Gold Rate Today: ಚಿನ್ನದ ಬೆಲೆಯಲ್ಲಿ 12,000 ರೂಪಾಯಿ ಕುಸಿತ.. ಇಂದು 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!
ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮುಗಿದು ಟ್ರಂಪ್ ಗೆಲುವಿನ ನಗೆ ಬೀರಿದ್ದೇ ತಡ ಇತ್ತ ಚಿನ್ನಾಭರಣ ಪ್ರಿಯರ ಮೊಗದಲ್ಲೂ ಸಂತಸ ಕಾಣುತ್ತಿದೆ. ಇದಕ್ಕೆ ಕಾರಣ ಚಿನ್ನದ ಬೆಲೆ ಇಳಿಕೆ.
ದೀಪಾವಳಿ ಮುಗಿದಿದ್ದೇ ಬಂಗಾರದ ದರ ಪಾತಾಳಕ್ಕೆ ಕುಸಿಯುತ್ತಿದೆ. ಶೇರ್ ಮಾರುಕಟ್ಟೆ ಡೌನ್ ಇದ್ದರೂ ಬಂಗಾರದ ಬೆಲೆಯಲ್ಲಿ ಕುಸಿತ ಕಂಡು ಬಂದಿದ್ದು ಅಚ್ಚರಿ ಮೂಡಿಸುತ್ತಿದೆ.
ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದ್ದು ಜನರಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಒಂದೇ ದಿನ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 12,000 ರೂಪಾಯಿ ಇಳಿಕೆಯಾಗಿರುವುದು ಬಹುಶಃ ಇದೇ ಮೊದಲಿರಬಹುದೇನೋ. ಇಂದಿನ ಚಿನ್ನದ ಬೆಲೆ ಎಷ್ಟಿದೆ? ಪೂರ್ತಿ ಮಾಹಿತಿ ತಿಳಿಯೋಣ.
ಚಿನ್ನದ ಬೆಲೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಇಳಿಕೆಯಾಗುತ್ತಿದೆ. ದೀಪಾವಳಿ ಮತ್ತು ದಸರಾ ಹಬ್ಬದ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಗಗನಕ್ಕೇರಿತ್ತು. ಕಳೆದ 1 ವಾರದಲ್ಲಿ ಭರ್ಜರಿ ಇಳಿಕೆ ಕಂಡಿದೆ.
24 ಕ್ಯಾರಟ್‌ನ ಶುದ್ಧ ಅಪ್ಪಟ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ ಬರೋಬ್ಬರಿ 12,000 ರೂಪಾಯಿ ಕುಸಿತ ಕಂಡಿದೆ. 24 ಕ್ಯಾರಟ್‌ನ ಶುದ್ಧ ಚಿನ್ನದ ಬೆಲೆ ಕುಸಿತ ಕಂಡ ನಂತರ ಪ್ರತಿ 100 ಗ್ರಾಂಗೆ 7,56,500 ರೂಪಾಯಿ ಆಗಿದೆ.
22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲೂ ಭಾರೀ ಕುಸತ ಕಂಡಿದ್ದು, ಪ್ರತಿ 100 ಗ್ರಾಂಗೆ 6,93,500 ರೂಪಾಯಿ ಆಗಿದೆ.
ಇಂದು ಪ್ರತಿ 10 ಗ್ರಾಂಗೆ 24 ಕ್ಯಾರಟ್‌ನ ಶುದ್ಧ ಚಿನ್ನದ ಬೆಲೆ 73,739 ರೂಪಾಯಿ ಆಗಿದೆ. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10 ಗ್ರಾಂ ಗೆ 69,350 ರೂಪಾಯಿ ಆಗಿದೆ.
ಬೆಳ್ಳಿ ಬೆಲೆಯಲ್ಲೂ ಪ್ರತಿ 1 ಕೆಜಿಗೆ ಬರೋಬ್ಬರಿ 1500 ರೂಪಾಯಿ ಇಳಿಕೆಯಾಗಿದ್ದು, 89,500 ರೂಪಾಯಿ ಪ್ರತಿ ಕೆಜಿಗೆ ವಹಿವಾಟು ನಡೆಸುತ್ತಿದೆ.