Weight Loss: ತೂಕ ಇಳಿಕೆಗೆ ಒಂದು ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು?

Thu, 01 Sep 2022-5:23 pm,

ತೂಕ ಇಳಿಸಿಕೊಳ್ಳಲು ಬಯಸುವರು ತಮ್ಮ ದಿನನಿತ್ಯದ ಆಹಾರದಲ್ಲಿ ಮೊಟ್ಟೆ ಮತ್ತು ಚಿಕನ್ ಬಳಸುತ್ತಾರೆ. ಈ ಆಹಾರದಲ್ಲಿ ಪ್ರೋಟೀನ್‌ ಹೆಚ್ಚಾಗಿರುತ್ತದೆ. 

ಒಂದು ಮೊಟ್ಟೆಯಲ್ಲಿ 75 ಕ್ಯಾಲೋರಿಗಳು, 7 ಗ್ರಾಂ ಉತ್ತಮ ಗುಣಮಟ್ಟದ ಪ್ರೊಟೀನ್, 5 ಗ್ರಾಂ ಕೊಬ್ಬು ಮತ್ತು 1.6 ಗ್ರಾಂ ಸ್ಯಾಚುರೇಟೆಡ್ ಕೊಬ್ಬು, ಜೊತೆಗೆ ಕಬ್ಬಿಣ, ಜೀವಸತ್ವಗಳ ಜತೆಗೆ ದೇಹಕ್ಕೆ ಬೇಕಾದ ಖನಿಜಾಂಶಗಳು ಇರುತ್ತವೆ. 

ಪ್ರೋಟೀನ್ ಚಯಾಪಚಯವನ್ನು ಉತ್ತೇಜಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. 

ಮಿತಿ ಮೀರಿ ಹೆಚ್ಚು ಮೊಟ್ಟೆ ಸೇವಿಸುತ್ತಿದ್ದರೆ ದೇಹದಲ್ಲಿ ಅನಾರೋಗ್ಯ ಸಮಸ್ಯೆ ಕಾಣಬಹುದು. ಅತಿಯಾದ ಕೊಬ್ಬು ಶೇಖರಣೆ ಆಗುವ ಸಾಧ್ಯತೆಯೂ ಇದೆ. ಹೀಗಾಗಿ ಮಿತಿಯಾಗಿ ಸೇವಿಸಬೇಕು. 

ಸರಾಸರಿ ವಯಸ್ಕರಿಗೆ, ದಿನಕ್ಕೆ ಎರಡು ಸಂಪೂರ್ಣ ಮೊಟ್ಟೆಗಳು ಸಾಕು. ಇದರಿಂದ ದೇಹಕ್ಕೆ ಬೇಕಾಗುವ ಪ್ರೋಟೀನ್‌ ಲಭ್ಯವಾಗಲಿದೆ. ಹೀಗಾಗಿ ಪ್ರತಿದಿನ ಎರಡು ಮೊಟ್ಟೆ ತೂಕ ಇಳಿಕೆಗೆ ಸಹಕಾರಿ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link