96 ಕೆಜಿಯಿಂದ 45 ಕೆಜಿಗೆ ಇಳಿದಿದ್ದೇಗೆ ಗೊತ್ತಾ ಸೈಫ್ ಅಲಿ ಖಾನ್ ಪುತ್ರಿ..? ಸಾರಾ ಅಲಿ ಖಾನ್ ರೋಚಕ ವೈಟ್ ಲಾಸ್ ಜರ್ನಿ
Sara Ali khan weightloss journey: ಕೇದಾರನಾಥ್ ಚಿತ್ರದ ಮೂಲಕ ಫಿಲಿಂ ಇಂಡಸ್ಟ್ರಿಗೆ ಕಾಲಿಟ್ಟ ಸಾರಾ ಅಳಿ ಖಾನ್ ಬಾಲಿವುಡ್‌ನ ಖ್ಯಾತ ನಟ ಸೈಫ್ ಅಲಿ ಖಾನ್ ಅವರ ಮಗಳು. ನಟಿ ಸಿನಿಮಾಗೆ ಪ್ರವೇಶಿಸುವ ಮುಂಚೆ ಈಕೆಯ ತೂಕ ಬರೋಬ್ಬರಿ 96 ಕೆಜಿ. ಭಾರಿ ಗಾತ್ರದ ಮೈಮಾಟ ಹೊಂದಿದ್ದ ಈ ನಟಿ ಸಡನ್ ಆಗಿ ಸ್ಲಿಮ್ ಫಿಗರ್ ಆಗಿದ್ದೇಗೆ? ಹೇಗಿತ್ತು ಅವರ ವೈಟ್ ಲಾಸ್ ಜರ್ನಿ ಇಲ್ಲಿದೆ ಓದಿ ಕಂಪ್ಲೀಟ್ ಸ್ಟೋರಿ...
ನಟಿ ಸಾರಾ ಅಲಿ ಖಾನ್ ಸದ್ಯ ತಮ್ಮ ಮೈಮಾಟದಿಂದ ಬಾಲಿವುಡ್ ಫಿಲಿಂ ಇಂಡಸ್ಟ್ರಿಯಲ್ಲಿ ಮ್ಯಾಜಿಕ್ ಮಾಡುತ್ತಿದ್ದಾರೆ. ಆದರೆ, ಒಂದಾನೊಂದು ಕಾಲದಲ್ಲಿ ಅಂದರೆ ನಟಿ ಸಿನಿಮಾ ಇಂಡಸ್ಟ್ರಿಗೆ ಕಾಲಿಡುವ ಮುನ್ನ 90 ಕೆಜಿ ತೂಕ ಹೊಂದಿದ್ದರು, ಪಿಸಿಒಡಿ ಸಮಸ್ಯೆಯಿಂದ ಬಳಲುತ್ತಿದ್ದ ನಟಿ ಭಾರಿ ದಪ್ಪನೆಯ ಮೈಮಾಟವನ್ನು ಹೊಂದಿದ್ದರು.
ತನ್ನ ದೇಹದ ಗಾತ್ರವನ್ನು ನೋಡಿ ನಾಚಿಕೊಳ್ಳದೆ, ಹಿಂಜರಿಯದೆ ನಟಿ ಸ್ಲಿಮ್ ಆಗಲೇ ಬೆಕು ಎಂಬ ಪಣ ತೊಟ್ಟಿದ್ದರು. ಸಾಕಷ್ಟು ಫುಡಿ ಆಗಿದ್ದ ಆಕೆ ಸಮತೋಲಿತ ಜೀವನಶೈಲಿಯನ್ನು ಅನುಸರಿಸುತ್ತಾ, ವ್ಯಾಯಾಮವನ್ನು ಮಾಡುತ್ತಿದ್ದರು. ಎಷ್ಟೆ ಕಷ್ಟ ಆದರೂ ಕೂಡ ನಟಿ ತಮ್ಮ ಪರಿಶ್ರಮವನ್ನು ಬಿಡಲೇ ಇಲ್ಲ, ಸಣ್ಣ ಆಗಬೇಕು ಎಂಬ ಚಲದಿಂದ ಹಗಲು ರಾತ್ರಿ ವರ್ಕೌಟ್ ಮಾಡಿ ನಟಿ ಬರೋಬ್ಬರಿ 40 ಕೆಜಿ ತೂಕವನ್ನು ಇಳಿಸಿಕೊಂಡರು.
ಸಾರಾ ಕಡಿಮೆ-ಕಾರ್ಬ್, ಹೆಚ್ಚಿನ-ಪ್ರೋಟೀನ್ ಡಯಟ್ ಅನ್ನು ತನ್ನ ಆಹಾರ ಕ್ರಮಕ್ಕೆ ಸೇರಿಸಿಕೊಂಡಿದ್ದರು ಎಂದು ತಮ್ಮ ವೈಟ್ ಲಾಸ್ ಪಯಣದ ಕುರಿತು ನಟಿಯೇ ಸಂದರ್ಸನವೊಂದರಲ್ಲಿ ಬಹಿರಂಗ ಪಡಿಸಿದ್ದರು. ಇನ್ನೂ, ಈ ಸಂದರ್ಶನದಲ್ಲಿ ಮಾತನಾಡಿದ ನಟಿ ತನ್ನ ಆಹಾರ ಕ್ರಮದ ಕುರಿತು ಹೇಳುತ್ತಾ..ಕಾರ್ಬೋಹೈಡ್ರೇಟ್ ಒಳಗೊಂಡ ಆಹಾರವನ್ನು ಊಟಕ್ಕೆ ಮಾತ್ರ ಸೇವಿಸುತ್ತಾ, ಫೈಬರ್ ಅಂಶಕ್ಕಾಗಿ ಹಣ್ಣುಗಳನ್ನು ಮಾತ್ರ ಸೇವಿಸುತ್ತಿದ್ದರಂತೆ.
ತನ್ನ ದೇಹದ ತೂಕವನ್ನು ಇಳಿಸಿಕೊಳ್ಳಲು ನಟಿ ಕೊತ್ತಂಬರಿ ಮತ್ತು ಜೀರಿಗೆ ನೀರನ್ನು ಸೇವಿಸುವುದಷ್ಟೆ ಅಲ್ಲದೆ, ಇದರ ಜೊತೆಗೆ, ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳನ್ನು ಬೆರೆಸಿ ತಯಾರಿಸಿದ ಹಸಿರು ಸ್ಮೂಥಿಯಂತಹ ವಿವಿಧ ಮನೆಯಲ್ಲಿ ತಯಾರಿಸಿದ ಪಾನೀಯಗಳನ್ನು ಕುಡಯುತ್ತಿದ್ದರಂತೆ.
ಕೇವಲ ಆರೋಗ್ಯಕರ ಆಹಾರ ಅಷ್ಟೆ ಅಲ್ಲ, ನಟಿ ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳು ವ್ಯಾಯಾಮ ಮಾಡುತ್ತಾ, ಜೊತೆಯಲ್ಲಿಯೇ ಜಿಮ್‌ಗೂ ಸಹ ಹೋಗುತ್ತಾ ಕಸರುತ್ತು, ಮಾಡುತ್ತಾ ಪಿಸಿಒಡಿ ಕಾರಣದಿಂದ ಹೆಚ್ಚಾಗಿದ್ದ ತನ್ನ ತೂಕವನ್ನು ಉಳಿಸಿಕೊಂಡು ನಟಿ ಇಂದು ಬಾಲಿವುಡ್‌ನಲ್ಲಿ ಮೋಡಿ ಮಾಡುತ್ತಿದ್ದಾರೆ.