ಮನೆಯಲ್ಲಿ ಇಷ್ಟು ಚಿನ್ನವನ್ನು ಮಾತ್ರ ಇಟ್ಟುಕೊಳ್ಳಬಹುದು ! ಏನು ಹೇಳುತ್ತದೆ ಸರ್ಕಾರ ರೂಪಿಸಿದ ನಿಯಮ ?

Mon, 04 Mar 2024-10:03 am,

ಆದಾಯ ತೆರಿಗೆ ತಪಾಸಣೆ ವೇಳೆ ಚಿನ್ನಾಭರಣ ಅಥವಾ ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಯಿತು ಎನ್ನುವ ಸುದ್ದಿಯನ್ನು ನಾವು ದಿನ ಬೆಳಗಾದರೆ ಓದುತ್ತಲೇ ಇರುತ್ತೇವೆ. ಇದನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) 1994 ರಲ್ಲಿ ಸೂಚನೆಯನ್ನು ಹೊರಡಿಸಿದೆ.   

ಆದಾಯ ತೆರಿಗೆ ಅಧಿಕಾರಿಗಳ ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳು ಕೆಲವು ಮಿತಿಗಳವರೆಗೆ ಚಿನ್ನಾಭರಣಗಳು ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳುವಂತಿಲ್ಲ. ಚಿನ್ನಾಭರಣಗಳನ್ನು ಹೊಂದಲು ವಿವಾಹಿತ ಪುರುಷ ಮತ್ತು ಮಹಿಳೆಗೆ ಪ್ರತ್ಯೇಕ ಮಿತಿಗಳಿವೆ.   

ವಿವಾಹಿತ ಮಹಿಳೆಯರು 500 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಹೊಂದಬಹುದು. ಅವಿವಾಹಿತ ಮಹಿಳೆ 250 ಗ್ರಾಂ ಚಿನ್ನಾಭರಣ ಹೊಂದಬಹುದು. ಅವಿವಾಹಿತ ವ್ಯಕ್ತಿ 100 ಗ್ರಾಂ ಚಿನ್ನವನ್ನು ಹೊಂದಬಹುದು. 

ಇದರಲ್ಲಿ, ಈ ಮಿತಿಯು ಕುಟುಂಬದ ಒಬ್ಬ ಸದಸ್ಯನಿಗೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಕುಟುಂಬದಲ್ಲಿ ಇಬ್ಬರು ವಿವಾಹಿತ ಮಹಿಳೆಯರಿದ್ದರೆ, ಒಟ್ಟು ಮಿತಿಯು 500 ಗ್ರಾಂನಿಂದ ಒಂದು ಕೆಜಿಯವರೆಗೆ ಹೆಚ್ಚಾಗುತ್ತದೆ. 

CBDT ಇಲಾಖೆಯ ಈ ಸೂಚನೆಯು ಚಿನ್ನದ ಆಭರಣಗಳನ್ನು ಹೊಂದಲು ಯಾವುದೇ ಕಾನೂನು ಹಕ್ಕನ್ನು ನೀಡುವುದಿಲ್ಲ ಎಂಬುದನ್ನು ಕೂಡಾ ಇಲ್ಲಿ ಅರ್ಥಮಾಡಿಕೊಳ್ಳಬೇಕು.  ದಾಳಿಯ ಸಮಯದಲ್ಲಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವುದರಿಂದ ತೆರಿಗೆದಾರರಿಗೆ ಪರಿಹಾರ ಒದಗಿಸುವುದು ಇದರ ಉದ್ದೇಶವಾಗಿದೆ.   

ಈ ಸೂಚನೆಗಳು ಕುಟುಂಬದ ಆಭರಣಗಳು ಅಥವಾ ಇತರ ಆಭರಣಗಳಿಗೆ ಮಾತ್ರ ಅನ್ವಯಿಸುತ್ತವೆ. ಆದರೆ, ಆದಾಯದ ಮೂಲವಿಲ್ಲದೆ ಹೆಚ್ಚು ಚಿನ್ನ ಸಿಕ್ಕಿದಲ್ಲಿ ಕ್ರಮ ಕೈಗೊಳ್ಳಲಾಗುವುದು. ತೆರಿಗೆ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳಬಹುದು.

ಮೊದಲು ಭಾರತದಲ್ಲಿ ಚಿನ್ನದ ನಿಯಂತ್ರಣ ಕಾಯಿದೆ, 1968 ಜಾರಿಯಲ್ಲಿತ್ತು. ಇದರ ಪ್ರಕಾರ ಜನರು ಮಿತಿ ಮೀರಿ ಚಿನ್ನವನ್ನು ಇಟ್ಟುಕೊಳ್ಳುವಂತಿರಲಿಲ್ಲ. ಆದರೆ, ಈ ಕಾಯಿದೆಯನ್ನು ಜೂನ್ 1990 ರಲ್ಲಿ ರದ್ದುಗೊಳಿಸಲಾಯಿತು. ಪ್ರಸ್ತುತ, ಒಬ್ಬ ವ್ಯಕ್ತಿ ಅಥವಾ ಕುಟುಂಬವು ಎಷ್ಟು ಚಿನ್ನವನ್ನು ಹೊಂದಬಹುದು ಎಂಬುದಕ್ಕೆ ಯಾವುದೇ ಕಾನೂನು ಮಿತಿಯಿಲ್ಲ. ನಿಮ್ಮ  ಬಳಿ ಇರುವ ಚಿನ್ನಕ್ಕೆ  ದಾಖಲೆ ಇರಬೇಕು ಅಷ್ಟೇ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link