ಉತ್ತಮ ಆರೋಗ್ಯಕ್ಕೆ ದಿನಕ್ಕೆ ಇಷ್ಟೇ ಮೊಟ್ಟೆ ..!
ಮೊಟ್ಟೆಯನ್ನು ಶಕ್ತಿ ಮತ್ತು ಪ್ರೋಟೀನ್‌ನ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಮೊಟ್ಟೆಗಳಲ್ಲಿ ಪ್ರೋಟೀನ್ ಜೊತೆಗೆ, ಸೆಲೆನಿಯಮ್, ವಿಟಮಿನ್ ಡಿ, ವಿಟಮಿನ್ ಬಿ 6, ಸತು, ಐರನ್ ನಂತಹ ಪೋಷಕಾಂಶಗಳೂ ಇವೆ. ಬೆಳೆಯುವ ಮಕ್ಕಳು, ಕ್ರೀಡಾಪಟುಗಳಿಗೆ ಮೊಟ್ಟೆಯನ್ನು ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತದೆ.
ಮೊಟ್ಟೆ ಆರೋಗ್ಯಕ್ಕೆ ಉತ್ತಮ ಹೌದು, ಆದರೆ ಇದರಲ್ಲಿರುವ ಕೊಲೆಸ್ಟ್ರಾನ್ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಒಬ್ಬ ವ್ಯಕ್ತಿಗೆ ದಿನವೊಂದಕ್ಕೆ 300 ಮಿಲಿಗ್ರಾಂನಷ್ಟು ಕೊಲೆಸ್ಟ್ರಾಲ್ ನ ಅಗತ್ಯವಿದೆ. ಒಂದು ಮೊಟ್ಟೆಯಲ್ಲಿ 186 ಮಿಲಿ ಗ್ರಾಂನಷ್ಟು ಕೊಲೆಸ್ಟ್ರಾಲ್ ಇರುತ್ತದೆ. ನೆನಪಿರಲಿ ಕೊಲೆಸ್ಟ್ರಾಲ್ ಮೊಟ್ಟೆಯ ಹಳದಿ ಭಾಗದಲ್ಲಿರುವುದು. ಬಿಳಿಬಾಗದಲ್ಲಿ ಅಲ್ಲ. ಬಿಳಿ ಭಾಗ ಅಂದರೆ ಕ್ಯಾಲ್ಸಿಯಂ.
ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದಿದ್ದರೆ ಒಬ್ಬ ವ್ಯಕ್ತಿ ದಿನಕ್ಕೆ ಎರಡು ಮೊಟ್ಟೆ ತಿನ್ನಬಹುದು. ಇದರಿಂದ ದೇಹಕ್ಕೆ ಬೇಕಾಗುವ ಅಗತ್ಯ ಪ್ರೋಟಿನ್ ಕೂಡಾ ಲಭಿಸುತ್ತದೆ. ತಜ್ಞರ ಪ್ರಕಾರ ಹೃದ್ರೀಗದಿಂದ ಕಾಪಾಡಿಕೊಳ್ಳಲು ದಿನಕ್ಕೆ ಒಂದು ಮೊಟ್ಟೆಗಿಂತ ಹೆಚ್ಚು ಸೇವಿಸಬಾರದು ಎನ್ನಲಾಗಿದೆ.
ದಿನವೊಂದಕ್ಕೆ ಎರಡಕ್ಕಿಂತ ಹೆಚ್ಚು ಮೊಟ್ಟೆ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಆಸಿಡಿಟಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಪ್ರೋಟಿನ್ ಅಧಿಕವಾದರೆ ಕಿಡ್ನಿ ಸಮಸ್ಯೆ ಕೂಡಾ ಎದುರಾಗಬಹುದು.
ಪ್ರೋಟಿನ್ ಹೇರಳವಾಗಿರುವ ಕಾರಣದಿಂದ ಮೊಟ್ಟೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಚಳಿಗಾಲದ ಸಮಯದಲ್ಲಿ ಹೆಚ್ಚಾಗಿ ಮೊಟ್ಟೆಯನ್ನು ಸೇವಿಸಲಾಗುತ್ತದೆ. ಮೊಟ್ಟೆಯಲ್ಲಿರುವ ಅಮಿನೋ ಆಸಿಡ್ ಮತ್ತು ಒಮೆಗಾ 3 ಮೆದುಳಿನ ವಿಕಸನಕ್ಕೆ ಬಹಳ ಮುಖ್ಯವಾಗಿರುತ್ತದೆ.