ಅನ್ನ ತಿನ್ನುವ ಅಡ್ಡ ಪರಿಣಾಮ ತಪ್ಪಿಸಲು ಈ ರೀತಿ ಅಕ್ಕಿಯನ್ನು ಬೇಯಿಸಿ
ಶೆಫೀಲ್ಡ್ ವಿಶ್ವವಿದ್ಯಾನಿಲಯವು 'Parboiling With Absorption Method ವಿಧಾನವನ್ನು ಕಂಡುಹಿಡಿದಿದೆ. ಇದರಲ್ಲಿ ಇನ್‌ಸ್ಟಿಟ್ಯೂಟ್ ಫಾರ್ ಸಸ್ಟೈನಬಲ್ ಫುಡ್‌ನ ತಂಡವು ಅಕ್ಕಿ ಬೇಯಿಸುವ ಅತ್ಯುತ್ತಮ ವಿಧಾನವನ್ನು ವಿವರಿಸಿದೆ. ಅಡುಗೆಯ ಮೊದಲು ನೀರು ಕುದಿಸಿ ಅದರಲ್ಲಿ 5 ನಿಮಿಷಗಳ ಕಾಲ ಬೇಯಿಸಲಾಗುತ್ತದೆ. ಇದು ಆರ್ಸೆನಿಕ್ ಅನ್ನು ತೆಗೆದುಹಾಕುತ್ತದೆ. ನಂತರ, ಮತ್ತೆ ಅಕ್ಕಿಗೆ 2 ಕಪ್ ನೀರು ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಬೇಯಿಸಿ. ಆಮೇಲೆ ಅಕ್ಕಿ ನೀರನ್ನು ಹೀರಿಕೊಳ್ಳುತ್ತದೆ. ನಂತರ ಗ್ಯಾಸ್ ಆಫ್ ಮಾಡಿ.
ಈ ರೀತಿಯಾಗಿ ಅನ್ನವನ್ನು ತಯಾರಿಸುವುದರಿಂದ, ಆರ್ಸೆನಿಕ್ ನಂತಹ ಹಾನಿಕಾರಕ ಅಂಶಗಳನ್ನು ತೆಗೆದು ಹಾಕುತ್ತದೆ. ಅಲ್ಲದೆ, ಅದರ ಸೂಕ್ಷ್ಮ ಪೋಷಕಾಂಶಗಳು ಕೂಡಾ ಅನ್ನದಲ್ಲಿಯೇ ಉಳಿಯುತ್ತದೆ. ಈ ರೀತಿಯಾಗಿ ಅನ್ನವನ್ನು ಬೇಯಿಸಿ ಚಿಕ್ಕ ಮಗುವಿಗೆ ಕೂಡಾ ಅದನ್ನು ತಿನ್ನಬಹುದು.
ಸ್ಥೂಲಕಾಯ ರೋಗಿಗಳು ಸಾಮಾನ್ಯವಾಗಿ ಅನ್ನ ತಿನ್ನುವುದನ್ನು ತಪ್ಪಿಸುತ್ತಾರೆ. ಅನ್ನ ತಿಂದರೆ ತೂಕ ಹೆಚ್ಚುತ್ತದೆ ಎಂದು ಭಾವಿಸುತ್ತಾರೆ. ಆದರೆ ಈ ವಿಧಾನದಲ್ಲಿ ಅನ್ನ ಬೇಯಿಸಿದರೆ ಯಾರು ಬೇಕಾದರೂ ಅನ್ನವನ್ನು ತಿನ್ನಬಹುದು. ಆದರೆ ಅನ್ನ ತಿಂದ ಕೂಡಲೇ ನಿದ್ದೆ ಮಾಡಬಾರದು.
ಮಧುಮೇಹ ರೋಗಿಗಳಿಗೆ ಅನ್ನ ಮಾಡುವ ಈ ವಿಧಾನವು ಅತ್ಯುತ್ತಮವಾಗಿದೆ. ಇದು ಅಕ್ಕಿಯ ಪಿಷ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವುದಿಲ್ಲ. ಈ ರೀತಿಯಾಗಿ ನೀವು ಬಿಳಿ ಅಕ್ಕಿ ಮಾತ್ರವಲ್ಲದೆ ಬ್ರೌನ್ ರೈಸ್ ಕೂಡ ಬೇಯಿಸಬಹುದು.