ಚಳಿಗಾಲದಲ್ಲಿ ಕೇವಲ 12 ದಿನಗಳಲ್ಲಿ ತೂಕ ಇಳಿಸುತ್ತೆ ಈ ಅದ್ಭುತ ಜಹಾ..!
ವಿಶೇಷವಾಗಿ ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳಲು ಬಯಸುವವರು ಅನಾರೋಗ್ಯಕರ ಆಹಾರವನ್ನು ತ್ಯಜಿಸಬೇಕು. ಮುಂಜಾನೆ ಬೇಗ ಎದ್ದು ಮನೆಯಲ್ಲೇ ನಡೆಯುವುದು ಉತ್ತಮ ಎನ್ನುತ್ತಾರೆ ವೈದ್ಯಕೀಯ ತಜ್ಞರು.
ಚಳಿಗಾಲದಲ್ಲಿ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಆಹಾರಕ್ರಮವನ್ನು ಅನುಸರಿಸಬೇಕು. ಇದಲ್ಲದೇ ಯೋಗಾಸನಗಳನ್ನು ಮಾಡುವುದರಿಂದಲೂ ಸುಲಭವಾಗಿ ಉತ್ತಮ ಫಲಿತಾಂಶ ಪಡೆಯಬಹುದು. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ಪ್ರತಿದಿನ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಈ ಚಹಾವು ಅನೇಕ ಪೋಷಕಾಂಶಗಳಿಂದ ತುಂಬಿದೆ. ಹಾಗಾಗಿ ಈ ಟೀ ಕುಡಿಯುವುದರಿಂದ ಆರೋಗ್ಯ ಸುಧಾರಿಸುವುದಲ್ಲದೆ ದೀರ್ಘಕಾಲದ ಕಾಯಿಲೆಗಳು ದೂರವಾಗುತ್ತವೆ.
ಚಳಿಗಾಲದಲ್ಲಿ ಬೇಗ ತೂಕ ಇಳಿಸಿಕೊಳ್ಳಲು ಬಯಸುವವರು ಗ್ರೀನ್ ಟೀ ಕುಡಿಯಲೇಬೇಕು. ಇದರಲ್ಲಿರುವ ಕೆಲವು ಆ್ಯಂಟಿಆಕ್ಸಿಡೆಂಟ್‌ಗಳು ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ತೂಕವನ್ನು ನಿಯಂತ್ರಿಸುತ್ತದೆ. ಅಲ್ಲದೆ, ಅವು ದೇಹದಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ಹೊರಹಾಕುತ್ತವೆ.
ಕಪ್ಪು ಚಹಾವು ಕೆಫೀನ್ ಅನ್ನು ಹೊಂದಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ದಿನಕ್ಕೆರಡು ಬಾರಿ ಈ ಟೀ ಕುಡಿಯುವುದರಿಂದ ದೇಹದ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು. ಇದಲ್ಲದೆ, ಇದು ಹೃದಯಾಘಾತದ ಸಮಸ್ಯೆಗಳನ್ನು ಸಹ ತಡೆಯುತ್ತದೆ. ಆದ್ದರಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಕಪ್ಪು ಚಹಾವನ್ನು ಸೇರಿಸಿಕೊಳ್ಳಬೇಕು.