ಜನವರಿಯಲ್ಲಿಯೇ ಸರ್ಕಾರಿ ನೌಕರರ ಎಚ್ ಆರ್ ಎ ಪರಿಷ್ಕರಣೆ ! ನಿಗದಿಯಾಗಿದೆ ದಿನಾಂಕ ! ಹಾಗಿದ್ದರೆ ವೇತನದಲ್ಲಿನ ಹೆಚ್ಚಳ ಎಷ್ಟು ?
ಮುಂದಿನ ವರ್ಷದ ಆರಂಭದಲ್ಲಿ ಉದ್ಯೋಗಿಗಳಿಗೆ ಇನ್ನಷ್ಟು ಸಿಹಿ ಸುದ್ದಿಗಳು ಕಾಯುತ್ತಿವೆ. ಸಾಮಾನ್ಯವಾಗಿ, ಭತ್ಯೆ ದರ ಹೆಚ್ಚಾದಾಗ, ಮನೆ ಬಾಡಿಗೆ ಭತ್ಯೆ ಕೂಡಾ ಹೆಚ್ಚಾಗುತ್ತದೆ. ಆದರೆ, ಇದಕ್ಕೆ ಕೆಲವು ನಿಯಮಗಳಿವೆ. HRA ಯಾವಾಗ ಹೆಚ್ಚಾಗುತ್ತದೆ? ಇದಕ್ಕೆ ನಿಯಮವೇನು? ನೋಡೋಣ.
HRA ಅನ್ನು ಕೊನೆಯದಾಗಿ ಜುಲೈ 2021 ರಲ್ಲಿ ಪರಿಷ್ಕರಿಸಲಾಗಿತ್ತು. ತುಟ್ಟಿಭತ್ಯೆ ಶೇಕಡಾ 25 ಕ್ಕಿಂತ ಹೆಚ್ಚಾದಾಗ HRA ಶೇಕಡಾ 3 ರಷ್ಟು ಹೆಚ್ಚಿಸಲಾಯಿತು. ಈ ಹೆಚ್ಚಳದ ನಂತರ ಹೆಚ್ಆರ್ ಎ 27% ಕ್ಕೆ ಏರಿತು. ಇದೀಗ ಮತ್ತೆ ಮನೆ ಬಾಡಿಗೆ ಭತ್ಯೆ ಹೆಚ್ಚಿಸುವ ಮತ್ತೆ ಸಮಯ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆಯನ್ನು (ಎಚ್‌ಆರ್‌ಎ) ತುಟ್ಟಿಭತ್ಯೆ ಆಧಾರದ ಮೇಲೆ ಪರಿಷ್ಕರಿಸಲಾಗುವುದು. ಮನೆ ಬಾಡಿಗೆ ಭತ್ಯೆಯು X, Y ಮತ್ತು Z ವರ್ಗದ ನಗರಗಳ ವಿಭಾಗಗಳನ್ನು ಹೊಂದಿದೆ. ನಗರವಾರು ದರಗಳು 27%, 18% ಮತ್ತು 9%. ಆಗಿರುತ್ತದೆ. 2016ರಲ್ಲಿ ಸರಕಾರ ಹೊರಡಿಸಿರುವ ಜ್ಞಾಪನಾ ಪತ್ರದ ಪ್ರಕಾರ ಎಚ್‌ಆರ್‌ಎ ಮತ್ತು ಡಿಎಯನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುವುದು. HRA ಯ ಮುಂದಿನ ಪರಿಷ್ಕರಣೆಯು ಈಗ 2024 ರಲ್ಲಿ ನಡೆಯಲಿದೆ. ಅಂದರೆ ಮೊದಲ ತಿಂಗಳಲ್ಲಿಯೇ ಈ ಏರಿಕೆ ಆದರೂ ಅಚ್ಚರಿಯಿಲ್ಲ.
ಜನವರಿ 2024 ರಲ್ಲಿ, ತುಟ್ಟಿಭತ್ಯೆ 4% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಈ ಮೂಲಕ ಒಟ್ಟು ಡಿಎ 50% ತಲುಪುವ ನಿರೀಕ್ಷೆಯಿದೆ. AICPI ಡೇಟಾದಲ್ಲಿನ ಪ್ರವೃತ್ತಿಯು ಇದನ್ನೇ ಸೂಚಿಸುತ್ತದೆ. ಈ ಪ್ರಕಾರ ಮನೆ ಬಾಡಿಗೆ ಭತ್ಯೆಯಲ್ಲಿ ಮುಂದಿನ ಪರಿಷ್ಕರಣೆಯು ಶೇಕಡಾ 3 ಆಗಿರುತ್ತದೆ. HRA ಯ ಗರಿಷ್ಠ ದರವು ಪ್ರಸ್ತುತ ಗರಿಷ್ಠ ದರವಾದ 27% ರಿಂದ 30% ಕ್ಕೆ ಹೆಚ್ಚಾಗುತ್ತದೆ. ತುಟ್ಟಿಭತ್ಯೆ ಐವತ್ತು ಪ್ರತಿಶತವನ್ನು ಮೀರಿದಾಗ ಇದು ಸಂಭವಿಸುತ್ತದೆ. ಇದು ಜನವರಿ 2024 ರಲ್ಲಿ ಸಂಭವಿಸುವ ಎಲ್ಲಾ ಸಾಧ್ಯತೆಗಳಿವೆ.
7 ನೇ ವೇತನ ಆಯೋಗದ ಅನುಷ್ಠಾನದ ಸಮಯದಲ್ಲಿ, HRA ಅನ್ನು 30, 20 ಮತ್ತು 10 ಪ್ರತಿಶತದಿಂದ 24, 18 ಮತ್ತು 9 ಪ್ರತಿಶತಕ್ಕೆ ಇಳಿಸಲಾಯಿತು. ಅಲ್ಲದೆ X, Y ಮತ್ತು Z ಎಂಬ ಮೂರು ವಿಭಾಗಗಳನ್ನು ರಚಿಸಲಾಯಿತು. ಈ ವೇಳೆ ಡಿಎ ಶೂನ್ಯವಾಗಿತ್ತು. ತುಟ್ಟಿಭತ್ಯೆ 25% ಮೀರಿದಾಗ HRA ಅನ್ನು 27% ಗೆ ಮತ್ತು 50% ಮೀರಿದಾಗ HRA 30% ಗೆ ಪರಿಷ್ಕರಿಸಲಾಗುವುದು ಎಂದು ಆ ಸಮಯದಲ್ಲಿ DoPT ಅಧಿಸೂಚನೆ ಹೇಳಿದೆ.
ಎಕ್ಸ್ ವಿಭಾಗದಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಈ ನಗರಗಳಲ್ಲಿ ನೇಮಕಗೊಂಡ ಕೇಂದ್ರೀಯ ಉದ್ಯೋಗಿಗಳು ಶೇಕಡಾ 27 ರಷ್ಟು ಎಚ್‌ಆರ್‌ಎ ಪಡೆಯುತ್ತಾರೆ. ಆದರೆ, Y ವರ್ಗದ ನಗರಗಳಿಗೆ HRA 18% ಮತ್ತು Z ವರ್ಗದ ನಗರಗಳಿಗೆ HRA 9% ಆಗಿರುತ್ತದೆ.