ಅದ್ಧೂರಿಯಾಗಿ ಸಪ್ತಪದಿ ತುಳಿದ ಪರಿಣಿತಿ- ರಾಘವ್ ಚಡ್ಡಾ..! ಗ್ರ್ಯಾಂಡ್ ಮದುವೆ ಬಜೆಟ್ ಎಷ್ಟು ಗೊತ್ತಾ..?
ಖ್ಯಾತ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಪರಿಣಿತಿ ರಾಘವ್ ವಿವಾಹ ಬಹಳ ಅದ್ಧೂರಿಯಾಗಿ ನೆರವೇರಿತು.
ಪರಿಣಿತಿ ಚೋಪ್ರಾ-ರಾಘವ್ ಚಟ್ಟಾ ಮದುವೆಯಲ್ಲಿ ಕೇವಲ 100-200 ಜನರು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ಈ ವಿವಾಹ ಸಮಾರಂಭದಲ್ಲಿ 5 ದೇಶಗಳ ವಿಶೇಷ ಖಾದ್ಯಗಳನ್ನು ಅತಿಥಿಗಳಿಗಾಗಿ ಮಾಡಿಸಲಾಗಿತ್ತು ಎಂದು ಹೇಳಲಾಗಿದೆ.
ಈ ಮದುವೆಗೆ ಸುಮಾರು 4-5 ಕೋಟಿ ವೆಚ್ಚವಾಗಿರಬಹುದು ಎಂಬ ಮಾಹಿತಿ ಇದೆ. ಇದು ಅತ್ಯಂತ ಅದ್ದೂರಿ ಬಾಲಿವುಡ್ ಮದುವೆಗಳಲ್ಲಿ ಒಂದಾಗಿದೆ.
ಕಳೆದ ಮೇ 13 ರಂದು ಪರಿಣಿತಿ-ರಾಘವ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿನ್ನೆ ಈ ಜೋಡಿ ಸಪ್ತಪದಿ ತುಳಿದರು.
ಪರಿಣಿತಿ ಚೋಪ್ರಾ ಮತ್ತು ರಾಘವ್ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಜೋಡಿಗೆ ಅಭಿಮಾನಿಗಳು ವಿಶ್ ಮಾಡಿದ್ದಾರೆ.