ನಿಮಗೆ ಗೊತ್ತಿಲ್ಲದೇ ನಿಮ್ಮ ಪಿಪಿಎಫ್ ಖಾತೆ ಕ್ಲೋಸ್ ಆಗಿರಬಹುದು ! ಇಂದೇ ಚೆಕ್ ಮಾಡಿಕೊಳ್ಳಿ
ಪಿಪಿಎಫ್‌ನಲ್ಲಿ ಹೂಡಿಕೆಯ ಅಡಿಯಲ್ಲಿ ವಾರ್ಷಿಕವಾಗಿ ಪಡೆಯುವ ಬಡ್ಡಿ ಮತ್ತು ಮೆಚುರಿಟಿ ಮೊತ್ತ ಎರಡೂ ತೆರಿಗೆ ಮುಕ್ತವಾಗಿರುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಕೆಲವು ನಿಯಮಗಳನ್ನು ಪಾಲಿಸುವುದು ಮುಖ್ಯ. ನಿಯಮಗಳ ಪ್ರಕಾರ, ಪ್ರತಿ ವರ್ಷ ಕನಿಷ್ಠ 500 ರೂ. ಹೂಡಿಕೆ ಮಾಡಬೇಕಾಗುತ್ತದೆ.
ನೀವು ವಾರ್ಷಿಕವಾಗಿ 500 ರೂಪಾಯಿಗಳನ್ನು ಠೇವಣಿ ಮಾಡಲು ಸಾಧ್ಯವಾಗದಿದ್ದರೆ, PPF ಖಾತೆಯು ನಿಷ್ಕ್ರಿಯವಾಗುತ್ತದೆ. ಆರ್ಥಿಕ ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂ.ವರೆಗೆ ಠೇವಣಿ ಮಾಡಬಹುದು.
ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದರೆ, ಪಿಪಿಎಫ್ ಖಾತೆಯು ನಿಷ್ಕ್ರಿಯಗೊಂಡ ನಂತರ ಅಲ್ಲಿಯವರೆಗೆ ಮಾಡಿರುವ ಹೂಡಿಕೆ ಮೇಲೆ ಬಡ್ಡಿ ಸಿಗುತ್ತದೆ. ಆದರೆ ಅದು ಅನೇಕ ಅನಾನುಕೂಲಗಳನ್ನು ಹೊಂದಿದೆ. ಮೊದಲ ಅನಾನುಕೂಲವೆಂದರೆ ನೀವು PPF ಖಾತೆಯಲ್ಲಿ ಸಾಲವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದನ್ನು ಮತ್ತೆ ಪ್ರಾರಂಭಿಸಲು ದಂಡವನ್ನು ಪಾವತಿಸಬೇಕಾಗುತ್ತದೆ.
ಪ್ರತಿ ವರ್ಷ ಈ ಯೋಜನೆಯಲ್ಲಿ ಹಣ ಜಮಾ ಮಾಡಿದರೆ ಒಳ್ಳೆಯದು. ಒಂದು ವೇಳೆ ಯಾವುದೋ ಕಾರಣಕ್ಕೆ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವುದು ಸಾಧ್ಯವಾಗದೆ ಇದ್ದಲ್ಲಿ ಬಾಕಿ ಹಣವನ್ನು ಠೇವಣಿ ಮಾಡಿ ಕ್ಲೋಸ್ PPF ಖಾತೆಯನ್ನು ಪ್ರಾರಂಭಿಸಲು, ಲಿಖಿತ ಅರ್ಜಿಯನ್ನು ಸಲ್ಲಿಸಬೇಕು.
ಖಾತೆಯನ್ನು ತೆರೆದ ನಂತರ, ನಿಮ್ಮ ಖಾತೆಯನ್ನು ಕ್ಲೋಸ್ ಮಾಡುವವರೆಗೆ ಪ್ರತಿ ವರ್ಷ 500 ರೂ.ಗಳ ದರದಲ್ಲಿ ಹಣವನ್ನು ಅದರಲ್ಲಿ ಜಮಾ ಮಾಡಬೇಕಾಗುತ್ತದೆ. ಅಲ್ಲದೆ, ವರ್ಷಕ್ಕೆ 500 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಇಡಬೇಕಾಗುತ್ತದೆ.