Hubli Ganesh festival: ಹುಬ್ಬಳ್ಳಿಯಲ್ಲಿ ಸಡಗರ-ಸಂಭ್ರಮದ ಗಣೇಶೋತ್ಸವ, ಬಹುರೂಪಿ ಗಣಪನಿಗೆ ಬಹುಪರಾಕ್
ಪ್ರತಿವರ್ಷದಂತೆ ಈ ವರ್ಷವೂ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸಿಂಹಾಸನಾರೂಢ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಹುಬ್ಬಳ್ಳಿಯ ದಾಜಿಬಾನ್ ಪೇಟೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ‘ಹುಬ್ಬಳ್ಳಿ ಕಾ ಮಹಾರಾಜ’ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ. ಹುಬ್ಬಳ್ಳಿ ಕಾ ರಾಜ ಸರ್ಕಲ್ ಬಳಿಯೇ ಗಣಪತಿಯನ್ನು ಪ್ರತಿಷ್ಠಾಪಿಸಿದ್ದು, ಭಕ್ತರು ಬಹುಪರಾಕ್ ಹೇಳುತ್ತಿದ್ದಾರೆ.
ಹುಬ್ಬಳ್ಳಿಯ ದುರ್ಗದ ಬೈಲಿನಲ್ಲಿ ರಿದ್ಧಿ-ಸಿದ್ಧಿ ಸಹಿತ ದಂತ ಸಿಂಹಾಸನಾರೂಢ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಹುಬ್ಬಳ್ಳಿಯ ಪ್ರತಿಷ್ಠಿತ ಮೂರು ಸಾವಿರ ಮಠದ ಹತ್ತಿರ ಪ್ರತಿಷ್ಠಾಪಿಸಲಾಗಿರುವ ಗಣೇಶ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಹುಬ್ಬಳ್ಳಿಯ ಸಿಬಿಟಿ ಹತ್ತಿರ ಪ್ರತಿಷ್ಠಾಪಿಸಲಾಗಿರುವ ಗಣೇಶನ ಮೂರ್ತಿಯು ಜನರ ಗಮನ ಸೆಳೆಯುತ್ತಿದೆ.
ಹುಬ್ಬಳ್ಳಿಯ ಸಿಬಿಟಿ ಹತ್ತಿರ ಪ್ರತಿಷ್ಠಾಪಿಸಲಾಗಿರುವ ಒಂಟಿ ಗಾಲಿನಲ್ಲಿ ತಂಬೂರಿ ಮೇಲೆ ನಿಂತಿರುವ ಗಣಪತಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.