ಕೇಳಿದ್ರೆ ಉಸಿರುಗಟ್ಟುತ್ತೆ ಖಂಡಿತ!!
ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11 ಈಗಾಗಲೇ ಪ್ರಾರಂಭವಾಗಿದೆ. ಆರಂಭದ ದಿನದಿಂದಲೇ ಭಾರೀ ಸದ್ದು ಮಾಡುತ್ತಿರುವ ಸ್ಪರ್ಧಿಗಳಲ್ಲಿ ಲಾಯರ್ ಜಗದೀಶ್ ಕೂಡ ಒಬ್ಬರು. ಇವರ ಹಿನ್ನೆಲೆ, ಆಸ್ತಿ ಮೌಲ್ಯ ಮತ್ತು ಒಂದು ಕೇಸ್‌ಗೆ ಪಡೆಯುವ ಶುಲ್ಕ ಎಷ್ಟು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ
ಲಾಯರ್ ಜಗದೀಶ್ ಅವರ ನಿಜವಾದ ಹೆಸರು, ಜಗದೀಶ್ ಮಹದೇವ್ ಎಂದು. ಉನ್ನತ ಮಟ್ಟದ ಕಾನೂನು ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಹೆಸರುವಾಸಿಯಾದ ಜಗದೀಶ್ ಅವರು ನಿರ್ಭೀತ ಮತ್ತು ದಿಟ್ಟ ವಕೀಲರಾಗಿ ಖ್ಯಾತಿಯನ್ನು ಗಳಿಸಿದ್ದಾರೆ.
ಅವರ ವಿವಾದಾತ್ಮಕ ವೃತ್ತಿಜೀವನದೊಂದಿಗೆ, ಮುಲಾಜಿಲ್ಲದೆ ಮಾತನಾಡುವ ಅವರ ಸ್ವಭಾವದಿಂದಲೇ ಬಿಗ್‌ಬಾಸ್‌ಗೆ ಎಂಟ್ರಿ ಪಡೆದುಕೊಂಡಿದ್ದಾರೆ.
"ವಕೀಲ್ ಸಾಬ್" ಎಂದು ಕರೆಯಲ್ಪಡುವ ಜಗದೀಶ್ ಮಹದೇವ್ ಅವರು ಬೆಂಗಳೂರಿನಲ್ಲಿರುವ ಅನುಭವಿ ವಕೀಲರಾಗಿದ್ದಾರೆ.
ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದ ಜಗದೀಶ್ ಅವರು ಕಾನೂನು ಜಗತ್ತಿನಲ್ಲಿ ತಮ್ಮನ್ನು ತಾವು ನಿರೂಪಿಸಿಕೊಳ್ಳಲು ಬಹಳಷ್ಟು ಶ್ರಮಪಟ್ಟಿದ್ದಾರೆ. ಕಷ್ಟಕರವಾದ ಪ್ರಕರಣಗಳನ್ನು ತೆಗೆದುಕೊಂಡು ಖ್ಯಾತಿಯ ಜೊತೆಗ ವಿವಾದ ಎರಡನ್ನೂ ತೆಗೆದುಕೊಂಡರು.
ಇನ್ನು ಲಾಯರ್ ಜಗದೀಶ್ ಅವರ ನಿವ್ವಳ ಮೌಲ್ಯ ಅಂದಾಜು ₹10 ಕೋಟಿ ರೂ. ಇದ್ದು, ಕಾನೂನು ಪ್ರಕರಣಗಳಿಗೆ ಶುಲ್ಕ ಪ್ರತಿ ಪ್ರಕರಣಕ್ಕೆ ₹2 ರಿಂದ 5 ಲಕ್ಷ (ಅಂದಾಜು) ಪಡೆಯುತ್ತಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಮತ್ತು ಸಿಡಿ ಹಗರಣ ಪ್ರಕರಣದಲ್ಲಿ ಲಾರ್ ಜಗದೀಶ್ ಅವರ ಹೆಸರು ಕೇಳಿಬಂದಿತ್ತು. ಅಷ್ಟೇ ಅಲ್ಲದೆ, ಸಾರ್ವಜನಿಕ ವಾಗ್ವಾದಗಳು, ಬೆಂಗಳೂರು ವಕೀಲರ ಸಂಘದಿಂದ ನಿಷೇಧಕ್ಕೊಳಪಟ್ಟ ವಿವಾದಗಳೂ ಇವರ ಮೇಲಿದೆ.