ಬಿಗ್‌ ಬಾಸ್‌ನಿಂದ ಮೊದಲ ವಾರವೇ ಎಲಿಮಿನೇಟ್‌ ಆದ ಯಮುನಾ ಶ್ರೀನಿಧಿ ಪಡೆದ ವೋಟ್‌ ಎಷ್ಟು?

Mon, 07 Oct 2024-6:57 pm,

ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌ 11 ಪ್ರಾರಂಭವಾಗಿ ಒಂದು ವಾರವೇ ಕಳೆದಿದೆ.

 

ಕಳೆದ ದಿನ ವಾರದ ಪಂಚಾಯ್ತಿ ಮುಕ್ತಾಯಗೊಂಡಿದ್ದು, ದೊಡ್ಮನೆಯಿಂದ ಮೊದಲ ವಾರವೇ ಯಮುನಾ ಶ್ರೀನಿಧಿಯವರು ಎಲಿಮಿನೇಟ್‌ ಆಗಿದ್ದಾರೆ.

 

ಇನ್ನು ಈ ಸಂದರ್ಭದಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಇವರ ಎಲಿಮಿನೇಷನ್‌ ಬಗ್ಗೆ ಭಾರೀ ಚರ್ಚೆಗಳು ಕೇಳಿಬರುತ್ತಿವೆ.

 

ಮೊದಲ ವಾರವೇ ಎಲಿಮಿನೇಟ್‌ ಆಗುವ ಸ್ಪರ್ಧಿ ಈಕೆಯಲ್ಲ ಎಂಬುದು ಕೆಲವರ ವಾದ. ಆದರೆ ಈ ಬೆನ್ನಲ್ಲೇ  ಪೋಸ್ಟರ್‌ ಒಂದು ವೈರಲ್‌ ಆಗುತ್ತಿದ್ದು, ಬಾಟಮ್‌ 5ರಲ್ಲಿರುವ ಸ್ಪರ್ಧಿಗಳು ಮತ್ತು ಅವರು ಪಡೆದ ಓಟುಗಳ ಬಗ್ಗೆ ಅದರಲ್ಲಿ ಮಾಹಿತಿ ಇದೆ.

 

ಆ ಪೋಸ್ಟರ್‌ ಅನುಸಾರ, ಅನುಷಾ ರೈ 3.1K, ರಂಜಿತ್‌ 2.3K, ಜಗದೀಶ್ 1.9K,‌ ಹಂಸ 1.1K ಮತ್ತು ಯಮುನಾ ಅವರು 1.1K ಓಟುಗಳನ್ನು ಪಡೆದುಕೊಂಡಿದ್ದಾರೆ.

 

ಈ ಪೋಸ್ಟರ್‌ನ್ನು az_shows ಎಂಬ ಇನ್‌ಸ್ಟಾಗ್ರಾಂ ಪೇಜ್‌ ಹಂಚಿಕೊಂಡಿದ್ದು, ಅದರ ಫೋಟೋ ಇಲ್ಲಿದೆ.

 

ಅಂದಹಾಗೆ ಭರತನಾಟ್ಯ ಕಲಾವಿದೆಯಾಗಿರುವ ಯಮುನಾ ಅವರು, ನೇತ್ರದಾನಕ್ಕೆ ನೋಂದಣಿ ಮಾಡಿಸಿ ಮಾನವೀಯತೆ ಮೆರೆದಿರುವ ಕನ್ನಡದ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link