Reliance Jio eSIM: Jio ಬಳಕೆದಾರರಿಗೊಂದು ಸಂತಸದ ಸುದ್ದಿ, ಕರೆ ಮಾಡಲು ಫೋನ್ ಗೆ ಬೇಕಿಲ್ಲ ಸಿಮ್

Mon, 01 Mar 2021-7:11 pm,

1. Jio e SIM ಹೇಗೆ ಪಡೆಯಬೇಕು? (How To Buy Jio eSIM) - ಒಂದು ವೇಳೆ ನೀವೂ ಕೂಡ Reliance Jio eSIM ಲಾಭ ಪಡೆಯಲು ಬಯಸುತ್ತಿದ್ದರೆ, ನೀವು ನಿಮ್ಮ ಹತ್ತಿರದಲ್ಲಿರುವ Reliance Digital ಅಥವಾ Jio Store ಗೆ ಭೇಟಿ ನೀಡಬೇಕು. ಅಲ್ಲಿ ನೀವು ನಿಮ್ಮ ಫೋಟೋ ಹಾಗೂ ಐಡಿ ಪ್ರೂಫ್ ನೀಡಬೇಕು. ಒಂದು ವೇಳೆ ನಿಮ್ಮ ಹತ್ತಿರದಲ್ಲಿರುವ ಜಿಯೋ ಸ್ಟೋರ್ ಬಗ್ಗೆ ನಿಮಗೆ ಮಾಹಿತಿ ಇಲ್ಲ ಎಂದಾದರೆ ನೀವು ಟೆಲ್ಕೋ ನೀಡಿರುವ ಟೂಲ್ ಅನ್ನು ಉಪಯೋಗಿಸಬಹುದು. ಇದು ನಿಮಗೆ ನಿಮ್ಮ ಹತ್ತಿರದಲ್ಲಿರುವ ಟೆಲಿಕಾಂ ಕಚೇರಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ.

2. ಹೊಸ Jio eSIM ಹೇಗೆ ಸಕ್ರೀಯಗೊಳಿಸಬೇಕು? (How To Activate eSIM) - ಹೊಸ Jio eSIM ಸಂಪರ್ಕವನ್ನು ಸಕ್ರಿಯಗೊಳಿಸಲು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಒಂದು ವೈಶಿಷ್ಟ್ಯವನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. eSIM ಹೊಂದಾಣಿಕೆಯ ಡಿವೈಸ್ ಗಳು ಈ ಸಿಮ್ ಅನ್ನು ಸ್ವಯಂಚಾಲಿತವಾಗಿ ಕಾನ್ಫಿಗರ್ ಮಾಡಿಕೊಳ್ಳುತ್ತವೆ. ಒಂದು ವೇಳೆ ನೀವು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿರುವ  eSIM ಅನ್ನು ಆಕಸ್ಮಿಕವಾಗಿ ಅಳಿಸಿದರೆ, ನೀವು ಮತ್ತೆ ಹತ್ತಿರದ ರಿಲಯನ್ಸ್ ಡಿಜಿಟಲ್ ಮತ್ತು ಜಿಯೋ ಅಂಗಡಿಗೆ ಹೋಗಿ ಅದನ್ನು ಮತ್ತೆ ಸಕ್ರಿಯಗೊಳಿಸಬೇಕಾಗುತ್ತದೆ. ಈ ಬಾರಿಯೂ ಕೂಡ ನೀವು  ಫೋಟೋ ಮತ್ತು ಐಡಿ ಪ್ರೂಫ್‌ನ ಪ್ರತಿ ನೀಡಬೇಕಾಗುತ್ತದೆ.

3. ಭೌತಿಕ SIM ಕಾರ್ಡ್ ಅನ್ನು eSIM ಆಗಿ ಪರಿವರ್ತಿಸಬಹುದೇ? - ಈಗ ನೀವು ಭೌತಿಕ SIM ಕಾರ್ಡ್ ಅನ್ನು eSIM ಆಗಿ ಪರಿವರ್ತಿಸಬಹುದೇ? ಎಂಬುದರ ಕುರಿತು ಯೋಚಿಸುತ್ತಿರಬಹುದು. ಇದರ ಉತ್ತರ ಹೌದು! ನೀವು ನಿಮ್ಮ Reliance Jio ಭೌತಿಕ SIM ಕಾರ್ಡ್ ಅನ್ನು ನಿಮ್ಮ ಡಿವೈಸ್ ನಿಂದ ಒಂದು SMS ಕಳುಹಿಸುವ ಮೂಲಕ eSIM ಗೆ ಪರಿವರ್ತಿಸಬಹುದು. ಏಕೆಂದರೆ ಈಗಾಗಲೇ ನಿಮ್ಮ ಡಿವೈಸ್ ನಲ್ಲಿ ಕನೆಕ್ಷನ್ ಸಕ್ರೀಯವಾಗಿದ್ದು, ಸಿಮ್ ಕಾನ್ಫಿಗರ್ ಕೂಡ ಆಗಿರುತ್ತದೆ. ಇದೆ ಪ್ರೋಸೆಸ್ ಅನ್ನು ಬಳಸಿ ನೀವು ನಿಮ್ಮ Jio eSIM ಅನ್ನು ಮತ್ತೆ ನಾರ್ಮಲ್ ಭೌತಿಕ SIM ಕಾರ್ಡ್ ಆಗಿ ಪರಿವರ್ತಿಸಬಹುದು. ಆದರೆ, ಬಳಕೆದಾರರು Jio eSIM ಸೇವೆಗಳನ್ನು ಆನಂದಿಸಲು ಮೊದಲು ತಮ್ಮ ಡಿವೈಸ್ eSIM ಬಳಕೆಯನ್ನು ಸಮರ್ಥಿಸುತ್ತದೆಯೋ ಇಲ್ಲವೋ ಎಂಬುದನ್ನು ಮೊದಲು ತಿಳಿಯಬೇಕಾಗಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link