ಸರ್ಕಾರಿ ನೌಕರರಿಗೆ ಬಂಪರ್ !51 ಸಾವಿರದ 451 ರೂಪಾಯಿಗಳಿಗೆ ಏರಿಕೆಯಾಗುವುದು ಮೂಲವೇತನ !
8ನೇ ವೇತನ ಆಯೋಗದ ಬಗ್ಗೆ ಕೇಂದ್ರ ಸರ್ಕಾರಿ ನೌಕರರಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಅದರಲ್ಲೂ ಫಿಫಿಟ್ ಮೆಂಟ್ ಅಂಶದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ ಫಿಟ್‌ಮೆಂಟ್ ಅಂಶವು ಪ್ರಮುಖ ಅಂಶವಾಗಿದೆ. 7ನೇ ವೇತನ ಆಯೋಗದ ಶಿಫಾರಸಿನಂತೆ 2.57ರ ಫಿಟ್‌ಮೆಂಟ್ ಅಂಶವನ್ನು 2.57ಕ್ಕೆ ನಿಗದಿಪಡಿಸಲಾಗಿದೆ. ಇದರಿಂದಾಗಿ ನೌಕರರ ಕನಿಷ್ಠ ವೇತನ 7 ಸಾವಿರ ರೂಪಾಯಿಯಿಂದ 17 ಸಾವಿರದ 990 ರೂಪಾಯಿಗೆ ಏರಿಕೆಯಾಗಿತ್ತು.
ಇದೀಗ 8ನೇ ವೇತನ ಆಯೋಗವು ಫಿಟ್‌ಮೆಂಟ್ ಅಂಶವನ್ನು 2.86ಕ್ಕೆ ನಿಗದಿಪಡಿಸಲು ಶಿಫಾರಸು ಮಾಡಿದೆ. ಹೀಗಾದಾಗ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ 17 ಸಾವಿರದ 990 ರೂಪಾಯಿಗಳಿಂದ 51 ಸಾವಿರದ 451 ರೂಪಾಯಿಗಳಿಗೆ ಏರಿಕೆಯಾಗಲಿದೆ.
ಹಣದುಬ್ಬರ, ಬೆಲೆ ಏರಿಕೆ ಮತ್ತಿತರ ಕಾರಣಗಳನ್ನು ಪರಿಗಣಿಸಿ ಈ 8ನೇ ವೇತನ ಆಯೋಗದ ಫಿಟ್‌ಮೆಂಟ್ ಅಂಶವನ್ನು ಜಾರಿಗೊಳಿಸುವುದು ಅಗತ್ಯವಾಗಿದೆ ಎಂದು ಹೇಳಲಾಗಿದೆ.
ಆದರೆ, ಕನಿಷ್ಠ ವೇತನ 34,000 ರೂ.ನಿಂದ 35,000 ರೂ.ಗೆ ಏರಿಕೆಯಾಗಬಹುದು ಎಂದು ಕೂಡಾ ಕೆಲವರು ಹೇಳುತ್ತಾರೆ ಈ ಬಗ್ಗೆ ಸರ್ಜಾರ ಸ್ಪಷ್ಟ ನಿರ್ಧಾರ ನೀಡಬೇಕಿದೆ.
8 ನೇ ವೇತನ ಆಯೋಗವು 2026 ರಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ. ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದಾಗಿ 8ನೇ ವೇತನ ಆಯೋಗದ ಜಾರಿಗಾಗಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಕಾತರದಿಂದ ಕಾಯುತ್ತಿದ್ದಾರೆ.