ತರಾತುರಿಯಲ್ಲಿ ಕೂದಲಿಗೆ ಕಲರ್ ಮಾಡುವುದು ಸಾಧ್ಯವಾಗದಿದ್ದರೆ, ಈ ರೀತಿ ಬಿಳಿ ಕೂದಲು ಮರೆ ಮಾಡಿಕೊಳ್ಳಿ
ಹೆಚ್ಚಿನ ಬಿಳಿ ಕೂದಲನ್ನು ಹೆಡ್ ಸ್ಕಾರ್ಫ್‌ನಿಂದ ಮರೆಮಾಡಬಹುದು. ಹೆಡ್ ಸ್ಕಾರ್ಫ್ ಅಗಲವು ಹೆಚ್ಚಿದ್ದರೆ, ಒಣ ಕೂದಲನ್ನು ಸಹ ಮುಚ್ಚಬಹುದು.
ಫ್ರೆಂಚ್ ಬ್ರೇಡ್ ಶೈಲಿಯ ಮೂಲಕ ನೀವು ಬಿಳಿ ಕೂದಲನ್ನು ಸುಲಭವಾಗಿ ಮರೆಮಾಡಬಹುದು. ಹಾಗೆಯೇ ಈ ಲುಕ್ ನಲ್ಲಿ ಮಹಿಳೆಯರು ತುಂಬಾ ಸೊಗಸಾಗಿ ಕಾಣುತ್ತಾರೆ.
ಹೇರ್‌ಬ್ಯಾಂಡ್ ಧರಿಸಿ, ಕೂದಲಿನ ಬುಡದ ಬಿಳಿ ಬಣ್ಣವನ್ನು ಮರೆಮಾಡುವುದು ಸಾಧ್ಯವಾಗುತ್ತದೆ. ಈ ಲುಕ್ ನಲ್ಲಿ ಕೂಡಾ ಮಹಿಳೆಯರು ಇನ್ನಷ್ಟು ಸುಂದರವಾಗಿ ಕಾಣುತ್ತಾರೆ.
ಕೂದಲು ಪಾರ್ಟಿಶಿಯನ್ ಮಾಡುವ ಬದಿಯನ್ನು ಬದಲಾಯಿಸಿಕೊಳ್ಳಿ. ಒಂದು ಬದಿಯ ಕೂದಲು ಹೆಚ್ಚು ಬಿಳಿಯಾಗಿದ್ದರೆ, ಇನ್ನೊಂದು ಬದಿಯಿಂದ ಕೂದಲು ವಿಭಜಿಸಿಕೊಳ್ಳಿ .
ನೀವು ಬಿಳಿ ಕೂದಲನ್ನು ತ್ವರಿತವಾಗಿ ಮರೆಮಾಡಲು ಬಯಸುವುದಾದರೆ ಟೋಪಿ ಧರಿಸುವುದಕ್ಕಿಂತ ಸುಲಭ ಮತ್ತು ವೇಗದ ಮಾರ್ಗ ಬೇರೊಂದಿಲ್ಲ. ಟೋಪಿ ಧರಿಸಿದರೆ ಕೂದಲನ್ನು ಕಟ್ಟುವುದು ಅನಿವಾರ್ಯವಲ್ಲ.