ವಿಶ್ವಕಪ್ ಟ್ರೋಫಿ ಗೆದ್ದು ಮಿಂಚಿದ ಆಸ್ಟ್ರೇಲಿಯಾಗೆ- ರನ್ನರ್ ಅಪ್ ಆದ ಭಾರತಕ್ಕೆ ಸಿಕ್ಕ ಹಣ ಒಟ್ಟು ಎಷ್ಟು ಕೋಟಿ ಗೊತ್ತಾ?
ನಾವಿಂದು ಈ ವರದಿಯಲ್ಲಿ ವಿಶ್ವಕಪ್ ಟ್ರೋಫಿ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಮತ್ತು ರನ್ನರ್ ಅಪ್ ಆದ ಭಾರತ ಕ್ರಿಕೆಟ್ ತಂಡಕ್ಕೆ ಸಿಕ್ಕ ಸಂಭಾವನೆ ಎಷ್ಟು ಕೋಟಿ ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಟೂರ್ನಿ ಪ್ರಾರಂಭಕ್ಕೂ ಮುನ್ನವೇ ಐಸಿಸಿ ಘೋಷಣೆ ಮಾಡಿದಂತೆ ಒಟ್ಟಾರೆ ಚಾಂಪಿಯನ್ ಆದ ತಂಡಕ್ಕೆ 4 ಮಿಲಿಯನ್ ಡಾಲರ್ ಅಂದರೆ ಭಾರತೀಯ ರುಪಾಯಿ ಲೆಕ್ಕದಲ್ಲಿ ಬರೋಬ್ಬರಿ 33 ಕೋಟಿ ಸಿಗಲಿದೆ.
ಇನ್ನು ರನ್ನರ್ ಅಪ್ ಆದ ತಂಡಕ್ಕೆ 2 ಮಿಲಿಯನ್ ಡಾಲರ್ ಅಂದರೆ 16.5 ಕೋಟಿ ರುಪಾಯಿ ಮೊತ್ತ ನೀಡಲಾಗುತ್ತದೆ.
ಒಟ್ಟಾರೆ ಬಹುಮಾನದ ಮೊತ್ತವನ್ನು 10 ಮಿಲಿಯನ್ ಡಾಲರ್ ಅಂದರೆ ಬರೋಬ್ಬರಿ 83 ಕೋಟಿ ರುಪಾಯಿ ಎಂದು ಈ ಹಿಂದೆ ಐಸಿಸಿ ಘೋಷಣೆ ಮಾಡಿತ್ತು.
ಇನ್ನು ಸೆಮಿಫೈನಲ್’ನಲ್ಲಿ ಸೋಲುಂಡ ಎರಡು ತಂಡಗಳಿಗೆ ಅಂದರೆ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ತಲಾ 6.65 ಕೋಟಿ ರುಪಾಯಿ ಲಭಿಸಿದೆ.
ಲೀಗ್ ಹಂತದಲ್ಲೇ ಸೋಲುಂಡು, ಹೊರಬಿದ್ದ 6 ತಂಡಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೆದರ್ಲೆಂಡ್ಸ್’ಗೆ ತಲಾ 100,000 ಡಾಲರ್ ಅಂದರೆ ರೂ. ಲೆಕ್ಕದಲ್ಲಿ 83.12 ಲಕ್ಷ ಸಿಕ್ಕಿದೆ.
ಇನ್ನು ಗುಂಪು ಹಂತದ ಪಂದ್ಯವನ್ನು ಗೆದ್ದ ಪ್ರತಿ ತಂಡಕ್ಕೆ 40,000 ಯುಎಸ್ ಡಾಲರ್ ಅಂದರೆ 33.25 ಲಕ್ಷ ರುಪಾಯಿ ಬಹುಮಾನ ಮೊತ್ತ ಸಿಗಲಿದೆ. ಉದಾಹರಣೆಯಾಗಿ ಹೇಳುವುದಾದರೆ ಲೀಗ್ ಹಂತದ ಪ್ರತೀ ಪಂದ್ಯಗಳನ್ನೂ ಭಾರತ ಗೆದ್ದಿದೆ. ಗೆದ್ದ ಪ್ರತಿ ಪಂದ್ಯಕ್ಕೂ 33.25 ಲಕ್ಷ ರೂ ಸಿಕ್ಕರೆ, ಟೀಂ ಇಂಡಿಯಾಗೆ 3 ಕೋಟಿ ರೂ. ಸಿಗುತ್ತದೆ.