ಈ ರಾಶಿಯವರನ್ನು ಇನ್ನೆಂದೂ ಕಾಡದು ಹಣದ ಕೊರತೆ !ಗೆಲುವಿನ ಹಾದಿಯಲ್ಲಿಯೇ ಮುನ್ನಡೆಸುವನು ರಾಹು !
ಇನ್ನು ಮುಂದೆ ನಿಮ್ಮ ಬಳಿ ಕಷ್ಟ ಸುಳಿಯದಂತೆ ರಾಹು ಕಾಪಾಡುತ್ತಾನೆ. ರಾಹುವಿನ ಕೃಪೆಯಿಂದಲೇ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುವುದು. ಇನ್ನು ಮುಂದೆ ಆರಂಭ ಮಾಡುವ ಕೆಲಸದಲ್ಲಿ ಸೋಲುತ್ತೇವೆ ಎನ್ನುವ ಭಯ ಬೇಡ. ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ.
ಬಡ್ತಿ ಸಿಗುವ ಅವಕಾಶಗಳು ಹೆಚ್ಚಾಗುತ್ತವೆ. ನಿಮ್ಮ ಮನಸ್ಸಿನಲ್ಲಿ ಕಾಡುತ್ತಿದ್ದ ಗೊಂದಲ ದೂರವಾಗುವುದು. ವಿದೇಶಕ್ಕೆ ಹೋಗುವ ಅವಕಾಶ ದೊರೆಯಲಿದೆ
ಮನೆ, ವಾಹನ ಖರೀದಿ ಯೋಗವಿದೆ, ಸ್ವಲ್ಪ ಪ್ರಯತ್ನ ಪಟ್ಟರೆ ಎರಡೂ ಕನಸು ನನಸಾಗುವುದು. ಆಗುವುದೇ ಇಲ್ಲ ಎನ್ನುವಂಥಹ ಕೆಲಸಗಳು ಕೂಡಾ ಕೈ ಗೂಡುವುದು. ಆದಾಯದಲ್ಲಿಯೂ ಹಠಾತ್ ಹೆಚ್ಚಳವಾಗುವುದು.
ಹಣದ ಸಮಸ್ಯೆಯಿಂದ ಮುಕ್ತಿ ಸಿಗಲಿದೆ.ಸಾಲದ ಹೊರೆಯಿಂದ ಹೊರ ಬರುವಿರಿ.ಆರೋಗ್ಯ ಸಮಸ್ಯೆಯೂ ನಿವಾರಣೆಯಾಗುವುದು.
ಏನೇ ಕೆಲಸ ಮಾಡಿದರೂ ಗೆಲುವು ಕಟ್ಟಿಟ್ಟ ಬುತ್ತಿ. ಸೋಲು ಕಂಡು ಬೇಸತ್ತ ನೀವು ಇನ್ನು ಮುಂದೆ ಗೆಲುವಿನ ಹಾದಿಯಲ್ಲಿಯೇ ಹೆಜ್ಜೆ ಹಾಕುವಿರಿ. ಕಷ್ಟ ಕಳೆಯುವ ಕಾಲ ಇದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.