ನಿಮ್ಮ ಕಾರನ್ನು ನೀವು ಸರಿಯಾಗಿ ನಿರ್ವಹಿಸುತ್ತಿದ್ದೀರಾ ? ಕಾರಿನ ಬಗ್ಗೆ ನೀವೆಷ್ಟು ಕಾಳಜಿ ವಹಿಸುತ್ತೀರಿ?
ನಿಮ್ಮ ಕಾರು ಲಾಕ್‌ಡೌನ್ ಆಗದಿರಲು, ಕಾರಿನ ಇಂಧನ ಟ್ಯಾಂಕ್ ಯಾವಾಗಲೂ ಫುಲ್ ಆಗಿರಬೇಕು. ಹೀಗಾದಾಗ ಮೊಯಿಶ್ಚರ್ ಸಮಸ್ಯೆ ಎದುರಾಗುವುದಿಲ್ಲ.
ಕಾರ್ ಬ್ಯಾಟರಿ ಬಹಳ ಮುಖ್ಯ. ಕನಿಷ್ಠ 20 ನಿಮಿಷಗಳ ಕಾಲ ಇದನ್ನು ವಾರಕ್ಕೊಮ್ಮೆ ಚಾರ್ಜ್ ಮಾಡಿ. ಕಾರನ್ನು ದೀರ್ಘಕಾಲದವರೆಗೆ ಬಳಸದಿದ್ದರೆ, ಬ್ಯಾಟರಿಯ -ve ಟರ್ಮಿನಲ್ ಅನ್ನು ತೆಗೆದುಹಾಕಿ.
ಕಾರನ್ನು ಕವರ್ ನಿಂದ ಮುಚ್ಚಬೇಕು. ಇದು ನಿಮ್ಮ ಕಾರಿನ ಹೊಳಪನ್ನು ಹಾಗೇ ಉಳಿಸುತ್ತದೆ. ಅಲ್ಲದೆ, ಕಾರಿನ ಮೇಲೆ ಧೂಳು ನಿಲ್ಲುವುದನ್ನು ತಪ್ಪಿಸಬಹುದು.
ಕಾರಿನ ಸ್ಟೀರಿಂಗ್ ವೀಲ್ ಅಥವಾ ಕಾರಿನ ಒಳಭಾಗದಲ್ಲಿರುವ ಟಚ್ ಪಾಯಿಂಟ್‌ಗಳನ್ನು ಸ್ವಚ್ಛವಾಗಿಡಿ. ಶುಚಿಗೊಳಿಸುವಾಗ ಕಾರ್ ಶಾಂಪೂ ಅಥವಾ ಸೋಪ್ ಮತ್ತು ನೀರನ್ನು 30:70 ಅನುಪಾತದಲ್ಲಿ ಬಳಸಿ
ಕಾರನ್ನು ಸ್ವಲ್ಪ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುವ ಮೂಲಕ ಟೈರ್ ಪ್ರೆಶರ್ ನೋಡಿಕೊಳ್ಳಿ. ಟೈರ್‌ನ ರಬ್ಬರ್‌ನಲ್ಲಿ ಕಟ್ ಇದೆಯೇ ಎನ್ನುವುದನ್ನು ನೋಡಿಕೊಳ್ಳಿ. ಟೈರ್‌ನಲ್ಲಿ ಸಾಕಷ್ಟು ಏರ್ ಪ್ರೆಶರ್ ಇದ್ದರೆ, ರಬ್ಬರ್‌ನಲ್ಲಿ ಕಟ್ ಬೀಳುವುದಿಲ್ಲ. ಕಾರಿನ ವೈಪರ್ ಆರ್ಮ್ಸ್ ಕೂಡ ಮೇಲಕೆತ್ತಿದ ರೀತಿಯಲ್ಲಿರಬೇಕು.