ಅಮೆರಿಕಾ ಚುನಾವಣೆ ಬೆನ್ನಲ್ಲೇ ಪಾತಾಳಕ್ಕಿಳಿದ ಚಿನ್ನದ ದರ !ಇನ್ನೂ ಕೆಲ ದಿನಗಳವರೆಗೆ ಇಳಿಕೆಯಾಗಿಯೇ ಮುಂದುವರೆಯುವ ಸಾಧ್ಯತೆ !
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿಜಯದ ನಂತರ, ಡಾಲರ್ ಸೂಚ್ಯಂಕ ಮತ್ತು ಬಾಂಡ್ ಈಲ್ದ್ ನಲ್ಲಿ ತೀವ್ರ ಏರಿಕೆ ಕಾಣುತ್ತಿದೆ. ಇದರಿಂದಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಗಮನಾರ್ಹ ಕುಸಿತವನ್ನು ಕಾಣುತ್ತಿವೆ. ಫ್ಯೂಚರ್ ಮಾರುಕಟ್ಟೆಯಲ್ಲಿ ಚಿನ್ನ ಕುಸಿದರೆ, ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯಲ್ಲಿಯೂ ತೀವ್ರ ಕುಸಿತ ಕಂಡಿದೆ.
ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್‌ನ ಅಧಿಕೃತ ವೆಬ್‌ಸೈಟ್ ibjarates.com ನ ದರಗಳ ಪ್ರಕಾರ, 999 ಶುದ್ಧತೆಯ 10 ಗ್ರಾಂ ಚಿನ್ನದ ದರದಲ್ಲಿ ಇಂದು 1,580 ರೂ. ಇಳಿಕೆ ಕಂಡು ಬಂದಿದೆ.
ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಚಿನ್ನಕ್ಕೆ 249 ರೂಪಾಯಿ ಇಳಿಕೆಯಾಗಿ 10 ಗ್ರಾಂಗೆ 76,406 ರೂಪಾಯಿಗೆ ವಹಿವಾಟು ಮುಕ್ತಾಯವಾಗಿದೆ. ನಿನ್ನೆ 76,655 ರೂಪಾಯಿಗೆ ವಹಿವಾಟು ಮುಕ್ತಾಯವಾಗಿತ್ತು. ಬೆಳ್ಳಿ ಬೆಲೆ 573 ರೂಪಾಯಿ ಇಳಿಕೆಯಾಗಿ ಪ್ರತಿ ಕೆಜಿಗೆ 90,247 ರೂಪಾಯಿಗಳಿಗೆ ತಲುಪಿದೆ.
ಯುಎಸ್ ಚುನಾವಣಾ ಫಲಿತಾಂಶಗಳು ಚಿನ್ನದ ಬೆಲೆಯಲ್ಲಿ ಈರಿಲಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇನ್ನೊಂದಷ್ಟು ದಿನ ಬಂಗಾರದ ಬೆಲೆಯಲ್ಲಿ ಇಳಿಕೆ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಭಿನ್ನ ಶುದ್ಧತೆ ಹೊಂದಿರುವ ಚಿನ್ನದ ಪ್ರಮಾಣಿತ ಬೆಲೆಯು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ಪ್ರಕಟಿಸಿದ ಬೆಲೆಯಿಂದ ತಿಳಿಯುತ್ತದೆ. ಈ ಎಲ್ಲಾ ಬೆಲೆಗಳು ತೆರಿಗೆ ಮತ್ತು ಮೇಕಿಂಗ್ ಚಾರ್ಜ್ ಅನ್ನು ಒಳಗೊಂಡಿರುವುದಿಲ್ಲ.
ಚಿನ್ನಾಭರಣಗಳನ್ನು ಖರೀದಿಸುವಾಗ ಗ್ರಾಹಕರು ಪಾವತಿಸಬೇಕಾದ ಬೆಲೆಯು ತೆರಿಗೆಯನ್ನು ಒಳಗೊಂಡಿರುತ್ತದೆ. ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಬೆಲೆಯನ್ನು ಅಸೋಸಿಯೇಷನ್ ಚಿನ್ನದ ಬೆಲೆಯನ್ನು ಘೋಷಿಸುತ್ತಾರೆ.ಸಾರ್ವಜನಿಕ ರಜಾದಿನಗಳಲ್ಲಿ ಹೊಸ ದರಗಳನ್ನು ಘೋಷಿಸಲಾಗುವುದಿಲ್ಲ.