ನೀವು ಕೂಡಾ ಆಯುಷ್ಮಾನ್ ಯೋಜನೆಯ ಫಲಾನುಭವಿಯೇ ? ತಿಳಿದುಕೊಳ್ಳುವ ವಿಧಾನ ಇಲ್ಲಿದೆ
ಆಪ್ಕೆ ದ್ವಾರ್ ಆಯುಷ್ಮಾನ್ ಅಭಿಯಾನವನ್ನು ಈ ವರ್ಷದ ಫೆಬ್ರವರಿ 1 ರಂದು ಪ್ರಾರಂಭಿಸಲಾಯಿತು. ಮಾರ್ಚ್ 14 ರಂದು ಸುಮಾರು 8,35,089 ಜನರು ಈ ಯೋಜನೆಯಡಿ ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ. ಅಂಕಿ ಅಂಶಗಳ ಪ್ರಕಾರ ಮೋದಿ ಸರ್ಕಾರದ ಈ ಯೋಜನೆಯಿಂದ ಲಾಭ ಪಡೆದ ಫಲಾನುಭವಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.
ಆಯುಷ್ಮಾನ್ ಯೋಜನೆಯಡಿ ಬಡ ಕುಟುಂಬಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಕಷ್ಟದಲ್ಲಿರುವ ಜನರಿಗೆ ಈ ಯೋಜನೆ ತುಂಬಾ ಉಪಯುಕ್ತವಾಗಿದೆ. ಆಯುಷ್ಮಾನ್ ಯೋಜನೆಯ ಫಲಾನುಭವಿಗಳು ಸರ್ಕಾರಿ ಆಸ್ಪತ್ರೆಗಳನ್ನು ಹೊರತುಪಡಿಸಿ ದೇಶದ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆಯಬಹುದು.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಈ ಕಾರ್ಡ್ ಮೂಲಕ ಲಕ್ಷಾಂತರ ಜನರಿಗೆ ಚಿಕಿತ್ಸೆ ನೀಡಲಾಗಿದೆ. ಯೋಜನೆ ಪ್ರಾರಂಭವಾದಾಗಿನಿಂದ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್ ಘಡ, ಪಂಜಾಬ್, ಉತ್ತರಾಖಂಡ್, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಿಂದ 1.2 ಮಿಲಿಯನ್ ಜನರು ಗೋಲ್ಡನ್ ಕಾರ್ಡ್ ಪಡೆದುಕೊಂಡಿದ್ದಾರೆ.
ನೀವು ಆಯುಷ್ಮಾನ್ ಯೋಜನೆಯ ಲಾಭವನ್ನು ಪಡೆಯಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ಮಾಹಿತಿಯನ್ನು ಕುಳಿತಲ್ಲೇ ಪಡೆದುಕೊಳ್ಳಬಹುದು. ಆರೋಗ್ಯ ಯೋಜನೆ ವೆಬ್‌ಸೈಟ್ pmjay.gov.in ನ ಮುಖಪುಟದಲ್ಲಿ Am I Eligible' ಎಂಬ ಒಪ್ಶನ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ಮೇಲೆ ಎಲ್ಲಾ ವಿವರಗಳನ್ನು ತುಂಬಿ. ಮಾರ್ಗಸೂಚಿಗಳ ಪ್ರಕಾರ, ನೀವು ಯೋಜನೆಯ ಲಾಭ ಪಡೆಯಬಹುದಾದರೆ ಅದರ ಮಾಹಿತಿ ನಿಮ್ಮ ಸ್ಕ್ರೀನ್ ಮೇಲೆ ಬರುತ್ತದೆ.
ಆಯುಷ್ಮಾನ್ ಯೋಜನೆಯ ನಿಯಮಗಳ ಪ್ರಕಾರ, ನೀವು ಈ ಯೋಜನೆಯ ಫಲಾನುಭವಿಗಳಾಗಿದ್ದರೆ, ಹತ್ತಿರದ ಜನಸೇವ ಕೇಂದ್ರ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗೆ ಹೋಗಿ ನಿಮ್ಮ ಗೋಲ್ಡ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಆಧಾರ್ ಕಾರ್ಡ್ನ ಪ್ರತಿಯನ್ನು ಸಲ್ಲಿಸಿದಾಗ, ಆಯುಷ್ಮಾನ್ ಯೋಜನೆಯ ಗೋಲ್ಡ್ ಕಾರ್ಡ್ ಪಡೆಯಬಹುದು.