ಒಂದು ವೇಳೆ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆದರೆ... ಐಶ್ವರ್ಯಾ ರೈಗೆ ಎಷ್ಟು ಜೀವನಾಂಶ ನೀಡಬೇಕಾಗುತ್ತದೆ ?
Aishwaya Rai Abhishek Bachchan Divorce: ಅಭಿಷೇಕ್ ಬಚ್ಚನ್ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ? ಡಿವೋರ್ಸ್ ಪಡೆದರೆ ಐಶ್ವರ್ಯಾಗೆ ಎಷ್ಟು ಜೀವನಾಂಶ ನೀಡಬೇಕಾಗಬಹುದು ಎಂಬ ಲೆಕ್ಕಾಚಾರ ಇಲ್ಲಿದೆ ನೋಡಿ...
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಾಂಪತ್ಯದಲ್ಲಿ ಬಿರುಕು ಮೂಡಿರುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಐಶ್ವರ್ಯಾ ರೈ ಮಗಳೊಟ್ಟಿಗೆ ಬೇರೆ ಮನೆಯಲ್ಲಿ ವಾಸವಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿಗಳ ನಡುವೆ ಮನಸ್ತಾಪವಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಅಭಿಷೇಕ್ ಮತ್ತು ಐಶ್ವರ್ಯಾ ಕೂಡ ಬಹುದಿಗಳಿಂದ ಒಟ್ಟಿಗೆ ಕಾಣಿಸಿಕೊಂಡಿಲ್ಲ.
ಅಭಿಷೇಕ್ ಬಚ್ಚನ್ 2000ದಲ್ಲಿ ರಿಲೀಸ್ ಆದ ರೆಫ್ಯೂಜಿ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿ ಬೆಸ್ಟ್ ಮೇಲ್ ಡಿಬಟ್ ಫಿಲ್ಮ್ ಫೇರ್ ಅವಾರ್ಡ್ ಪಡೆದರು. 24 ವರ್ಷಗಳಿಂದ ಸಿನಿರಂಗದಲ್ಲಿರುವ ಅಭಿಷೇಕ್ ಬಚ್ಚನ್ ಒಟ್ಟು ಆಸ್ತಿ ಸುಮಾರು 280 ಕೋಟಿ ರೂಪಾಯಿ.
ಅಭಿಷೇಕ್ ಬಚ್ಚನ್ ತಿಂಗಳಿಗೆ ಸುಮಾರು 1.8 ಕೋಟಿ ರೂಪಾಯಿ ಸಂಪಾದನೆ ಮಾಡುತ್ತಾರೆ. ಅವರ ವಾರ್ಷಿಕ ಆದಾಯ ಸುಮಾರು 25 ಕೋಟಿ ಎಂದು ಅಂದಾಜಿಸಲಾಗಿದೆ. ಕೆಲವು ವರದಿಗಳ ಪ್ರಕಾರ, 25% ಎಂದು ಅಂದಾಜಿಸಿದರೂ ಐಶ್ವರ್ಯ ರೈ ಅವರಿಗೆ 45 ಲಕ್ಷ ರೂಪಾಯಿ ಜೀವನಾಂಶವನ್ನು ಪ್ರತಿ ತಿಂಗಳಿಗೆ ನೀಡಬೇಕಾಗಬಹುದು.
ಅದೊಂದು ವೇಳೆ ಡಿವೋರ್ಸ್ ಪಡೆದು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದೂರವಾದರೆ, ಅಭಿಷೇಕ್ ಪ್ರತಿ ತಿಂಗಳು 45 ಲಕ್ಷ ರೂಪಾಯಿ ಜೀವನಾಂಶವನ್ನು ಐಶ್ವರ್ಯ ರೈಗೆ ನೀಡಬೇಕಾಗುತ್ತದೆ.
ಕೆಲವು ವರದಿಗಳ ಪ್ರಕಾರ, ಅವರಿಬ್ಬರೂ ವಿಚ್ಛೇದನ ಪಡೆದಿಲ್ಲ ಮತ್ತು ಪಡೆಯುವ ಯೋಚನೆಯಲ್ಲಿಯೂ ಇಲ್ಲ ಎನ್ನಲಾಗುತ್ತಿದೆ. ಇದೆಲ್ಲವೂ ಕೇವಲ ವದಂತಿಯಾಗಿ ಹಬ್ಬುತ್ತಿದೆ. ಅಧಿಕೃತವಾಗಿ ಯಾವ ಹೇಳಿಕೆಯೂ ಹೊರಬಿದ್ದಿಲ್ಲ.