ಕೊಬ್ಬರಿ ಎಣ್ಣೆಯಲ್ಲಿ ಈ ಪುಡಿ, ರಸ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಬುಡದಿಂದಲೂ ಕಪ್ಪಾಗುತ್ತೆ..!
ನೀವು ಬಿಳಿ ಕೂದಲಿನ ಸಮಸ್ಯೆಯಿಂದ ಬೇಸತ್ತಿದ್ದೀರಾ? ಇದಕ್ಕಾಗಿ ಮಾರುಕಟ್ಟೆಯ ದುಬಾರಿ ಪ್ರಾಡಕ್ಟ್ ಬೇಡವೇ ಬೇಡ... ಬದಲಿಗೆ ಕೊಬ್ಬರಿ ಎಣ್ಣೆಯನ್ನು ಸರಿಯಾಗಿ ಬಳಸುವ ವಿಧಾನ ತಿಳಿಯಿರಿ.
* ಟೀ ಸೊಪ್ಪು * ಕೊಬ್ಬರಿ ಎಣ್ಣೆ * ನಿಂಬೆ ರಸ
ಸಿಲ್ಕಿ, ಸ್ಮೂತ್, ಕಪ್ಪಾದ ಕೂದಲಿಗೆ ಟೀ ಸೊಪ್ಪು ಚಮತ್ಕಾರಿ ಎಂದು ಹೇಳಲಾಗುತ್ತದೆ.
ಕೊಬ್ಬರಿ ಬಳಕೆಯಿಂದ ತಲೆ ಹೊಟ್ಟು, ಕೂದಲು ಉದುರುವಿಕೆ, ಶುಷ್ಕ ಕೂದಲು ಹೀಗೆ ಕೂದಲಿನ ಹಲವು ಸಮಸ್ಯೆಗಳನ್ನು ಬಗೆಹರಿಸಬಹುದು.
ನಿಂಬೆ ಹಣ್ಣಿನ ರಸದ ಬಳಕೆಯಿಂದ ನೆತ್ತಿ ಸ್ವಚ್ಛಗೊಂಡು, ತಲೆಹೊಟ್ಟು, ಕೂದಲಿನ ತುರಿಕೆಯನ್ನು ನಿವಾರಿಸುತ್ತದೆ.
ಮೊದಲಿಗೆ ನೀವು ಮನೆಯಲ್ಲಿ ಬಳಸುವ ಟೀ ಸೊಪ್ಪನ್ನು (2ಚಮಚ) ಚೆನ್ನಾಗಿ ಕುಟ್ಟಿ ಪುಡಿ ಮಾಡಿ. ಒಂದು ಬಟ್ಟಲಿನಲ್ಲಿ ಅರ್ಧದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿ, ಪುಡಿ ಮಾಡಿದ ಟೀ ಪುಡಿ ಹಾಗೂ ಕಾಲು ಚಮಚ ನಿಂಬೆ ರಸವನ್ನು ಹಾಕಿ ಬೆರೆಸಿಡಿ.
ನೀವು ತಲೆಗೆ ಸ್ನಾನ ಮಾಡುವ ಎರಡು ಗಂಟೆ ಮೊದಲು ಈ ಹೇರ್ ಪ್ಯಾಕ್ ಅನ್ನು ಕೂದಲಿನ ಬಿಡಕ್ಕೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ. ಬಳಿಕ ಹೇರ್ ವಾಶ್ ಮಾಡಿದರೆ. ನಿಯಮಿತವಾಗಿ ಇದನ್ನು ಬಳಸುವುದರಿಂದ ಕೂದಲು ಕಪ್ಪಾಗಿ ಕಾಂತಿಯುತವೂ ಆಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.