ನಂಬರ್ ಸೇವ್ ಮಾಡದೆಯೂ WhatsApp ಸಂದೇಶ ಕಳುಹಿಸಬಹುದು: ಹೇಗೆಂದು ತಿಳಿಯಿರಿ...

Thu, 22 Jul 2021-6:54 pm,

ಅನೇಕ ಬಾರಿ ಫೋನ್‌ನಲ್ಲಿ ನಂಬರ್ ಸೇವ್ ಮಾಡದೆಯೂ ಆ ಸಂಪರ್ಕಗಳಿಗೆ ನಾವು ಸಂದೇಶಗಳು, ಫೋಟೋಗಳು ಅಥವಾ ವೀಡಿಯೊಗಳನ್ನು ಕಳುಹಿಸಬೇಕಾದ ಸಂದರ್ಭ ಎದುರಾಗುತ್ತವೆ. ಆದರೆ ಈ ವಿಶೇಷ ವೈಶಿಷ್ಟ್ಯದ ಬಗ್ಗೆ ಮಾಹಿತಿ ಇರುವುದಿಲ್ಲ. ಅತ್ಯಂತ ಸುಲಭ ಮತ್ತು ಸರಳವಾಗಿ ಈ ರೀತಿ ನಾವು ಸಂದೇಶಗಳನ್ನು ಮತ್ತೊಬ್ಬರಿಗೆ ಕಳುಹಿಸಬಹುದಾಗಿದೆ.  

ಯಾವುದೇ ಬಳಕೆದಾರರು ಐಒಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ಫೋನಿನಲ್ಲಿ ಸೇವ್ ಮಾಡದಿರುವ ನಂಬರ್ ಗಳಿಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವುದು ಹೇಗೆ..?

ಮೊದಲು ನಿಮ್ಮ ಯಾವುದೇ ಐಒಎಸ್ ಮತ್ತು ಆಂಡ್ರಾಯ್ಡ್‌ ಫೋನ್ ಬ್ರೌಸರ್ ಓಪನ್ ಮಾಡಿರಿ. ಬಳಿಕ ಈ ಕೆಳಗಿನ ಲಿಂಕ್ ಅನ್ನು ಕಾಪಿ ಮಾಡಿ ಅಡ್ರೆಸ್ ಬಾರ್ ನಲ್ಲಿ ಪೇಸ್ಟ್ ಮಾಡಿ.

ಲಿಂಕ್ ಇಲ್ಲಿದೆ ನೋಡಿ: ‘http://wa.me/xxxxxxxxxx’ or ‘http://api.whatsapp.com/send?phone=xxxxxxxxxxx’

ಯಾವುದೇ ‘Xxxxxxxxxx’ ಫೋನ್ ನಂಬರ್ ಗೆ ನೀವು ಸಂದೇಶವನ್ನು ಕಳುಹಿಸಬೇಕಾದರೆ ನೀವು ದೇಶದ ಕೋಡ್‌ನೊಂದಿಗೆ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಉದಾ: ನೀವು ಈ ಸಂಖ್ಯೆ +919911111111 ಗೆ ಸಂದೇಶವನ್ನು ಕಳುಹಿಸಲು ಬಯಸಿದರೆ, ನೀವು ಅಡ್ರೆಸ್ ಬಾರ್ ನಲ್ಲಿ http://wa.me/919911111111 ಅನ್ನು ನಮೂದಿಸಬೇಕು. ಇಲ್ಲಿ ನೀಡಲಾದ 91 ಸಂಖ್ಯೆಯು ಭಾರತ ದೇಶದ ಸಂಕೇತವಾಗಿದೆ.

ನೀವು ಅಡ್ರೆಸ್ ಬಾರ್ ನಲ್ಲಿ ಲಿಂಕ್ ಹಾಕಿದ ಬಳಿಕ WhatsApp web ಆಪ್ಶನ್ ಕ್ಲಿಕ್ ಮಾಡಿ.  

ಬಳಿಕ ನೀವು ನಿಮ್ಮ ಮೊಬೈಲ್ ಸಂಖ್ಯೆಯ WhatsApp web ಪುಟವನ್ನು ತೆರೆಯಿರಿ.

ಈಗ ನೀವು ನಂಬರ್ ಸೇವ್ ಮಾಡಿರದ ವ್ಯಕ್ತಿಗೆ ಸುಲಭವಾಗಿ ವಾಟ್ಸಾಪ್ ಸಂದೇಶವನ್ನು ಕಳುಹಿಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link