ಟಿ20 ವಿಶ್ವಕಪ್’ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ತಲುಪಬೇಕಾದ್ರೆ ಎಷ್ಟು ಪಂದ್ಯ ಗೆಲ್ಲಬೇಕು?
T20 ವಿಶ್ವಕಪ್ ಜೂನ್ 2 ರಿಂದ ಅಂದರೆ ನಾಳೆಯಿಂದ ಪ್ರಾರಂಭವಾಗಲಿದೆ. ಈಗಾಗಲೇ ಟೀಂ ಇಂಡಿಯಾ ಅಮೆರಿಕಾ ತಲುಪಿದ್ದು, ಇಂದು ಬಾಂಗ್ಲಾದೇಶದ ವಿರುದ್ಧ ಏಕೈಕ ಅಭ್ಯಾಸ ಪಂದ್ಯವನ್ನಾಡಲಿದೆ.
ಇದಾದ ನಂತರ 4 ಗುಂಪು ಹಂತದ ಪಂದ್ಯಗಳು ನಡೆಯಲಿವೆ. ಈ ಬಾರಿಯ ವಿಶ್ವಕಪ್ ಕೆಲವು ಹೊಸ ನಿಯಮಗಳೊಂದಿಗೆ ನಡೆಯಲಿದ್ದು, ಸೂಪರ್-8 ರಲ್ಲಿ ತಂಡಗಳು ಹೇಗೆ ಅರ್ಹತೆ ಪಡೆಯುತ್ತವೆ ಎಂಬುದನ್ನು ತಿಳಿಯೋಣ,
2022 ರ ಟಿ20 ವಿಶ್ವಕಪ್’ನಲ್ಲಿ 12 ತಂಡಗಳಿದ್ದವು. ಆದರೆ ಈ ಬಾರಿ 20 ತಂಡಗಳಿವೆ. ಇವುಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಕಳೆದ ವಿಶ್ವಕಪ್’ನಲ್ಲಿ ಎರಡು ಗುಂಪು ಪಂದ್ಯಗಳ ನಂತರ ಅಗ್ರ-4 ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದವು, ಆದರೆ ಈಗ ತಂಡಗಳು ಸೂಪರ್-8 ಗೆ ಅರ್ಹತೆ ಪಡೆಯಲಿವೆ. ಇದರ ನಂತರ ತಂಡಗಳು ಸೆಮಿಫೈನಲ್’ಗೆ ಹೋಗುತ್ತವೆ.
ಅಂದರೆ ಈ ಬಾರಿ ಸೆಮಿಫೈನಲ್ ಹಾದಿ ತುಸು ಕಠಿಣವಾಗಲಿದೆ. ಇದಕ್ಕಾಗಿ ಎರಡು ಸುತ್ತುಗಳನ್ನು (ಲೀಗ್ ಮತ್ತು ಸೂಪರ್-8) ಆಡಬೇಕಾಗುತ್ತದೆ. ಒಂದು ವೇಳೆ ತಂಡವೊಂದು ತನ್ನ 4 ಲೀಗ್ ಪಂದ್ಯಗಳನ್ನು ಗೆದ್ದರೆ ಸೂಪರ್ 8ಗೆ ಹೋಗಬಹುದು. ಅಂದರೆ ನೇರ ಪ್ರವೇಶ ಪಡೆದಂತಾಗುತ್ತದೆ, ಆದರೆ ಮೂರು ಗೆಲುವು ಸಾಧಿಸಿ ಒಂದರಲ್ಲಿ ಸೋತರೂ ಸಹ ನೆಟ್ ರನ್ ರೇಟ್ ಕಡಿಮೆಯಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಸೂಪರ್ -8 ಪ್ರವೇಶಿಸಿದ ಬಳಿಕ, ತಲಾ ನಾಲ್ಕು ತಂಡಗಳ ಎರಡು ಗುಂಪುಗಳನ್ನು ರಚಿಸಲಾಗುತ್ತದೆ. ಎರಡೂ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್’ಗೆ ಪ್ರಯಾಣಿಸಲಿವೆ. ಸೆಮಿಫೈನಲ್’ಗೆ ನೇರ ಪ್ರವೇಶ ಪಡೆಯಲು ಮೂರು ಗೆಲುವುಗಳು ಅವಶ್ಯಕ. ಇದರರ್ಥ ಸೆಮಿಫೈನಲ್ ತಲುಪಲು, ತಂಡವೊಂದು 7 ಗೆಲುವುಗಳನ್ನು ಸಾಧಿಸಲೇಬೇಕು.
ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಇದರ ನಂತರ ಜೂನ್ 9 ರಂದು ಪಾಕಿಸ್ತಾನ, ಜೂನ್ 12 ರಂದು ಅಮೆರಿಕ ಮತ್ತು ಜೂನ್ 15 ರಂದು ಕೆನಡಾ ವಿರುದ್ಧ ಪಂದ್ಯಗಳು ನಡೆಯಲಿವೆ.