ಭಾರೀ ಕುಸಿತ ಕಂಡ ಬಂಗಾರ !ಇನ್ನೊಂದು ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಯಲಿದೆ ಹಳದಿ ಲೋಹ !ಕಾರಣ ಇದೇ
ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಫ್ಯೂಚರ್ ಮಾರುಕಟ್ಟೆ ಮತ್ತು ಚಿಲ್ಲರೆ ಮಾರುಕಟ್ಟೆ ಎರಡರಲ್ಲಿಯೂ ಬಂಗಾರದ ಬೆಲೆಯಲ್ಲಿ ಇಳಿಕೆ ದಾಖಲಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಉತ್ಕರ್ಷದ ನಡುವೆ, ಬಹು-ಸರಕು ವಿನಿಮಯದಲ್ಲಿ ಚಿನ್ನ ಬೆಳ್ಳಿ ಬೆಲೆ ಕುಸಿದಿದೆ. ಚಿನಿವಾರ ಪೇಟೆಯಲ್ಲಿಯಲ್ಲಿಯೂ ಬೆಲೆಗಳು ಕುಸಿದಿದೆ.
ಇಂದು ಬೆಳಗಿನ ಮಾರುಕಟ್ಟೆ ಆರಂಭವಾಗುತ್ತಿದ್ದ ಹಾಗೆಯೇ ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ ದಾಖಲಾಗಿದೆ. ಚಿನ್ನ ಮತ್ತು ಬೆಳ್ಳಿಯ ಕುಸಿತದ ನಂತರ, ಈ ಲೋಹಗಳನ್ನು ಖರೀದಿಸುವ ಯೋಚನೆ ನಿಮಗಿದ್ದರೆ ಬೆಲೆಗಳ ಬಗ್ಗೆಯೂ ತಿಳಿದುಕೊಳ್ಳಿ.
ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲರ್ಸ್ ಅಸೋಸಿಯೇಶನ್‌ನ ಅಧಿಕೃತ ವೆಬ್‌ಸೈಟ್‌ನ (ibjarates.com) ದರಗಳ ಪ್ರಕಾರ, ಇಂದು 999 ಶುದ್ಧತೆಯ 10 ಗ್ರಾಂ ಚೀನಾದ ಮೇಲೆ 556 ರೂ.ಇಳಿಕೆಯಾಗಿ 70 ,948 ರೂ.ಗೆ ಇಳಿದಿದೆ.
ಬೆಳ್ಳಿ ಬೆಲೆಯಲ್ಲಿ ಕೂಡಾ ಇಂದು 553 ರೂಪಾಯಿಗಳ ಕುಸಿತವನ್ನು ಕಂಡಿದೆ. ಈ ಮೂಲಕ ಬೆಳ್ಳಿ ಬೆಲೆ ಕೆಜಿಗೆ 87568 ರೂಪಾಯಿಗೆ ತಲುಪಿದೆ.
ತಜ್ಞರ ಪ್ರಕಾರ ಆಭರಣ ಉದ್ಯಮದಲ್ಲಿ ಮೊದಲ 4 ತಿಂಗಳು ಬಹಳ ಮುಖ್ಯವಾಗಿರುತ್ತದೆ. ಜನವರಿಯಿಂದ ಏಪ್ರಿಲ್ ವರೆಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ.
ಭೌಗೋಳಿಕ ರಾಜಕೀಯ ಪರಿಸ್ಥಿತಿಗಳಿಂದಾಗಿ ಚಿನ್ನದ ಬೆಲೆಗಳು ಚಂಚಲತೆಯನ್ನು ಕಾಣುತ್ತವೆ. ಹಾಗಾಗಿ ಚಿನ್ನದ ಬೆಲೆ ಗರಿಷ್ಟ ಮಟ್ಟದಲ್ಲಿ 80000 ಮತ್ತು ಕನಿಷ್ಠ ಮಟ್ಟದಲ್ಲಿ 68,000 ರೂಪಾಯಿಗೆ ಇಳಿಯುತ್ತದೆ.
ಇನ್ನು ಫೆಬ್ರವರಿ 2 ನೇ ತಾರೀಕು ಬಜೆಟ್ ಮಂಡನೆಯಾಗಲಿದ್ದು, ಚಿನ್ನದ ಬೆಲೆ ಇಳಿಕೆಗೆ ಸಂಬಂಧಿಸಿದಂತೆ ಹಲವು ನಿರೀಕ್ಷೆಗಳಿವೆ. ಕಳೆದ ಬಜೆಟ್ ನಲ್ಲಿ ಚಿನ್ನದ ಮೇಲಿನ ಕಸ್ಟಮ್ ಸುಂಕವನ್ನು ಇಳಿಸಲಾಗಿತ್ತು. ಅದೇ ರೀತಿ ಈಗಲೂ ಸರ್ಕಾರ ಪ್ರಮುಖ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.
ನಿಮ್ಮ ನಗದರಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳಲು ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲರ್ಸ್ ಅಸೋಸಿಯೇಶನ್‌ನ ಅಧಿಕೃತ ವೆಬ್‌ಸೈಟ್ ibjarates.com ಅನ್ನು ಚೆಕ್ ಮಾಡಬಹುದು.