Screen Time For Children: ಯಾವ ವಯಸ್ಸಿನ ಮಕ್ಕಳು ಎಷ್ಟೊತ್ತು ಸ್ಕ್ರೀನ್ ವೀಕ್ಷಿಸಬಹುದು? ಇಲ್ಲಿದೆ ಮಹತ್ವದ ಮಾಹಿತಿ
ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅತಿಯಾದ ಗ್ಯಾಜೆಟ್ಸ್ ಗಳ ಬಳಕೆಯಿಂದಾಗಿ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.
ಒಟ್ಟಾರೆ ಬೆಳವಣಿಗೆಗೆ ತಂತ್ರಜ್ಞಾನ ಅಗತ್ಯವೇ ಆಗಿರುವುದರಿಂದ ಫೋನ್, ಟಿವಿ ಬಳಕೆಯನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ, ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆ ದೃಷ್ಟಿಯಿಂದ ಸ್ಕ್ರೀನ್ ಅವಧಿಯನ್ನು ಹೊಂದಿಸುವುದು ಉತ್ತಮ ಆಯ್ಕೆಯಾಗಿದೆ.
ಸ್ಕ್ರೀನ್ ಅವಧಿಯು ಮಕ್ಕಳ ದೈಹಿಕ ಆರೋಗ್ಯದ ಮೇಲಷ್ಟೇ ಅಲ್ಲ, ಅವರ ಮಾನಸಿಕ ಆರೋಗ್ಯ, ಯೋಗಕ್ಷೇಮದ ಮೇಲೂ ಧನಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ.
ಮಕ್ಕಳಿಗೆ ಸ್ಕ್ರೀನ್ ಅವಧಿಯನ್ನು ಹೊಂದಿಸುವುದರ ಮಹತ್ವದ ಕುರಿತು ಆಸ್ಟ್ರೇಲಿಯಾದ ಮಾರ್ಗದರ್ಶನದಲ್ಲಿ ವಿವರಿಸಲಾಗಿದ್ದು, ಇದರಲ್ಲಿ ಮಕ್ಕಳು ನಿತ್ಯ ಎಷ್ಟು ದೈಹಿಕ ಚಟುವಟಿಕೆ, ನಿದ್ರೆ ಮತ್ತು ಪರದೆಯಲ್ಲಿ ಸಮಯ ಕಳೆಯಬೇಕು ಎಂದು ವಿವರಿಸಲಾಗಿದೆ. ಯಾವ ವಯಸ್ಸಿನ ಮಕ್ಕಳು ದಿನಕ್ಕೆ ಎಷ್ಟು ಅವಧಿ ಸ್ಕ್ರೀನ್ ವೀಕ್ಷಿಸಬಹುದು?
ಎರಡು ವರ್ಷದೊಳಗಿನ ಮಕ್ಕಳ ಕಣ್ಣುಗಳು ತುಂಬಾ ಸೂಕ್ಷ್ಮವಾಗಿರುವುದರಿಂದ ಈ ವಯಸ್ಸಿನ ಮಕ್ಕಳಿಗೆ ಟಿವಿ, ಸ್ಮಾರ್ಟ್ ಟಿವಿ ಸೇರಿದಂತೆ ಯಾವುದೇ ಸ್ಕ್ರೀನ್ ವೀಕ್ಷಣೆ ಉತ್ತಮವಲ್ಲ.
ಎರಡರಿಂದ ಐದು ವರ್ಷದವರೆಗಿನ ಮಕ್ಕಳು ನಿತ್ಯ ಗರಿಷ್ಠ ಎಂದರೆ 1 ಗಂಟೆಗಿಂತ ಹೆಚ್ಚು ಸ್ಕ್ರೀನ್ ವೀಕ್ಷಿಸಬಾರದು.
ಐದರಿಂದ 17 ವರ್ಷ ವಯಸ್ಸಿನ ಮಕ್ಕಳು ನಿತ್ಯ ಸ್ಕ್ರೀನ್ ವೀಕ್ಷಿಸಬಹುದಾದ ಗರಿಷ್ಠ ಮಿತಿ ಎರಡು ಗಂಟೆಗಳು.
ವರದಿಗಳ ಪ್ರಕಾರ, ಕೇವಲ 17 ರಿಂದ 23 ಪ್ರತಿಶತದಷ್ಟು ಆಸ್ಟ್ರೇಲಿಯನ್ ಪ್ರಿ-ಸ್ಕೂಲ್‌ಗಳು ಮತ್ತು 5 ರಿಂದ 12 ವರ್ಷ ವಯಸ್ಸಿನ 15% ಮಕ್ಕಳು ಮಾತ್ರ ಇದನ್ನು ಪೂರೈಸುತ್ತಾರೆ ಎಂದು ತಿಳಿದುಬಂದಿದೆ.