ಗೃಹ ಸಾಲವನ್ನು ಕಡಿಮೆ ಸಮಯದಲ್ಲಿ ತೀರಿಸಲು ಇಲ್ಲಿದೆ ಸರಳ ಉಪಾಯ..! ತಕ್ಷಣ ಹೀಗೆ ಮಾಡಿ
ನೀವು ಸಾಲ ತೆಗೆದುಕೊಂಡು ಮನೆ ಕನಸು ನನಸಾಗಿಸಿಕೊಳ್ಳಬೇಕಾಗುತ್ತದೆ.. ಆದರೆ ಮಾಡಿದ ಸಾಲವು ಅಷ್ಟು ಬೇಗ ತೀರುವುದಿಲ್ಲ.. ಸಾಲದ ಹೊರೆ ತುಂಬಾ ಜನರನ್ನು ಬಾಧಿಸುತ್ತದೆ. ಸಾಲವನ್ನು ತ್ವರಿತವಾಗಿ ಕ್ಲಿಯರ್ ಮಾಡಲು ಏನು ಮಾಡಬೇಕು ಎಂಬುವುದನ್ನು ಈಗ ತಿಳಿಯೋಣ ಬನ್ನಿ...
ಗೃಹ ಸಾಲವು ದೊಡ್ಡದಾಗಿರುವುದರಿಂದ, ಮಾಸಿಕ ಕಂತು (EMI) ದೀರ್ಘಾವಧಿಯಲ್ಲಿ ಪಾವತಿಸಬೇಕಾಗುತ್ತದೆ. ಇದು ಅನೇಕ ರೀತಿಯ ಹಾನಿಯನ್ನು ಉಂಟುಮಾಡುತ್ತದೆ. ಅಂತಹ ಸಮಯದಲ್ಲಿ ನೀವು ಎಷ್ಟು ಬೇಗ ಸಾಲವನ್ನು ಪಾವತಿಸುತ್ತೀರೋ ಅಷ್ಟು ಒಳ್ಳೆಯದು..
ಹೋಮ್ ಲೋನ್ EMI ಗಳನ್ನು ಕಡಿಮೆ ಮಾಡಿ.. ನಿಮ್ಮ ಹೋಮ್ ಲೋನನ್ನು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಲು ಪೂರ್ವ-ಪಾವತಿ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಬೋನಸ್ ಅಥವಾ ಇತರ ಯಾವುದೇ ವಿಧಾನದ ಮೂಲಕ ನೀವು ದೊಡ್ಡ ಮೊತ್ತದ ಹಣವನ್ನು ಪಡೆದಾಗ ಅದನ್ನು ಹೋಮ್ ಲೋನ್‌ಗೆ ಕಟ್ಟಿಬಿಡಿ.. ಇದು ಸಾಲದ ಮೂಲ ಮೊತ್ತವನ್ನು ಕಡಿಮೆ ಮಾಡುತ್ತದೆ.
ಪೂರ್ವಪಾವತಿ ಮಾಡುವ ಮೂಲಕ, ಸಾಲದ ಅವಧಿ ಮತ್ತು EMI ಎರಡನ್ನೂ ಕಡಿಮೆ ಮಾಡಬಹುದು. ಇದು ನಿಮಗೆ ಎರಡು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಲೋನ್ ಅವಧಿಯನ್ನು ಕಡಿಮೆ ಮಾಡುವುದರಿಂದ ನಿಮ್ಮ ಒತ್ತಡ ಕಡಿಮೆ ಮಾಡುವುದಲ್ಲದೆ ನಿಮಗೆ ಕಡಿಮೆ ಬಡ್ಡಿ ಬೀಳುತ್ತದೆ..
EMI ಅನ್ನು ಹೆಚ್ಚಿಸುವುದರಿಂದ ನಿಮ್ಮ ಹೋಮ್ ಲೋನ್ ಟೆನ್ಶನ್ ಕೂಡ ಕಡಿಮೆಯಾಗುತ್ತದೆ. ನಿಮ್ಮ ಪ್ಯಾಕೇಜ್ ಹೆಚ್ಚಿದ್ದರೆ ಅಥವಾ ನೀವು ಬೇರೆ ಕಂಪನಿಗೆ ಸೇರಿದ್ದರೆ ಮತ್ತು ನಿಮ್ಮ ಸಂಬಳ ಹೆಚ್ಚಿದ್ದರೆ, ನಿಮ್ಮ EMI ಅವಧಿಯನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಿ..
ನಿಮ್ಮ EMI ಗಳನ್ನು ಕಡಿಮೆ ಮಾಡುವ ಆಯ್ಕೆಯನ್ನು ನಿಮ್ಮ ಬ್ಯಾಂಕ್ ಹೊಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ತಿಳಿದುಕೊಳ್ಳುವುದು ಉತ್ತಮ. ಪ್ರತಿ ವರ್ಷ ಹೆಚ್ಚಿನ ಬ್ಯಾಂಕ್‌ಗಳು ಕಂತನ್ನು ಮಾರ್ಪಡಿಸುವ ಆಯ್ಕೆಯನ್ನು ನೀಡುತ್ತವೆ. ನಿಮ್ಮ ಸಂಬಳ ಹೆಚ್ಚಿದ್ದರೆ, ನೀವು ಇದರ ಲಾಭವನ್ನು ಪಡೆದುಕೊಳ್ಳಬಹುದು.. ನಿಮ್ಮ ಗೃಹ ಸಾಲವನ್ನು ತ್ವರಿತವಾಗಿ ತೀರಿಸಬಹುದು.
ನೀವು ಯಾವಾಗಲೂ ನಿಮ್ಮ ಗೃಹ ಸಾಲದ ಬಡ್ಡಿ ದರಗಳನ್ನು ಇತರ ಬ್ಯಾಂಕ್‌ಗಳ ದರಗಳೊಂದಿಗೆ ಹೋಲಿಸಬೇಕು. ನಿಮ್ಮ ಬ್ಯಾಂಕ್ ಹೆಚ್ಚಿನ ಬಡ್ಡಿ ದರವನ್ನು ವಿಧಿಸುತ್ತಿದ್ದರೆ, ಬಡ್ಡಿ ದರವನ್ನು ಕಡಿಮೆ ಮಾಡಲು ಬ್ಯಾಂಕ್‌ನೊಂದಿಗೆ ಮಾತನಾಡಿ. ಅವರು ಒಪ್ಪದಿದ್ದರೆ, ನಿಮ್ಮ ಗೃಹ ಸಾಲದ ಮೇಲೆ ಕಡಿಮೆ ಬಡ್ಡಿ ದರವನ್ನು ನೀಡುವ ಬ್ಯಾಂಕ್‌ಗೆ ಸಾಲವನ್ನು ವರ್ಗಾಯಿಸುವುದು ಉತ್ತಮ.