White hair: ಈ ಬೀಜವನ್ನು ಅರೆದು ಹಚ್ವಿದರೆ ಬಿಳಿ ಕೂದಲು ಪರ್ಮನೆಂಟ್ ಆಗಿ ಕಪ್ಪಾಗುವುದಲ್ಲದೆ, ದಷ್ಟಪುಷ್ಟವಾಗಿ ಬೆಳೆಯುತ್ತೆ!

Wed, 07 Feb 2024-3:43 pm,

25 ರಿಂದ 30 ವರ್ಷ ವಯಸ್ಸಿನಲ್ಲಿ ಮೊದಲ ಬಾರಿಗೆ ಬಿಳಿ ಕೂದಲು ಕಾಣಿಸಿಕೊಂಡಾಗ ಭಯಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳುತ್ತಾರೆ. ಇದಕ್ಕಾಗಿ ಹೇರ್ ಡೈ ಮತ್ತು ದುಬಾರಿ ಉತ್ಪನ್ನಗಳನ್ನು ಬಳಸುವ ಅಗತ್ಯವೂ ಇರಲ್ವಂತೆ. ಆದರೆ ನೈಸರ್ಗಿಕವಾಗಿ ಅಂತಹ ಬಿಳಿ ಕೂದಲನ್ನು ಅಡುಗೆಮನೆಯಲ್ಲಿ ಸಿಗುವ ಕೆಲ ವಸ್ತುಗಳಿಂದ ಕಪ್ಪಾಗಿಸಬಹುದು ಎಂದು ಹೇಳಲಾಗುತ್ತದೆ.

ಪ್ರೌಢಾವಸ್ಥೆಯಲ್ಲಿ ಅನೇಕ ಯುವಕರು ಬಿಳಿ ಕೂದಲಿನಿಂದ ತಾಪತ್ರಯ ಅನುಭವಿಸುತ್ತಾರೆ. ಅನಾರೋಗ್ಯಕರ ಆಹಾರ ಪದ್ಧತಿ ಈ ಬಿಳಿ ಕೂದಲಿಗೆ ಕಾರಣವಾಗುತ್ತದೆ. ಅದೂ ಅಲ್ಲದೆ ಕೆಲಸದ ಒತ್ತಡ ಮತ್ತು ಹಾರ್ಮೋನ್ ಬದಲಾವಣೆಯೂ ಇದಕ್ಕೆ ಪ್ರಮುಖ ಕಾರಣ.

ಆರೋಗ್ಯಕರ, ಗಟ್ಟಿಮುಟ್ಟಾದ, ಕಪ್ಪು ಕೂದಲಿಗೆ ಖಂಡಿತವಾಗಿ ಮೆಂತ್ಯ ಕಾಳುಗಳನ್ನು ಬಳಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಇದರಲ್ಲಿರುವ ಪೋಷಕಾಂಶಗಳು ಕೂದಲು ಕಪ್ಪಾಗಲು ಸಹಾಯ ಮಾಡುತ್ತದೆ. ಮೆಂತ್ಯ ಬೀಜಗಳನ್ನು ನೀರಿನಲ್ಲಿ ನೆನೆಸಿ ನಂತರ ಅವುಗಳನ್ನು ತೆಂಗಿನಕಾಯಿ ಅಥವಾ ಬಾದಾಮಿ ಎಣ್ಣೆಯೊಂದಿಗೆ ಮೃದುವಾದ ಪೇಸ್ಟ್ ಆಗಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ.

ಕೂದಲನ್ನು ಕಪ್ಪಾಗಿಸಲು ಕೆಮಿಕಲ್ ಶಾಂಪೂ ಅಥವಾ ಡೈಗಳನ್ನು ಎಂದಿಗೂ ಬಳಸಬೇಡಿ. ಇದು ಕೂದಲಿನ ಉಳಿದ ಭಾಗವನ್ನು ಹಾನಿಗೊಳಿಸಬಹುದು. ಆದರೆ ಕಪ್ಪು ಕೂದಲಿಗೆ ಗೋರಂಟಿ ಬಳಸಬಹುದು. ಇದು ನೈಸರ್ಗಿಕ ಮದ್ದಾಗಿದ್ದು, ಕೂದಲಿಗೆ ಯಾವುದೇ ಹಾನಿ ಉಂಟುಮಾಡುವುದಿಲ್ಲ.

ನೆಲ್ಲಿಕಾಯಿ ಕೂದಲನ್ನು ಕಪ್ಪಾಗಿಸುವುದು ಮಾತ್ರವಲ್ಲದೆ ತುಂಬಾ ಸ್ಟ್ರಾಂಗ್ ಆಗಿ ಮಾಡುತ್ತದೆ. ನೆಲ್ಲಿಕಾಯಿ ಪುಡಿಯನ್ನು ಗೋರಂಟಿಗೆ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ಕಪ್ಪಾಗುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link