BBK11: ಒಂದಲ್ಲ, ಎರಡು ಮನೆ! ಈ ಸಲ ಕಂಪ್ಲೀಟ್ ಚೇಂಜ್‌ ಆದ ಬಿಗ್‌ ಬಾಸ್‌ ಕನ್ನಡ 11 ಮನೆ ಚಿತ್ರಣ ಇಲ್ಲಿದೆ ನೋಡಿ...

Tue, 24 Sep 2024-8:31 am,

ಬಿಗ್ ಬಾಸ್ ಸೀಸನ್ 11 ಮೇಲೆ ಜನರಿಗೆ ಹೊಸ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಈ ಸಲ ಬಿಗ್ ಬಾಸ್ ಆಟ ಬೇರೆ ರೀತಿಯೇ ಸಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 

ಪ್ರತಿ ಸಲ ಒಂದೇ ಮನೆಯಲ್ಲಿ ಗುಂಪುಗಳು ಇರುತ್ತಿದ್ದವು. ಆದರೆ ಈ ಬಾರಿ ಬಿಗ್‌ ಬಾಸ್‌ ಶುರುವಾಗುವಾಗಲೇ ಎರಡು ಮನೆಯಲ್ಲಿ ಎರಡು ಗುಂಪುಗಳಿರಲಿವೆ ಎನ್ನಲಾಗಿದೆ.

ಬಿಗ್‌ ಬಾಸ್‌ ಸೀಸನ್ 10 ರಲ್ಲಿ ಸಮರ್ಥರು ಮತ್ತು ಅಸಮರ್ಥರು ಎಂದು ಆರಂಭದಲ್ಲಿ ವಿಂಗಡಿಸಲಾಗಿತ್ತು. ಆದರೆ ಈ ಬಾರಿ ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್‌ ಮೇಲೆ ಶುರುವಾಗಲಿದೆ. 

ಈ ಸಲ ಮನೆ ಒಂದಲ್ಲ ಎರಡು ಎಂಬ ಮಾತುಗಳು ಕೇಳಿ ಬರುತ್ತಿದೆ. ಸ್ವರ್ಗಕ್ಕೆ ಒಂದು ಮನೆ ಇರಲಿದ್ದು, ಇಲ್ಲಿ ಸಕಲ ಸೌಕರ್ಯಗಳೂ ಸ್ಪರ್ಧಿಗಳಿಗೆ ಸಿಗಲಿವೆ. 

ನರಕಕ್ಕಾಗಿ ಇನ್ನೊಂದು ಮನೆ ಇರಲಿದ್ದು, ಇಲ್ಲಿ ಕೆಲವೇ ಕೆಲವು ಬೇಸಿಕ್‌ ಫೆಸಿಲಿಟಿ ಬಿಟ್ಟರೇ ಉಳಿದಂತೆ ನರಕಸದೃಶವಾಗಿಯೇ ಇರಲಿದೆ.

ಬಿಗ್ ಬಾಸ್ ವರ್ಷ ಕಳೆದಂತೆ ಹೊಸ ರಂಗು ಪಡೆಯುತ್ತಿದೆ. ಈ ಸಲ ಎರಡು ಮನೆ ಇರುತ್ತವೆ ಅನ್ನೋ ಹಿಂಟ್‌ನ್ನು ಬಿಗ್‌ಬಾಸ್ ಪ್ರೋಮೋದಲ್ಲಿಯೇ ಹೇಳಿದಂತೆ ಇದೆ. 

ಈ ಸಲದ ಇಡೀ ಬಿಗ್ ಬಾಸ್ ಕಾನ್ಸೆಪ್ಟ್ ಬೇರೆಯೇ ಇದ್ದಂತಿದೆ. ಇದು ಬಿಗ್‌ ಬಾಸ್‌ ಮನೆಯ ಕಿಚ್ಚು ಹೆಚ್ಚಿಸುತ್ತದೆ ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link