ಕೂದಲು ಉದುರುವಿಕೆಯನ್ನು ತಡೆಯಲು ಮೆಂತ್ಯ ಕಾಳನ್ನು ಹೀಗೆ ಬಳಸಿ!
ಕೂದಲು ಉದುರುವಿಕೆ ಸಾಮಾನ್ಯವಾದ ಸಮಸ್ಯೆಯಾಗಿದ್ದು.. ಇದಕ್ಕೆ ಸುಲಭ ಪರಿಹಾರವೆಂದರೇ ಮೆಂತ್ಯ ಕಾಳು. ಇದು ತಲೆಹೊಟ್ಟನ್ನು ನಿವಾರಿಸಿ ಕೂದಲನ್ನು ದಷ್ಟ ಪುಷ್ಟವಾಗಿ ಬೆಳೆಯುವಂತೆ ಮಾಡುತ್ತದೆ.
ಈ ಮೆಂತ್ಯ ಬೀಜಗಳು ಕೆಲವು ಔಷಧೀಯ ಗುಣಗಳನ್ನು ಹೊಂದಿದ್ದು ಬೋಳು, ಕೂದಲು ಉದುರುವಿಕೆ, ದುರ್ಬಲ ಮತ್ತು ಬಿಳಿ ಕೂದಲನ್ನು ಹೋಗಲಾಡಿಸುತ್ತದೆ..
ಮೆಂತ್ಯ ಬೀಜಗಳನ್ನು ಬಳಸಲು ಉತ್ತಮ ವಿಧಾನವೆಂದರೆ ಬೇಯಿಸಿದ ಬೀಜಗಳನ್ನು ಪೇಸ್ಟ್ ಮಾಡಿ ಅದನ್ನು ಕೂದಲಿಗೆ ಹಚ್ಚಿ ಸ್ವಲ್ಪ ಸಮಯದ ನಂತರ ಬಿಸಿ ನೀರಿನಿಂದ ತೊಳೆಯಿರಿ.
ಇನ್ನೊಂದು ವಿಧಾನವೆಂದರೆ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ಬೆಚ್ಚಗಿನ ತೆಂಗಿನ ಎಣ್ಣೆಯಲ್ಲಿ ನೆನಸಿ ಮರುದಿನ ಅದನ್ನು ಕೂದಲಿಗೆ ಹಚ್ಚಿ 5-10 ನಿಮಿಷಗಳ ಕಾಲ ಬಿಟ್ಟು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.