Health Insurance: ಅತ್ಯುತ್ತಮ ಆರೋಗ್ಯ ವಿಮಾ ಯೋಜನೆಯನ್ನು ಹೇಗೆ ಆಯ್ಕೆ ಮಾಡುವುದು?

Wed, 21 Jun 2023-8:18 pm,

ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಬಹಳ ಮುಖ್ಯ. ಜನರ ಆರೋಗ್ಯ ಚೆನ್ನಾಗಿದ್ದರೆ ಜೀವನ ಚೆನ್ನಾಗಿ ಕಳೆಯಬಹುದು. ಅನೇಕ ಬಾರಿ ಜನರು ಹಲವಾರು ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಏನಾದರೂ ಅಹಿತಕರ ಘಟನೆಗಳು ಸಂಭವಿಸುವುದರಿಂದ ಸಮಸ್ಯೆಗೆ ಸಿಲುಕುತ್ತಾರೆ. ಇದರಿಂದಾಗಿ ಜನರು ಆಸ್ಪತ್ರೆಗಳಿಗೆ ದಾಖಲಾಗಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಆರೋಗ್ಯ ವಿಮೆ ಹೊಂದಿದ್ದರೆ ಅವರು ಸಾಕಷ್ಟು ಆರ್ಥಿಕ ಸಹಾಯ ಪಡೆಯುತ್ತಾರೆ. ಉತ್ತಮ ಆರೋಗ್ಯ ವಿಮಾ ಯೋಜನೆಯನ್ನು ಆಯ್ಕೆ ಮಾಡುವಾಗ ಜನರು ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿರಿ.

ಹಲವಾರು ವೈದ್ಯಕೀಯ ಸಮಸ್ಯೆಗಳ ವಿರುದ್ಧ ನಿಮ್ಮನ್ನು ರಕ್ಷಿಸುವ ಆರೋಗ್ಯ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಡೇ ಕೇರ್ ವೆಚ್ಚಗಳು, ಸಾರಿಗೆ, ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ಕಾಯಿಲೆಗಳು ಸೇರಿದಂತೆ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. ಇಂದು ನೀವು ಆಯ್ಕೆ ಮಾಡಿದ ಪಾಲಿಸಿಯಲ್ಲಿನ ಕವರೇಜ್ ಅನ್ನು ನೆನಪಿನಲ್ಲಿಡಿ. ನಿಮ್ಮನ್ನು ಹೊರತುಪಡಿಸಿ ನಿಮ್ಮ ಕುಟುಂಬದ ಯಾವ ಸದಸ್ಯರು ಕವರೇಜ್‌ನ ಪ್ರಯೋಜನವನ್ನು ಪಡೆಯುತ್ತಾರೆ ಅನ್ನೋದು ತುಂಬಾ ಮುಖ್ಯ.

ನಿಮ್ಮ ಅಗತ್ಯಗಳನ್ನು ಪೂರೈಸುವ ಆರೋಗ್ಯ ಯೋಜನೆಯನ್ನು ಖರೀದಿಸುವುದು ಮುಖ್ಯವಾದರೂ, ಅದು ಪಾಕೆಟ್ ಸ್ನೇಹಿಯಾಗಿರುವುದು ಅಷ್ಟೇ ಮುಖ್ಯ. ಆರೋಗ್ಯ ವಿಮೆಯನ್ನು ಖರೀದಿಸುವಾಗ ಬಜೆಟ್ ಬಹಳ ಮುಖ್ಯವಾದ ಅಂಶವಾಗಿದೆ. ಆದರೆ ಯೋಜನೆಯ ವೆಚ್ಚವನ್ನು ಪರಿಗಣಿಸುವ ಮೊದಲು ನೀವು ಯೋಜನೆಯ ಪ್ರಯೋಜನಗಳನ್ನು ಪರಿಗಣಿಸಬೇಕು. ನೀವು ಸರಿಯಾಗಿ ಕವರೇಜ್ ಮತ್ತು ಪ್ರೀಮಿಯಂ ಸಹ ಕೈಗೆಟುಕುವ ದರದಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆರಂಭದಲ್ಲಿ ಸಮಂಜಸವಾದ ಬೆಲೆಯ ಆರೋಗ್ಯ ರಕ್ಷಣೆಯನ್ನು ಖರೀದಿಸುವುದು ಬುದ್ಧಿವಂತ ನಿರ್ಧಾರ. ಇದರ ನಂತರ ಕಾಲಾನಂತರದಲ್ಲಿ ಅದನ್ನು ಪರಿಶೀಲಿಸುತ್ತಿರಬೇಕು.

ನೀವು ವೈದ್ಯಕೀಯ ವಿಮೆ ಖರೀದಿಸಿದಾಗ ಯೋಜನೆಯು ಎಷ್ಟು ವರ್ಷಗಳವರೆಗೆ ವ್ಯಾಲಿಡಿಟಿ ಹೊಂದಿದೆ ಅಥವಾ ಅದು ಸೀಮಿತ ನವೀಕರಣವನ್ನು ನೀಡುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ನಂತರದ ವರ್ಷಗಳಲ್ಲಿ ನಿಮಗೆ ಹೆಚ್ಚಿನ ಆರೋಗ್ಯ ಯೋಜನೆ ಅಗತ್ಯವಿರುತ್ತದೆ. ಆದ್ದರಿಂದ ಜೀವಿತಾವಧಿಯ ನವೀಕರಣವನ್ನು ನೀಡುವ ಆರೋಗ್ಯ ಯೋಜನೆಗಳನ್ನು ಆಯ್ಕೆಮಾಡುವುದು ಉತ್ತಮ.

ನೀವು ಆರೋಗ್ಯ ವಿಮೆಯನ್ನು ತೆಗೆದುಕೊಳ್ಳುತ್ತಿರುವ ವಿಮಾ ಕಂಪನಿಯ settlement ratioವನ್ನು ಪರಿಶೀಲಿಸಿ. ವಿವಿಧ ವಿಮಾ ಕಂಪನಿಗಳ settlement ratioವನ್ನು ಹೋಲಿಕೆ ಮಾಡಿ. ಅಂತಿಮವಾಗಿ High settlement ratioವನ್ನು ಹೊಂದಿರುವ ವಿಮೆಯನ್ನು ಆಯ್ಕೆಮಾಡಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link