ನೀವು ಖರೀದಿಸಿದ ಸಿಲಿಂಡರ್ ಫುಲ್ ಇದ್ಯಾ ಅಥವಾ ಅರ್ಧಂಬರ್ಧ ತುಂಬಿದ್ಯಾ? ಸುಲಭವಾಗಿ ಮನೆಯಲ್ಲೇ ಹೀಗೆ ಚೆಕ್ ಮಾಡಿ
ಇತ್ತೀಚಿನ ದಿನಗಳಲ್ಲಿ ಸಿಲಿಂಡರ್ ಫುಲ್ ಬರಲ್ಲ ಎಂಬುದು ಅನೇಕ ಮಹಿಳೆಯರ ಕಂಪ್ಲೆಂಟ್. ಹೆಚ್ಚು ದಿನಗಳ ಕಾಲ ಸಿಲಿಂಡರ್ ಬರುತ್ತಿಲ್ಲ, ಏನೋ ಮೋಸ ನಡೆಯುತ್ತಿದೆ ಎಂದೂ ಕೆಲವರು ದೂರುವುದು ಉಂಟು.
ಹೀಗಿರುವಾಗ ಖರೀದಿಸಿದ ಸಿಲಿಂಡರ್ ಫುಲ್ ಇದೆಯಾ ಅಥವಾ ಅರ್ಧಂಬರ್ದ ತುಂಬಿದೆಯೇ ಎಂಬುದನ್ನು ನೀವೇ ಸುಲಭವಾಗಿ ಮನೆಯಲ್ಲೇ ಪತ್ತೆ ಮಾಡಬಹುದು. ಆ ಸ್ಮಾರ್ಟ್ ಉಪಾಯಗಳು ಯಾವುವು ಎಂಬುದನ್ನು ಮುಂದೆ ತಿಳಿದುಕೊಳ್ಳೋಣ.
ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಸಹಾಯದಿಂದ ಅನಿಲವನ್ನು ಬಳಸಿದಾಗ, ಜ್ವಾಲೆಯ ಬಣ್ಣವು ನೀಲಿ ಬಣ್ಣದ್ದಾಗಿರುವುದನ್ನು ನೀವು ಗಮನಿಸಿರಬೇಕು. ಆದರೆ, ಸಿಲಿಂಡರ್ ಖಾಲಿಯಾದಾಗ, ಈ ಬಣ್ಣವು ಕ್ರಮೇಣ ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಹೀಗಿರುವಾಗ ಯಾವುದೇ ಸಮಯದಲ್ಲಾದರೂ ಗ್ಯಾಸ್ ಮುಗಿಯಬಹುದು ಎಂಬುದನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೆ, ಖರೀದಿಸಿದ ತಕ್ಷಣ ಈ ವಿಧಾನವನ್ನು ಅನುಸರಿಸಿ ಫುಲ್ ಇದೆಯೋ ಅಥವಾ ಅರ್ಧ ಇದೆಯೋ ಎಂಬುದನ್ನು ಸಹ ಚೆಕ್ ಮಾಡಬಹುದು,
ಗ್ಯಾಸ್ ಸಿಲಿಂಡರ್ ಖಾಲಿಯಾಗುತ್ತಿರುವಾಗ, ಟ್ಯಾಂಕ್ ಸುತ್ತಲೂ ಗ್ಯಾಸ್ʼನ ಬಲವಾದ ವಾಸನೆ ಬರಲು ಪ್ರಾರಂಭಿಸುತ್ತದೆ. ಇದಲ್ಲದೆ, ಕೆಲವೊಮ್ಮೆ ಗ್ಯಾಸ್ ಹೊತ್ತಿಸಿದಾಗ, ಕಪ್ಪು ಹೊಗೆ ಬರಲು ಪ್ರಾರಂಭಿಸುತ್ತದೆ.
ಈ ಎರಡು ವಿಧಾನಗಳ ಹೊರತಾಗಿ, ಒದ್ದೆಯಾದ ಬಟ್ಟೆಯ ಸಹಾಯದಿಂದ ಸಿಲಿಂಡರ್ʼನಲ್ಲಿ ಎಷ್ಟು ಗ್ಯಾಸ್ ಇದೆ ಎಂಬುದರ ನಿಖರವಾದ ಅಂದಾಜನ್ನು ಮಾಡಬಹುದು. ಮೊದಲು ಬಟ್ಟೆಯನ್ನು ನೀರಿನಲ್ಲಿ ನೆನೆಸಿ ಒದ್ದೆ ಮಾಡಿ. ನಂತರ ಸಿಲಿಂಡರ್ ಸುತ್ತಲೂ ಬಟ್ಟೆಯನ್ನು ಕಟ್ಟಿ. ಸುಮಾರು 1 ನಿಮಿಷ ಈ ರೀತಿ ಸಿಲಿಂಡರ್ ಮೇಲೆ ಬಟ್ಟೆಯನ್ನು ಬಿಡಿ. ನಂತರ ಅದನ್ನು ತೆಗೆದುಹಾಕಿ.
ಅದಾದ ಬಳಿಕ ಸಿಲಿಂಡರ್ ಅನ್ನು ಎಚ್ಚರಿಕೆಯಿಂದ ನೋಡಿ. ಹೀಗೆ ಮಾಡುವುದರಿಂದ ಸಿಲಿಂಡರ್ʼನ ಕೆಲವು ಭಾಗವು ಒಣಗಿರುವುದನ್ನು ಕಾಣಬಹುದು. ಇನ್ನೂ ಕೆಲವು ಭಾಗವು ತೇವವಾಗಿರುತ್ತದೆ. ಈಗ ತೇವವಾಗಿರುವಷ್ಟು ಜಾಗದ ಪ್ರಮಾಣದಲ್ಲಿ ಸಿಲಿಂಡರ್ʼನಲ್ಲಿ ಎಷ್ಟು ಗ್ಯಾಸ್ ಉಳಿದಿದೆ ಎಂಬುದನ್ನು ಪತ್ತೆ ಹಚ್ಚಬಹುದು. ಅಂದಹಾಗೆ ಸಿಲಿಂಡರ್ʼನ ಖಾಲಿ ಭಾಗವು ಒಣಗಲು ಪ್ರಾರಂಭವಾಗುತ್ತದೆ.