White Hair Remedies: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸರಳ ಮದ್ದುಗಳು
ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಹಲವು ಉತ್ಪನ್ನಗಳು ಲಭ್ಯವಿವೆ. ಆದರೂ, ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು.
ವಾರಕ್ಕೆ ಒಂದೆರಡು ಬಾರಿ ಕಪ್ಪು ಎಳ್ಳಿನಿಂದ ತಯಾರಿಸಿದ ಖಾದ್ಯಗಳನ್ನು ತಿನ್ನುವುದರಿಂದ ಬಿಳಿ ಕೂದಲಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ನೆಲ್ಲಿಕಾಯಿಯನ್ನು ಕತ್ತರಿಸಿ, ಒಣಗಿಸಿ ಬಳಿಕ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಅದು ಕಪ್ಪಾಗುವವರೆಗೂ ಕುದಿಸಿ. ಬಳಿಕ ಈ ಎಣ್ಣೆಯನ್ನು ತಂಪಾಗಲು ಬಿಟ್ಟು ಗಾಜಿನ ಬಾಟಲಿಯಲ್ಲಿ ಶೇಖರಿಸಿಡಿ. ನಿಯಮಿತವಾಗಿ ಈ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡುವುದರಿಂದ ಕೂದಲು ಗಾಢ ಕಪ್ಪಾಗುತ್ತದೆ.
ಕರಿಬೇವಿನ ಸೊಪ್ಪು ಕಣ್ಣಿನ ಆರೋಗ್ಯದಂತೆ ಕೂದಲಿನ ಆರೋಗ್ಯಕ್ಕೂ ಪ್ರಯೋಜನಕಾರಿ. ವಾರಕ್ಕೆ ಎರಡು ಬಾರಿ ಮೊಸರಿನಲ್ಲಿ ಕರಿಬೇವಿನ ಪುಡಿ ಬೆರೆಸಿ ಕೂದಲಿಗೆ ಅನ್ವಯಿಸುವುದರಿಂದ ಕೂದಲು ಕರಿಮಣಿಯಂತೆ ಹೊಳೆಯುತ್ತದೆ.
ವಿಟಮಿನ್ ಸಿ, ಎ ಮತ್ತು ಕಬ್ಬಿಣಾಂಶ ಸಮೃದ್ಧ ದಾಸವಾಳದ ಹೂವಿನ ಪೇಸ್ಟ್ ತಯಾರಿಸಿ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಇದನ್ನು ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.