ನಿಮ್ಮ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಇಷ್ಟೇ ಹಣ ಇರಿಸಬಹುದು! ಹೆಚ್ಚಿದ್ದರೆ ಈ ಕ್ರಮಕ್ಕೆ ಸಿದ್ದರಾಗಬೇಕು !
ಭಾರತದಲ್ಲಿ ಡಿಜಿಟಲ್ ವಹಿವಾಟು ಹೆಚ್ಚಾಗುತ್ತಿದ್ದಂತೆ, ಅನೇಕ ಜನರು ತಮ್ಮ ಹಣವನ್ನು ಬ್ಯಾಂಕ್‌ಗಳಲ್ಲಿ ಜಮಾ ಮಾಡುತ್ತಿದ್ದಾರೆ. ಒಂದು ಹಣಕಾಸು ವರ್ಷದಲ್ಲಿ ನೀವು ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಇರಿಸಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿಯಮಗಳ ಪ್ರಕಾರ, ನಿಮ್ಮ ಉಳಿತಾಯ ಖಾತೆಯಲ್ಲಿ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಹಣವನ್ನು ಇರಿಸಿದರೆ, ಅದರ ಮೇಲೆ ಆದಾಯ ತೆರಿಗೆ ವಿಧಿಸಲಾಗುತ್ತದೆ.
ಉಳಿತಾಯ ಖಾತೆಗಳಲ್ಲಿ ಗರಿಷ್ಠ ನಗದು ಮಿತಿಯನ್ನು ಮೀರಿದ ವಹಿವಾಟುಗಳು ಆದಾಯ ತೆರಿಗೆ ನೋಟೀಸ್ ಗೆ ಕಾರಣವಾಗಬಹುದು.ಅದಕ್ಕೆ ಉತ್ತರಿಸದಿದ್ದರೆ ತೆರಿಗೆ ಕಟ್ಟಬೇಕಾಗುತ್ತದೆ.
ಆದಾಯ ತೆರಿಗೆ ಕಾಯಿದೆ 1962ರ ಸೆಕ್ಷನ್ 114B ಪ್ರಕಾರ, ಎಲ್ಲಾ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಆದಾಯ ತೆರಿಗೆ ಇಲಾಖೆಗೆ ದೊಡ್ಡ ಮೊತ್ತದ ನಗದು ಠೇವಣಿಗಳ ಬಗ್ಗೆ ತಿಳಿಸಬೇಕಾಗುತ್ತದೆ.
ಆದಾಯ ತೆರಿಗೆ ಇಲಾಖೆಯ ಪ್ರಕಾರ, ಒಂದು ಆರ್ಥಿಕ ವರ್ಷದಲ್ಲಿ ಉಳಿತಾಯ ಖಾತೆಯಲ್ಲಿ 10 ಲಕ್ಷದವರೆಗೆ ನಗದು ಠೇವಣಿ ಮಾಡಬಹುದು. ಹಣಕಾಸಿನ ವರ್ಷದಲ್ಲಿ ಠೇವಣಿ ಮಾಡಿದ ಮೊತ್ತವನ್ನು ಆ ವ್ಯಕ್ತಿಯ ಎಲ್ಲಾ ಖಾತೆಗಳನ್ನು ಗಣನೆಗೆ ತೆಗೆದುಕೊಂಡು ಲೆಕ್ಕಹಾಕಲಾಗುತ್ತದೆ.