ದಸರಾ ವೇಳೆಯೇ ಭಾರೀ ಕುಸಿತ ಕಂಡ ಚಿನ್ನದ ಬೆಲೆ ! ಇನ್ನು ಇಳಿಯುತ್ತಲೇ ಹೋಗುವುದಂತೆ ಬಂಗಾರದ ಬೆಲೆ
2007 ರಿಂದ ಮೊದಲ ಬಾರಿಗೆ, US ಬಾಂಡ್ ಗಳಿಕೆಯಲ್ಲಿ ಭಾರೀ ಹೆಚ್ಚಳವಾಗಿದೆ. ಇದರ ಪರಿಣಾಮ ಈಗ ಚಿನ್ನದ ಬೆಲೆಗಳ ಮೇಲೆ ಕಾಣಿಸುತ್ತಿದೆ. ಇದೀಗ ಜಾಗತಿಕ ಮಾರುಕಟ್ಟೆ ಹಾಗೂ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿದಿದೆ.
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ (ಸರಕುಗಳು) ಸೌಮಿಲ್ ಗಾಂಧಿ, ಪ್ರಕಾರ ಯುಎಸ್ ಬಾಂಡ್ ಗಳಿಕೆಯಲ್ಲಿನ ಹೆಚ್ಚಳದಿಂದಾಗಿ ಚಿನ್ನದ ಬೆಲೆಗಳು ಬಹು ತಿಂಗಳ ಗರಿಷ್ಠ ಮಟ್ಟದಿಂದ ಕಡಿಮೆಯಾಗಿದೆ.
ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇನ್ನು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಕುಸಿತ ಕಾಣಲಿದೆ ಎನ್ನುವ ಅಭಿಪ್ರಾಯ ತಜ್ಞರದ್ದು.
ಚಿನ್ನದ ಬೆಲೆಯಲ್ಲಿನ ಇಳಿಕೆಯ ನಂತರ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಎಷ್ಟು ನೋಡೋಣ. ದೆಹಲಿ - 56,350ರೂ., ಚೆನ್ನೈ - 56,600ರೂ. , ಬೆಂಗಳೂರು - 56,350ರೂ., ಹೈದರಾಬಾದ್ - 56,350ರೂ., ಕೋಲ್ಕತ್ತಾ - 56,350ರೂ., ಕೇರಳ - 56,350ರೂ.
ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ 1,977 ಡಾಲರ್‌ಗೆ ಕುಸಿದಿದೆ. ಬೆಳ್ಳಿಯ ಬೆಲೆಯೂ ಸಹ ಪ್ರತಿ ಔನ್ಸ್‌ಗೆ 23.20 ಡಾಲರ್ ಆಗಿದೆ.
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು.
ಸೂಚನೆ : ಈ ಮೇಲಿನ ದರಗಳನ್ನು ಈ ಸುದ್ದಿ ಬರೆಯುವ ಹೊತ್ತಿನ ಆಧಾರದ ಮೇಲೆ ನೀಡಲಾಗಿದೆ. ಬೇರೆ ಬೇರೆ ನಗರಗಳಿಗೆ ಅನುಗುಣವಾಗಿ ಚಿನ್ನದ ದರದಲ್ಲಿ ವ್ಯತ್ಯಾಸ ಕಂಡು ಬರಬಹುದು.