ನಿಂಬೆಯನ್ನು ನೇರವಾಗಿ ಮುಖಕ್ಕೆ ಹಚ್ಚುವುದು ಎಷ್ಟು ಸುರಕ್ಷಿತ?

Tue, 30 May 2023-5:41 pm,

ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿರುವ ನಿಂಬೆಹಣ್ಣು ನೈಸರ್ಗಿಕ ಸೌಂದರ್ಯವರ್ಧಕ ಎಂಬುದರಲ್ಲಿ ಎರಡು ಮಾತಿಲ್ಲ. ವಾಸ್ತವವಾಗಿ, ವಿಟಮಿನ್ ಸಿ ಚರ್ಮದಲ್ಲಿ ಕಾಲಜನ್ ಮಟ್ಟವನ್ನು ಹೆಚ್ಚಿಸುತ್ತದೆ. ಕಾಲಜನ್ ಒಂದು ಪ್ರೋಟೀನ್. ಇದು ಚರ್ಮದ ಮೇಲೆ ಹೊಳಪು ಪಡೆಯಲು ಮತ್ತು ಟ್ಯಾನ್ ಅನ್ನು ತೆಗೆದುಹಾಕಲು ಅತ್ಯುತ್ತಮ ಮನೆಮದ್ದು. ಆದರೆ, ನಿಂಬೆಯಲ್ಲಿ ಸಿಟ್ರಿಕ್ ಆಮ್ಲ, ಆಲ್ಫಾ ಹೈಡ್ರಾಕ್ಸಿ ಆಸಿಡ್ ಕೂಡ ಇದ್ದು, ಇದನ್ನು ನೇರವಾಗಿ ಮುಖಕ್ಕೆ ಹಚ್ಚುವುದರಿಂದ ಅದು ತ್ವಚೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. 

ಮುಖದ ಮೇಲೆ ನಿಂಬೆಯನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಹಲವರು ನಿಂಬೆಹಣ್ಣನ್ನು ಕತ್ತರಿಸಿ ನೇರವಾಗಿ ಮುಖಕ್ಕೆ ಉಜ್ಜುತ್ತಾರೆ. ನಿಂಬೆ ರಸವು 2 pH ಮಟ್ಟಕ್ಕಿಂತ ಹೆಚ್ಚು ಆಮ್ಲೀಯವಾಗಿದೆ. ಇದರಿಂದಾಗಿ ನಿಮ್ಮ ಚರ್ಮಕ್ಕೆ ಗಂಭೀರ ಹಾನಿಯನ್ನು ಉಂಟುಮಾಡಬಹುದು. ಎಂದು ನಿಮಗೆ ತಿಳಿದಿದೆಯೇ? ನಿಂಬೆಯಿಂದ ಉಂಟಾಗಬಹುದಾದ ಅಡ್ಡಪರಿಣಾಮಗಳ ಬಗ್ಗೆ ತಿಳಿಯೋಣ. 

ನಿಂಬೆ ರಸವು ತ್ವಚೆಗೆ ತುಂಬಾ ಪ್ರಯೋಜನಕಾರಿ. ಆದರೆ ಯಾವಾಗಲೂ ಚರ್ಮದ ಮೇಲೆ ನಿಂಬೆಯನ್ನು ನೇರವಾಗಿ ಅನ್ವಯಿಸುವುದು ಅಷ್ಟು ಸುರಕ್ಷಿತವಲ್ಲ.  ನೇರವಾಗಿ ಮುಖಕ್ಕೆ ಉಜ್ಜಿದರೆ ಚರ್ಮದ ಕಿರಿಕಿರಿ, ಮುಖ ಕೆಂಪಾಗುವುದು, ಹೈಪರ್ಪಿಗ್ಮೆಂಟೇಶನ್, ಬಿಸಿಲಿನಲ್ಲಿ ಕೆಂಪಾಗುವುದು ಮುಂತಾದ ಸಮಸ್ಯೆಗಳು ಎದುರಾಗುತ್ತವೆ.

ತ್ವಚೆಗೆ ನಿಂಬೆಯ ಪ್ರಯೋಜನವನ್ನು ಪಡೆಯಲು ಅದನ್ನು ಸರಿಯಾಗಿ ಅನ್ವಯಿಸುವ ವಿಧಾನವೂ ಕೂಡ ತಿಳಿದಿರಬೇಕು. ನಿಮ್ಮ ಮುಖದ ಮೇಲೆ ಕಪ್ಪು ಕಲೆಗಳು, ಕಲೆಗಳಿಂದ ನೀವು ತೊಂದರೆಗೊಳಗಾಗಿದ್ದರೆ, ನಿಂಬೆ ರಸವು ಅತ್ಯದ್ಭುತ ಮನೆಮದ್ದು ಎಂದು ಸಾಬೀತುಪಡಿಸಲಿದೆ. ಆದರೆ ಇದನ್ನು ನೇರವಾಗಿ ಮುಖಕ್ಕೆ ಹಚ್ಚುವ ಬದಲು ಅದರ ಬೇರೆ ಪದಾರ್ಥಗಳೊಂದಿಗೆ ಅದರ ಪೇಸ್ಟ್ ತಯಾರಿಸಿ ಹಚ್ಚಬಹುದು. 

ನಿಂಬೆ ರಸವನ್ನು ಮುಲ್ತಾನಿ ಮಿಟ್ಟಿ, ಕಡಲೆ ಹಿಟ್ಟು, ರೋಸ್ ವಾಟರ್ ಅಥವಾ ಗ್ಲಿಸರಿನ್ ಜೊತೆಗೆ ಬೆರೆಸಿ ಹಚ್ಚುವುದರಿಂದ ಇದು ತ್ವಚೆಗೆ ಲಾಭದಾಯಕ ಎಂದು ಸಾಬೀತು ಪಡಿಸಲಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link