ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಲು ಕಿಚ್ಚ ಸುದೀಪ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?
ಹಿಂದಿ ಬಿಗ್ ಬಾಸ್ ಬಳಿಕ, ಅತೀ ಹೆಚ್ಚು ಫೇಮಸ್ ಆಗಿರೋದು ಕನ್ನಡದ ಬಿಗ್ ಬಾಸ್. ಇನ್ನು ಈ ರಿಯಾಲಿಟಿ ಶೋ ಸಖತ್ ಹಿಟ್ ಆಗಲು ಕಾರಣ ವಿವಾದ, ನಾಟಕ, ಜಗಳ, ಸಂಬಂಧ ಹೀಗೆ ಹತ್ತು ಹಲವು ವಿಷಯಗಳು. ಈ ಎಲ್ಲಾ ವಿಷಯಗಳಿಂದನೇ ಸಖತ್ ಟಿ ಆರ್ ಪಿ ಪಡೆಯುತ್ತೆ ಈ ಕಾರ್ಯಕ್ರಮ.
ಇನ್ನು ಬಿಗ್ ಬಾಸ್ ಜನಪ್ರಿಯತೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ, ವಿಶ್ವಕಪ್ ಪ್ರಾರಂಭವಾದ ದಿನದಂದೇ ಬಿಗ್ ಬಾಸ್ ಕೂಡ ತನ್ನ ಹೊಸ ಸೀಸನ್’ನ್ನು ಬಿಡುಗಡೆ ಮಾಡಿತ್ತು. ಈ ಮಧ್ಯೆಯೂ ಟ್ರೆಂಡಿಂಗ್ ಕ್ರಿಯೆಟ್ ಮಾಡಿತ್ತು ಕನ್ನಡದ ಬಿಗ್ ಬಾಸ್ ಶೋ.
ಕನ್ನಡದ ಬಿಗ್ ಬಾಸ್ ಕೇವಲ ಇವಿಷ್ಟೇ ವಿಷಯದಿಂದ ಹಿಟ್ ಆಗಿಲ್ಲ, ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವ ನಟ ಕಿಚ್ಚ ಸುದೀಪ್’ರಿಂದಲೂ ಪ್ರಸಿದ್ಧಿ ಪಡೆದಿದೆ. ಬೇರೆ ಬೇರೆ ಭಾಷೆಗಳಿಗಿಂತಲೂ ಕನ್ನಡದ ಬಿಗ್ ಬಾಸ್ ಗತ್ತು-ಗಮ್ಮತ್ತನ್ನು ಉಳಿಸಿಕೊಂಡು ಬರುತ್ತಿರೋದು ಕಿಚ್ಚ ಆಡುವ ಮಾತುಗಳು ಎಂದರೆ ತಪ್ಪಾಗಲಾರದು.
ಸ್ಪರ್ಧಿಗಳಿಗೆ ಕಿವಿಮಾತನ್ನು ಹೇಳುವ ರೀತಿ, ತಪ್ಪಾದಾಗ ತಿದ್ದಿ ಮುನ್ನಡೆಸೋ ರೀತಿ, ಉತ್ತಮ ಕೆಲಸ ಮಾಡಿದವರು ಬೆನ್ನು ತಟ್ಟೋದು ಹೀಗೆ ಹಲವಾರು ವಿಷಯಗಳ ಜೊತೆ ಕಿಚ್ಚ ಕಾರ್ಯಕ್ರಮ ನಡೆಸಿಕೊಡೋ ರೀತಿ ಸಖತ್ ಇಂಟರೆಸ್ಟಿಂಗ್.
ಇನ್ನು ಕಿಚ್ಚ ಸುದೀಪ್ ತಮ್ಮ ಸ್ಟಾರ್’ಡಂಗೆ ಒಳಪಟ್ಟು, ರಿಯಾಲಿಟಿ ಷೋ ಹೋಸ್ಟ್ ಮಾಡಲು ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ?
ಬಿಗ್ ಬಾಸ್ ಕನ್ನಡ ಆವೃತ್ತಿಯ 11 ಸೀಸನ್’ಗಳನ್ನು ಸಹ ಕಿಚ್ಚ ಸುದೀಪ್ ಅವರೇ ಹೋಸ್ಟ್ ಮಾಡಿದ್ದಾರೆ. 2015ರಲ್ಲಿ ಕಲರ್ಸ್ ಕನ್ನಡ ಚಾನೆಲ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದಾಗ, ಮುಂದಿನ 5 ವರ್ಷಗಳವರೆಗೆ ಒಟ್ಟು 20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ಇನ್ನು ಕೆಲ ವರದಿಗಳ ಪ್ರಕಾರ, ಕಳೆದ ಸೀಸನ್’ನಲ್ಲಿ ತಮ್ಮ ಶುಲ್ಕದಲ್ಲಿ ಹೆಚ್ಚಳ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ನಿಖರ ಮಾಹಿತಿ ಲಭ್ಯವಿಲ್ಲ.